ETV Bharat / state

ರಾಜ್ಯದಲ್ಲಿ ಮತ್ತೊಮ್ಮೆ 8 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ! - ಕರ್ನಾಟಕ ಕೊರೊನಾ ಅಪ್​ಡೇಟ್​,

ರಾಜ್ಯದಲ್ಲಿಂದು ಕೊರೊನಾ ಪ್ರಕರಣಗಳು ಮತ್ತೊಮ್ಮೆ 8 ಸಾವಿರ ಗಡಿದಾಟಿದ್ದು, 148 ಜನ ಇಂದು ಮೃತಪಟ್ಟಿದ್ದಾರೆ.

More then 8 thousand New corona cases reported,  More then 8 thousand New corona cases reported in Karnataka,  Karnataka corona update,  Karnataka corona update news,  8 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ,  ಕರ್ನಾಟಕದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ,  ಕರ್ನಾಟಕ ಕೊರೊನಾ ಅಪ್​ಡೇಟ್​,  ಕರ್ನಾಟಕ ಕೊರೊನಾ ಅಪ್​ಡೇಟ್​ ಸುದ್ದಿ,
ರಾಜ್ಯದಲ್ಲಿ ಮತ್ತೊಮ್ಮೆ 8 ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ
author img

By

Published : Aug 25, 2020, 8:13 PM IST

ಬೆಂಗಳೂರು: ರಾಜ್ಯದಲ್ಲಿಂದು ಮತ್ತೊಮ್ಮೆ ಸೋಂಕಿತರ ಸಂಖ್ಯೆ ಎಂಟು ಸಾವಿರ ಗಡಿದಾಟಿದೆ. ಇಂದು ಒಂದೇ ದಿನ 8161 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ 2,91,826ಕ್ಕೆ ಏರಿಕೆ ಆಗಿದೆ. ಇತ್ತ 6814 ಮಂದಿ ಗುಣಮುಖರಾಗಿದ್ದು, 2,04,439 ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ.

ಇನ್ನು ಸಕ್ರಿಯ 82,410 ಜನರಲ್ಲಿ 751 ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್​ನಿಂದಾಗಿ 148 ಮಂದಿ ಬಲಿಯಾಗಿದ್ದು, ಇಲ್ಲಿಯವರೆಗೆ ಒಟ್ಟು 4,958 ಮೃತರಾಗಿದ್ದಾರೆ. 19 ಜನರು ಅನ್ಯಕಾರಣದಿಂದ ಸಾವನ್ನಪ್ಪಿದ್ದಾರೆ.

ಸೋಂಕಿತರ ಸಂಪರ್ಕದಲ್ಲಿದ್ದ 3,53,017 ಜನರು ಹೋಂ ಕ್ವಾರೆಂಟೈನ್​ನಲ್ಲಿದ್ದಾರೆ. ಈವರಗೆ 25,13,555 ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ಮೂರು ಗಂಡಾಂತರದ ವರ್ಗಕ್ಕೆ ಕಡ್ಡಾಯ ಪರೀಕ್ಷೆ...

ಕೊರೊನಾವೈರಸ್ ಸೋಂಕು ನಗರಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಇಮ್ಮಡಿ ವೇಗದಲ್ಲಿ ಹರಡುತ್ತಿದೆ. ಪ್ರತಿ ದಕ್ಷ ಲಕ್ಷ ಜನರಿಗೆ 75,000 ರಿಂದ 1 ಲಕ್ಷದಷ್ಟು ಗಣನೀಯವಾಗಿ ಪ್ರಯೋಗ ಶಾಲಾ ಪರೀಕ್ಷೆಗಳ ಸಂಖ್ಯೆ ಕ್ರಮೇಣವಾಗಿ ಹೆಚ್ಚಿಸಬೇಕಿದೆ. ಕರ್ನಾಟಕವು 12% ರಷ್ಟು ಹೆಚ್ಚಿನ ಪರೀಕ್ಷಾ ದೃಢಪಟ್ಟ ಪ್ರಮಾಣವನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ.

ಸಂಶಯಾಸ್ಪದ ಲಕ್ಷಣಗಳಿರುವ ವ್ಯಕ್ತಿಗಳ ಪರೀಕ್ಷೆಯನ್ನು ಕಟ್ಟುನಿಟ್ಟಾದ ಟ್ರೇಸಿಂಗ್, ಟ್ರ್ಯಾಕಿಂಗ್ ಪ್ರಕ್ರಿಯೆಯನ್ನ ಬಲಪಡಿಸಲು ತಜ್ಞ ಸಮಿತಿ ಶಿಫಾರಸು ಮಾಡಿದೆ. ಹೀಗಾಗಿ ಪರೀಕ್ಷೆ ನಡೆಸುವಾಗ ಆದ್ಯತೆ ಮೇರೆಗೆ ಮೂರು ಗಂಡಾಂತರದ ವರ್ಗ ಮಾಡಿವೆ.

1. ಆದ್ಯತೆ- ಹೆಚ್ಚಿನ ಗಂಡಾಂತರ

  • SARI ಇರುವ ರೋಗಿಗಳು
  • ಕೋವಿಡ್-19 ಲಕ್ಷಣಗಳಿರುವ ವ್ಯಕ್ತಿಗಳು
  • ILI, ವಾಸನೆ ತಿಳಿಯದಿರುವಿಕೆ, ರುಚಿ ತಿಳಿಯದಿರುವಿಕೆ, ಶರೀರದಲ್ಲಿ ನೋವು, ದುರ್ಬಲತೆ, ಉಸಿರಾಟದಲ್ಲಿ ತೊಂದರೆ
  • ರೋಗ ಲಕ್ಷಣಗಳಿರುವ ಆರೋಗ್ಯ ಆರೈಕೆ ಸಿಬ್ಬಂದಿ
  • ಹೆಚ್ಚಿನ ಗಂಡಾಂತರಹದ/ಮೊದಲ ಸಂಪರ್ಕದವರು

2. ಆದ್ಯತೆ- ಮಧ್ಯಮ ಗಂಡಾಂತರ

  • ಕಂಟೈನ್ಮೆಂಟ್​ ಜೋನ್​ನಲ್ಲಿರುವ ವ್ಯಕ್ತಿಗಳು
  • ದೀರ್ಘಕಾಲೀನ ಆರೋಗ್ಯ ಸಮಸ್ಯೆ ಇರುವ ಹಿರಿಯರು ಮತ್ತು ಸುಲಭವಾಗಿ ರೋಗಕ್ಕೆ ತುತ್ತಾಗಬಹುದು ಜನಸಮುದಾಯ
  • ಇತರೆ ಸಹ ರೋಗಗಳಲ್ಲಿರುವ ವ್ಯಕ್ತಿಗಳು
  • ಕೋವಿಡ್ ಬಾಧಿತ ಪ್ರದೇಶಗಳಿಂದ ಪ್ರಯಾಣ ಮಾಡಿರುವ ಹಿನ್ನೆಲೆ ಇರುವವರು

3. ಆದ್ಯತೆ: ಕಡಿಮೆ ಗಂಡಾಂತರ

  • ಗರ್ಭಿಣಿಯರು
  • ಆಸ್ಪತ್ರೆಗಳ ಹೊರರೋಗಿ ವಿಭಾಗಕ್ಕೆ ಬರುತ್ತಿರುವವರು
  • ತರಕಾರಿ ಮಾರುಕಟ್ಟೆ ವ್ಯಾಪಾರಿಗಳು
  • ಬಸ್ ಕಂಡಕ್ಟರ್​ಗಳು/ಆಟೋಚಾಲಕರು
  • ಗುಂಪು ಸೇರುವ ಪ್ರದೇಶಗಳು: ಮಾರುಕಟ್ಟೆಗಳು, ಮಾlಲ್​ಗಳು, ಚಿಲ್ಲರೆ ಮಾರಾಟ ಅಂಗಡಿ, ಬಸ್ ನಿಲ್ದಾಣಗಳು, ರೈಲ್ವೇ ನಿಲ್ದಾಣ,
  • ಪೌರಕಾರ್ಮಿಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.