ETV Bharat / state

ಕಂತೆ ಕಂತೆ ಹಣ ನೋಡಿ ಬ್ಯಾಂಕ್ ಸಿಬ್ಬಂದಿಯೇ ಶಾಕ್: ಮುಂದೇನಾಯ್ತು?

ಹಣ ಡಿಪಾಸಿಟ್ ಮಾಡಲು ಕಂತೆ ಕಂತೆ ಹಣದೊಂದಿಗೆ ಬ್ಯಾಂಕಿಗೆ ಬಂದ ಮೂವರು ಪೊಲೀಸರ ಅತಿಥಿಯಾಗಿರುವ ಪ್ರಕರಣವೊಂದು ನೆಲಮಂಗಲದಲ್ಲಿ ನಡೆದಿದೆ.

ಬ್ಯಾಂಕ್​ ಸಿಬ್ಬಂದಿ
author img

By

Published : Jul 5, 2019, 12:59 PM IST

ನೆಲಮಂಗಲ: ಹಣ ಡಿಪಾಸಿಟ್ ಮಾಡಲು ಕಂತೆ ಕಂತೆ ಹಣ ತಂದಿದ್ದ ಮೂವರು ಪೊಲೀಸರ ಅತಿಥಿಯಾಗಿರುವ ಪ್ರಕರಣವೊಂದು ನಗರದಲ್ಲಿ ನಿನ್ನೆ ನಡೆದಿದೆ.

ನೆಲಮಂಗಲದ ಐಸಿಐಸಿಐ ಬ್ಯಾಂಕ್​ನಲ್ಲಿ 1 ಕೋಟಿ 90 ಲಕ್ಷ ರೂ. ಡಿಪಾಸಿಟ್ ಮಾಡಲು ನೋಂದಣಿ ಆಗದ ಸ್ಕೋಡಾ ಕಾರಿನಲ್ಲಿ ಬಂದ ಹರಿಹರ ಮೂಲದ ಪರೀಕ್ಷಿತ್ ನಾಯ್ಡು, ಗುರುಪ್ರಸಾದ್ ಮತ್ತು ರಂಗಸ್ವಾಮಿ ಎಂಬುವನ್ನು ಬಂಧಿಸಿದ್ದು ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ.

ಕಂತೆ ಕಂತೆ ಹಣ ನೋಡಿದ ಬ್ಯಾಂಕ್​ ಸಿಬ್ಬಂದಿ ಅನುಮಾನ ಬಂದಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾಮಮೂರ್ತಿ ನಗರದ ಐಸಿಐಸಿಐ ಬ್ಯಾಂಕ್​ನಲ್ಲಿ ಟ್ರಸ್ಟ್​ವೊಂದರ ಹೆಸರಿನಲ್ಲಿದ್ದ ಈ ಹಣವನ್ನು ನಕಲಿ ಚೆಕ್ ಸೃಷ್ಟಿಸಿ ಲಪಟಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

Three Accused Arrested
ಬಂಧಿತ ಆರೋಪಿಗಳು

ಲಪಟಾಯಿಸಿದ ಹಣವನ್ನು ಅದೇ ಬ್ಯಾಂಕ್​ನಲ್ಲಿ ಜಮೆಗೂ ಮುಂದಾಗಿದ್ದರು. 1.20 ಕೋಟಿ ರೂ. ಖಾತೆಗೆ ಜಮೆ ಆಗಿದ್ದು, ಇನ್ನುಳಿದ ಬಾಕಿ ಹಣ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಬಗ್ಗೆ ನೆಲಮಂಗಲ ಟೌನ್ ಮತ್ತು ರಾಮಮೂರ್ತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಮೂವರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಒಂದು ಕೋಟಿ 90 ಲಕ್ಷ ವಂಚನೆ ಪ್ರಕರಣ ಬಯಲು

ಮೂಲ ಖಾತೆದಾರನ ಮೊಬೈಲ್​ ಹ್ಯಾಕ್ ಮಾಡಿ ಈ ಪ್ರಮಾಣದ ಹಣವನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಿಹರ ಮೂಲದ ಪರೀಕ್ಷಿತ್ ನಾಯ್ಡು, ಗುರು ಪ್ರಸಾದ್ ಹಾಗೂ ರಂಗಸ್ವಾಮಿ ಪೊಲೀಸ್ ವಶದಲ್ಲಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Intro:ರೊಟ್ಟಿನ ಬಾಕ್ಸ್ ನಲ್ಲಿ ಹಣ ತುಂಬ್ಕೊಂಡ್ ಬ್ಯಾಂಕ್ ಬಂದ್ರು

ಕಂತೆ ಕಂತೆ ಹಣ ನೋಡಿ ಬ್ಯಾಂಕ್ ಸಿಬ್ಬಂದಿಯೇ ಶಾಕ್.

ಪೊಲೀಸರಿಗೆ ಬುಲಾವ್ ಬಯಲಾಯ್ತು ಒಂದು ಕೋಟಿ 90 ಲಕ್ಷ ವಂಚನೆ ಪ್ರಕರಣ.
Body:ನೆಲಮಂಗಲ : ಸಾಮಾನ್ಯವಾಗಿ ಬ್ಯಾಂಕ್ ಗ್ರಾಹಕರು ಬ್ಯಾಗ್ ನಲ್ಲಿ ಹಣ ತರ್ತಾರೆ. ಆದ್ರೆ ಈ ಅಸಾಮಿಗಳು ರೊಟ್ಟಿನ ಬಾಕ್ಸ್ ನಲ್ಲಿ ಹಣ ತುಂಬ್ಕೊಂಡ್ ಬಂದಿದ್ರು ಡಿಪಾಸಿಟ್ ಮಾಡಲು. ಕಂತೆ ಕಂತೆ ಹಣ ನೋಡಿ ಶಾಕ್ ಆದಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ಕೊಟ್ರು. ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು 1 ಕೋಟಿ 90 ಲಕ್ಷ ವಂಚನೆ ಪ್ರಕರಣ.

ಬೆಂಗಳೂರು ಹೊರವಲಯದ ನೆಲಮಂಗಲದ ಐಸಿಐಸಿಐ ಬ್ಯಾಂಕ್ ನಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. ನೋಂದಣಿ ಆಗದ ಸ್ಕೋಡಾ ಕಾರಿನಲ್ಲಿ ಹರಿಹರ ಮೂಲದ ಪರೀಕ್ಷಿತ್ ನಾಯ್ಡು, ಗುರುಪ್ರಸಾದ್ ಮತ್ತು ರಂಗಸ್ವಾಮಿ ಕಂತೆ ಕಂತೆ ಹಣ ತಗೊಂಡ್ ಡಿಪಾಸಿಟ್ ಮಾಡಲು ಬಂದಿದ್ರು. ಒಂದೇ ಬಾರಿಗೆ ಈ ಪ್ರಮಾಣ ಹಣ ನೋಡಿ ಬ್ಯಾಂಕ್ ಸಿಬ್ಬಂದಿಯೇ ಶಾಕ್ ಆಗಿದ್ರು. 1.90 ಕೋಟಿ ಹಣ ಜಮೆ ಮಾಡಲು ಹಣ ಎಣಿಸಲು ಸಾಕಷ್ಟು ಕಸರತ್ತು ಮಾಡ ಬೇಕಾಯಿತು. ಈ ಪ್ರಮಾಣದ ಹಣ ನೋಡಿ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.

ವಿಚಾರಣೆ ವೇಳೆ ಬೆಂಗಳೂರು ರಾಮಮೂರ್ತಿ ನಗರದ ಐಸಿಐಸಿಐ ಬ್ಯಾಂಕ್ ಒಂದ್ರಲ್ಲಿ ಬೈಲಹೊಂಗಲದಲ್ಲಿನ ದಮನ್ಜೀ ವಿಷನ್ ಫೌಂಡೇಷನ್ ಟ್ರಸ್ಟ್ ಹೆಸರಲ್ಲಿ ನಕಲಿ ಚೆಕ್ ಸೃಷ್ಠಿಸಿರೋ ಮಾಹಿತಿ ಬೆಳಕಿಗೆ ಬರುತ್ತದೆ. ಈಗಾಗಳೆ 1.20 ಕೋಟಿ ಅವರ ಖಾತೆಗೆ ಜಮೆ ಆಗಿದ್ದು, ಇನ್ನುಳಿದ ಬಾಕಿ ಹಣ ಪೊಲೀಸರಿಂದ ಮುಟ್ಟುಗೋಲು ಹಾಕಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ನೆಲಮಂಗಲ ಟೌನ್ ಮತ್ತು
ರಾಮಮೂರ್ತಿ ಠಾಣಾ ಪೊಲೀಸರಿಂದ ಮೂವರು ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ.

ದಮಾಂಗಿ ವಿಜುವಲ್ ಫೌಂಡೇಶ್‌ನ ಹೆಸರಿನಲ್ಲಿ ನಕಲಿ ಚೆಕ್ ತಯಾರಿಸಿ ಹಣ ಡ್ರಾ ಮಾಡಿಕೊಂಡಿರುವ ಮಾಹಿತಿ ತಿಳಿದು ಬಂದಿದೆ. ಕ್ಲಿಯರೆನ್ಸ್‌ಗಾಗಿ ರಾಮಮೂರ್ತಿ ನಗರದಿಂದ ಬೈಲಹೊಂಗಲಕ್ಕೆ ಚೆಕ್ ರವಾನ ಮಾಡಿ. ಹಣ ಡ್ರಾ ಮಾಡಲು ಮೂಲ ಖಾತೆದಾರನ ಮೊಬೈಲ್ ಹ್ಯಾಕ್ ಮಾಡಿದ್ದಾರೆ. ನಕಲಿ ಚೆಕ್ ಬಳಕೆ ಎಂದು ರಾಮಮೂರ್ತಿ‌ನಗರ ಐಸಿಐಸಿಐ ಬ್ಯಾಂಕ್‌ನಿಂದ ದೂರು ದಾಖಲಾಗಿದ್ದು
ರಾಮಮೂರ್ತಿ ನಗರ ಪೊಲೀಸರಿಂದ ಆರೋಪಿಗಳ ವಿಚಾರಣೆ ನಡೆಯುತ್ತಿದೆ.

ಇನ್ನೂ ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಪರೀಕ್ಷಿತ್ ನಾಯ್ಡು, ಗುರು ಪ್ರಸಾದ್, ಹಾಗೂ ರಂಗಸ್ವಾಮಿ ಪೊಲೀಸ್ ವಶದಲ್ಲಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಈ ಮೂವರು ಆರೋಪಿಗಳು ನಂಬರ್ ಪ್ಲೇಟ್ ಇಲ್ಲದ ಸ್ಕೋಡಾ ಕಾರಿನಲ್ಲಿ ಬಂದು ಬ್ಯಾಂಕ್ ನಲ್ಲಿ ವ್ಯವಹರಿಸುತ್ತಿದ್ದರು, ಸತತ ಐದು ಗಂಟೆಗಳು ಪೊಲೀಸರು ವಿಚಾರಣೆ ನಡಸಿದ್ದು, ಈ ಹಣದ ಹಿನ್ನಲೆಯೇನು ಎಂಬುದನ್ನು ಪೊಲೀಸರು ಹೆಚ್ಚೀನ ಪರಿಶೀಲನೆ ಕೈಗೆತ್ತುಕೊಂಡಿದ್ದಾರೆ. ರಾತ್ರಿ ಯಾದರೂ ಕಂತೆ ಕಂತೆ ಹಣವನ್ನು ಬ್ಯಾಂಕ್ ನ ಸಿಬ್ಬಂದಿ ಹಣ ಎಣಿಕೆ ಮಾಡುತ್ತಿರುವುದು ನೆಲಮಂಗಲ ನಾಗರಿಕರಲ್ಲಿ ಹೊಸ ಅಪರಾಧದ ಭಯ ಹುಟ್ಟಿಸಿದಂತಾಗಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.