ETV Bharat / state

ವೈರಲ್​ ಆಗಿರುವ ಫೋಟೋ ನಮ್ಮದೇ, ಆದರೆ ಉದ್ದೇಶ ಬೇರೆ: ಶಾಸಕ ಮುರುಗೇಶ್ ನಿರಾಣಿ ಸ್ಪಷ್ಟನೆ - ಬಿಜೆಪಿ ಬಂಡಾಯ ಸುದ್ದಿ

ನಾವು ಶಾಸಕರು ಮಾತ್ರವಲ್ಲ ಸ್ನೇಹಿತರು ಕೂಡ. ಬೇರೆ ಪಕ್ಷದ ಶಾಸಕರ ಮನೆಗೂ ನಾವು ಹೋಗಿ ಬರೋದು ಸಹಜ. ಅದನ್ನು ರಹಸ್ಯ ಭೇಟಿ ಎಂದು ಫೋಟೋ, ವಿಡಿಯೋ ಎಂದು‌ ತೋರಿಸುವುದು ಸೂಕ್ತವಲ್ಲ ಎಂದು ಶಾಸಕ ಮುರುಗೇಶ್ ನಿರಾಣಿ ಹೇಳಿದ್ದಾರೆ.

fdff
ಶಾಸಕ ಮುರುಗೇಶ್ ನಿರಾಣಿ
author img

By

Published : May 31, 2020, 4:50 PM IST

ಬೆಂಗಳೂರು: ವೈರಲ್​ ಆಗಿರುವ ಫೋಟೋದಲ್ಲಿ ಇರುವುದು ನಾವೇ, ಅದು ನಮ್ಮ ಮನೆಯೇ. ಎರಡೂವರೆ ತಿಂಗಳ ಹಿಂದಿನ ಫೋಟೋ ಅದು. ಆದರೆ ನಾವ್ಯಾರೂ ಪಕ್ಷ ವಿರೋಧಿ‌ ಚಟುವಟಿಕೆ ನಡೆಸಲು ಸೇರಿದ್ದ ಸಭೆ ಅಲ್ಲವೆಂದು ಶಾಸಕ ಮುರುಗೇಶ್ ನಿರಾಣಿ ಸ್ಪಷ್ಟೀಕರಣ ನೀಡಿದ್ದಾರೆ.

ಶಾಸಕ ಮುರುಗೇಶ್ ನಿರಾಣಿ

ಮುರುಗೇಶ್ ನಿರಾಣಿ ನಿವಾಸದಲ್ಲಿ ಹಿರಿಯ ಶಾಸಕರಾದ ಉಮೇಶ್​ ಕತ್ತಿ, ಎಸ್​ ಎ ರಾಮದಾಸ್​ ಸಭೆ ಸೇರಿದ್ದರು, ಅಸಮಾಧಾನಿತರ ಗುಂಪು ಮಾಡಿಕೊಂಡಿದ್ದಾರೆ ಎಂದು ವರದಿ ಬರುತ್ತಿದೆ. ಒಂದು ಫೋಟೋ ಬಿತ್ತರಿಸಲಾಗುತ್ತಿದೆ. ಆದರೆ ಸರ್ಕಾರದ ಬದಲಾವಣೆ, ಯಡಿಯೂರಪ್ಪ ವಿರುದ್ಧ ಪಿತೂರಿಯಂತಹ ಚರ್ಚೆ ನಡೆದಿಲ್ಲ. ನಾವು ಮೈಸೂರು ಕಡೆ ಹೋದರೆ ಅವರ ಮನೆಗೆ ಹೋಗುತ್ತೇವೆ. ಅವರು ಬೆಂಗಳೂರಿಗೆ ಬಂದಾಗ ನಮ್ಮ ಮನೆಗೆ ಬರುತ್ತಾರೆ ಎಂದು ನಿರಾಣಿ ಹೇಳಿದ್ದಾರೆ.

ಉಮೇಶ್ ಕತ್ತಿ ಹಿರಿಯರು, ಮೊದಲನೇ‌ ಹಂತದಲ್ಲೇ ಅವರನ್ನು ಮಂತ್ರಿ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಿಲ್ಲ. ಮುಂದೆ ಸಂಪುಟ ವಿಸ್ತರಣೆ ವೇಳೆ ಸಚಿವರನ್ನಾಗಿ ಮಾಡಿ ಒಳ್ಳೆಯ ಖಾತೆ ಕೊಡಬೇಕೆಂದು ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರು, ರಾಷ್ಟ್ರೀಯ ನಾಯಕರಿಗೂ ವಿನಂತಿ ಮಾಡುತ್ತೇನೆ. ಪ್ರತಿ‌ ಶಾಸಕನಿಗೂ ಸಚಿವನಾಗುವ ಆಸೆ ಇದ್ದೇ ಇರುತ್ತದೆ. ಅದೇ ರೀತಿ ನನಗೂ ಇದೆ. ಆದರೆ ನನ್ನನ್ನು ಸಚಿವನನ್ನಾಗಿ ಮಾಡದಿದ್ದರೂ ಬೇಸರವಿಲ್ಲ, ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ನಿರಾಣಿ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.