ETV Bharat / state

ನಮ್ಮ ದೇಶದ ಬಗ್ಗೆ ಮೂಗು ತೂರಿಸಲು ರಿಹಾನ್ನಾಗೆ ಹಕ್ಕಿಲ್ಲ: ಎಂಎಲ್​​​ಸಿ ರವಿ ಕುಮಾರ್​

author img

By

Published : Feb 4, 2021, 1:54 PM IST

ರೈತರ ಪ್ರತಿಭಟನಾ ಸ್ಥಳದಲ್ಲಿ ಅಂತರ್ಜಾಲ ಸ್ಥಗಿತಗೊಳಿಸುವಿಕೆಯನ್ನು ಟೀಕಿಸಿರುವ ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ರೈತರ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಇದಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕಿಡಿ ಕಾರಿದ್ದಾರೆ.

ರಿಹಾನ್ನಾ, ರವಿ ಕುಮಾರ್​
MLC Ravikumar outrage against Pop singer Rihanna

ಬೆಂಗಳೂರು: ನಮ್ಮ ದೇಶದ ಬಗ್ಗೆ ಮೂಗು ತೂರಿಸಲು ಪಾಪ್​ ತಾರೆ ರಿಹಾನ್ನಾಗೆ ಯಾವುದೇ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಕಿಡಿ ಕಾರಿದ್ದಾರೆ.

ವಿಧಾನಸೌಧದಲ್ಲಿ ದೆಹಲಿ ರೈತರ ಹೋರಾಟ ವಿಚಾರದಲ್ಲಿ ಪಾಪ್ ಗಾಯಕಿ ಹಸ್ತಕ್ಷೇಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟ ಇದು. ಗಣರಾಜ್ಯೋತ್ಸವ ದಿನ ಕೆಂಪುಕೋಟೆ ಮೇಲೆ ರಾಷ್ಟ್ರ ಧ್ವಜ ಕಿತ್ತು ಹಾಕಿ ಬೇರೆ ಧ್ವಜವನ್ನು ಹಾರಿಸಲಾಗಿದೆ. ನಮ್ಮ ದೇಶದ ಆಸ್ತಿ ನಷ್ಟ ಮಾಡಲಾಗಿದೆ. ಈ ಕುರಿತಂತೆ ವಿದೇಶಿ ಪಾಪ್ ಗಾಯಕಿ ರಿಹಾನ್ನಾ ಹೇಳಿಕೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓದಿ: ರೈತರ ಪ್ರತಿಭಟನೆಗೆ ಪಾಪ್​ ತಾರೆ ರಿಹಾನ್ನಾ ಬೆಂಬಲ... ಆಕೆ ಫೂಲ್ ಎಂದ ಕಂಗನಾ!

ಇವರೆಲ್ಲ ದೇಶದ್ರೋಹ ಮಾಡುತ್ತಿದ್ದಾರೆ. ನಮ್ಮ ದೇಶದ ನಟ, ನಟಿಯರು, ಕ್ರಿಕೆಟಿಗ ಸಚಿನ್ ಸೇರಿದಂತೆ ಎಲ್ಲರೂ ಖಂಡಿಸಿದ್ದಾರೆ. ನಮ್ಮ ದೇಶದ ಫೆಡರಲ್ ವ್ಯವಸ್ಥೆ ಖಂಡಿಸಲು ಅವರ್ಯಾರು. ನಮ್ಮ ದೇಶದ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯನ್ನು ಮೊದಲು ಖಂಡಿಸಬೇಕು. ಮುಖವಾಡ ಹಾಕಿಕೊಂಡಿರುವ ರೈತ ನಾಯಕರನ್ನು ಖಂಡಿಸುತ್ತೇನೆ. ಸಿದ್ದರಾಮಯ್ಯ ಕೂಡ ಇದನ್ನು ಖಂಡಿಸಬೇಕು. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.