ETV Bharat / state

ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಸಾವಿರಾರು ಜನರ ಘರ್​ವಾಪಸಿ.. ವ್ಯವಸ್ಥಿತ ಮತಾಂತರಕ್ಕೆ ಶಾಸಕ ಪಿ ರಾಜೀವ್ ಕಿಡಿ - ಮತಾಂತರವಾಗಿದ್ದ ಸಾವಿರಾರು ಜನರ ಘರ್​ವಾಪಸಿ

ಮತಾಂತರ ಆಗಿದ್ದ ಸಾವಿರಕ್ಕೂ ಹೆಚ್ಚು ಬಂಜಾರ ಸಮುದಾಯದ ಜನರನ್ನ ಘರ್​ವಾಪಸಿ ಮಾಡಲಾಗಿದೆ ಎಂದು ಶಾಸಕ ಪಿ.ರಾಜೀವ್​ ಹೇಳಿದರು

KN_BNG_
ಶಾಸಕ ಪಿ.ರಾಜೀವ್ ಸುದ್ದಿಗೋಷ್ಠಿ
author img

By

Published : Nov 21, 2022, 5:34 PM IST

Updated : Nov 23, 2022, 1:31 PM IST

ಬೆಂಗಳೂರು: ಬಂಜಾರ ಸಮುದಾಯದವನ್ನು ವ್ಯವಸ್ಥಿತವಾಗಿ ಮತಾಂತರ ಮಾಡುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ಕುಡಚಿ ಶಾಸಕ‌ ಪಿ.ರಾಜೀವ್ ಆರೋಪಿಸಿದರು.

ಶಾಸಕರ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 1,700 ಬಂಜಾರ ಕುಟುಂಬದವರನ್ನು ಘರ್​ವಾಪಸಿ ಮಾಡಿದ್ದೇವೆ. ಅಂಕಿಅಂಶಗಳ ಪ್ರಕಾರ ಬಹಳಷ್ಟು ಬಂಜಾರ ಜನರನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿವೆ. ಮತಾಂತರ ಆಗಿರುವ ಬಂಜಾರ ಜನರನ್ನು ಘರವಾಪಸಿ ಮಾಡಲಾಗಿದೆ ಎಂದು ತಿಳಿಸಿದರು.

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಭಾರತವನ್ನು ಹಿಂದೂ ಭೂಮಿ ಎಂದು ಕರೆಯುತ್ತೇವೆ. ಭಾರತಕ್ಕೆ ಇರುವ ಎರಡು ದೊಡ್ಡ ಸಮಸ್ಯೆ ಎಂದರೆ ಜಿಹಾದಿ ಮನಸ್ಥಿತಿ. ಎರಡನೇ ಸಮಸ್ಯೆ ಕ್ರೈಸ್ತ ಮಿಷನರಿಗಳ ಮತಾಂತರ. ವಿಕೃತ ಮನಸ್ಸಿನ ಮನಸ್ಥಿತಿಯವರು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಯಾಗಿ ಹಿಂದೂ ಅಶ್ಲೀಲ ಎಂದು ಹೇಳುವುದು ಹೇಗೆ ಸಾಧ್ಯ?. ಹಿಂದೂ ಮತಗಳನ್ನು ಪಡೆದು ಗೆಲ್ಲುತ್ತಾರೆ. ಆದರೆ ಅದೇ ಹಿಂದೂವನ್ನು ಅಶ್ಲೀಲ ಎಂದು ಕರೆಯುವ ದಾಷ್ಟ್ಯ ಬೆಳೆಸಿಕೊಂಡಿದ್ದಾರೆ. ಅಂತವರನ್ನು ವಿಕೃತಿ ಮನಸ್ಥಿತಿ ಎನ್ನುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ವಿರುದ್ಧ ಶಾಸಕ ಪಿ ರಾಜೀವ್​ ವಾಗ್ದಾಳಿ ‌ನಡೆಸಿದರು.

ನಮ್ಮ ಧರ್ಮಕ್ಕೆ ಧಕ್ಕೆ ಉಂಟಾದರೆ ಸುಮ್ಮನಿರಲ್ಲ: ಬಂಜಾರ ಸುಮುದಾಯದ ಸರ್ದಾರ್ ಸೇವಾಲಾಲ್​ ಸ್ವಾಮೀಜಿ ಮಾತನಾಡಿ, ನಬಾಡಾ ಮತ್ತು ಬಂಜಾರ ಸಮುದಾಯದ ಸಮಾವೇಶವನ್ನು ಮಹಾರಾಷ್ಟ್ರದಲ್ಲಿ ಆಯೋಜನೆ ಮಾಡಲಾಗಿದೆ. ಬಂಜಾರ ಸಮುದಾಯ ತನ್ನದೇ ಆದ ಸಂಸ್ಕೃತಿ ಹೊಂದಿದೆ. ದೇಶದಲ್ಲಿ 9 ಕೋಟಿ ಜನಸಂಖ್ಯೆಯನ್ನು ಬಂಜಾರ ಸಮುದಾಯವಿದೆ ಎಂದು ವಿವರಿಸಿದರು.

ನಮ್ಮ ಸಮುದಾಯದಲ್ಲಿ ಸಾಮರಸ್ಯ ಮೂಡಿಸಲು ಈ ಸಮಾವೇಶ ಮಾಡುತ್ತಿದ್ದೇವೆ. 2023ರ ಜನವರಿ 25 ರಿಂದ 30 ವರೆಗೆ ಧರ್ಮ ಸಮ್ಮೇಳನ ನಡೆಯಲಿದೆ. ಈಗಾಗಲೇ ಈ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದೆ. ನಮ್ಮ ಧರ್ಮಕ್ಕೆ ಧಕ್ಕೆ ಉಂಟಾದಾಗ ನಾವು ಸುಮ್ಮನೆ ಇರುವುದಿಲ್ಲ. ಮಹಾರಾಷ್ಟ್ರದಲ್ಲಿ ನಡೆಯಲಿರುವ ಸಮಾವೇಶಕ್ಕೆ ರಾಜ್ಯದಿಂದ 2 ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ. ನಮ್ಮ ಬಂಜಾರ ಸಮುದಾಯದ ಸಂಸ್ಕೃತಿಯನ್ನು ದೇಶಾದ್ಯಂತ ಪಸರಿಸಬೇಕು. ಅದಕ್ಕಾಗಿ ಮಹಾರಾಷ್ಟ್ರದಲ್ಲಿ ಸಮಾವೇಶ ನಡೆಸುತ್ತಿದ್ದೇವೆ ಎಂದರು.

ಇದನ್ನೂ ಓದಿ: ವಿಶ್ವಕರ್ಮರು ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದಾರೆ: ನಂಜುಂಡಿ ಆಘಾತಕಾರಿ ಹೇಳಿಕೆ

Last Updated : Nov 23, 2022, 1:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.