ಬೆಂಗಳೂರು: ಕೋವಿಡ್ ವ್ಯಾಕ್ಸಿನ್ ಯಾವಾಗ ಬರುತ್ತೆ, ಯಾವಾಗ ಹಂಚಿಕೆಯಾಗುತ್ತೆ ಅನ್ನೋದರ ಬಗ್ಗೆ ಪ್ರಧಾನಿ ಮೋದಿ ಸೋಮವಾರ ಸಂಜೆ 4 ಗಂಟೆಗೆ ಉತ್ತರ ನೀಡುತ್ತಾರೆ ಅಂತಾ ಸಚಿವ ಸುಧಾಕರ್ ತಿಳಿಸಿದ್ದಾರೆ.
ಇಂದು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿ ವಿಡಿಯೋ ಸಂವಾದದ ಮೂಲಕ ದೇಶದ ಎಲ್ಲ ಆರೋಗ್ಯ ಸಚಿವಾಲಯದ ಪ್ರಧಾನ ಕಾರ್ಯದರ್ಶಿಗಳು, ಅಧಿಕಾರಿಗಳು ಸೇರಿದಂತೆ ಇತರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಲಸಿಕೆ ಸರಬರಾಜು, ಸಂಗ್ರಹಣೆ, ನೀಡುವಿಕೆ ಬಗ್ಗೆ ಸಂವಾದ ನಡೆಯುತ್ತಿದೆ. ಸೋಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರೊಂದಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದು, ಲಸಿಕೆ ವಿಚಾರವಾಗಿ ಮಾತಾನಾಡುತ್ತಾರೆ. ರಾಜ್ಯಕ್ಕೆ ಶೀಘ್ರದಲ್ಲೇ 13 ಲಕ್ಷದ 90 ಸಾವಿರ ಲಸಿಕೆ ಬರಲಿದೆ. ಹಾಗೂ ರಾಜ್ಯದಲ್ಲಿ ಬೆಂಗಳೂರು- ಹುಬ್ಬಳ್ಳಿಯ ಕೇಂದ್ರಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ ಅಂತ ತಿಳಿಸಿದರು. ಭಾರತದಲ್ಲಿ ಒಟ್ಟು 5,000 ಲಸಿಕೆ ಹಂಚಿಕೆ ಕೇಂದ್ರಗಳನ್ನು ಗುರುತಿಸಿದ್ದು, ಕರ್ನಾಟಕದಲ್ಲಿ 235 ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದರು.
ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಬೇಡ. ಎಲ್ಲಿಯೂ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲ. ಎಲ್ಲ ಹಕ್ಕಿಗಳ ಪರೀಕ್ಷೆ ಮಾಡಿಸಿದ್ದು, ನೆಗೆಟಿವ್ ವರದಿ ಬಂದಿದೆ ಅಂತಾ ಸ್ಪಷ್ಟ ಪಡಿಸಿದ್ದಾರೆ.