ETV Bharat / state

ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿದ್ದರೆ ದೂರು ಕೊಡಿ: ಕುಮಾರಸ್ವಾಮಿಗೆ ರೇಣುಕಾಚಾರ್ಯ ಸವಾಲು - ಕುಮಾರಸ್ವಾಮಿಗೆ ರೇಣುಕಾಚಾರ್ಯ ಸವಾಲು

ದೇಣಿಗೆ ಸಂಗ್ರಹ ಮಾಡುವವರು ಅನುಮಾನಾಸ್ಪದವಾಗಿ ಕಂಡು ಬಂದರೆ ಪೊಲೀಸರಿಗೆ ದೂರು ಕೊಡಿ. ದೇಣಿಗೆಗಾಗಿ ಧಮ್ಕಿ ಹಾಕಿದ್ದರೆ, ಬಲವಂತ ಮಾಡಿದ್ದರೆ ಪಕ್ಷದ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಜನ ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ. ವಿನಾ ಕಾರಣ ವಿವಾದ ಸೃಷ್ಟಿಸಬೇಡಿ ಎಂದು ಹೆಚ್​​ಡಿಕೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದರು.

MLA MP Renukacharya
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ
author img

By

Published : Feb 17, 2021, 4:58 PM IST

ಬೆಂಗಳೂರು: ಕುಮಾರ ಸ್ವಾಮಿಯವ್ರೇ ನೀವ್ಯಾಕೆ ಸಂಘ ಪರಿವಾರದ ಕಾರ್ಯಕರ್ತರನ್ನು ಹಿಟ್ಲರ್​​ಗೆ ಹೋಲಿಸುತ್ತೀರಿ?. ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ. ಬಲವಂತವಾಗಿ ದೇಣಿಗೆ ಸಂಗ್ರಹ ಮಾಡುತ್ತಿದ್ದರೆ ದೂರು ಕೊಡಿ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸವಾಲೆಸೆದಿದ್ದಾರೆ.

ಎಂ.ಪಿ.ರೇಣುಕಾಚಾರ್ಯ

ವಿಧಾನಸೌಧದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮನೆಗಳಿಗೆ ಮಾರ್ಕ್ ಮಾಡುತ್ತಿದ್ದರೆ ಎಲ್ಲಿ ಅಂತ ತೋರಿಸಿ. ದಾಖಲೆ ಕೊಡಿ. ವಿಷಯಾಂತರ ಮಾಡಬೇಡಿ. ರಾಮ ಮಂದಿರ ನಿರ್ಮಾಣ ಬಹಳ ವರ್ಷಗಳ ಕನಸು. ಬಿಜೆಪಿ ಯಾವತ್ತೂ ವೋಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲ‌. ವಿನಾ ಕಾರಣ ಆರೋಪ ಮಾಡೋದು ಸರಿಯಲ್ಲ. ರಾಮ ಮಂದಿರ ದೇಣಿಗೆಯಲ್ಲಿ ಒಂದು ರೂಪಾಯಿ ಸಹ ವ್ಯತ್ಯಾಸ ಆಗಲ್ಲ‌. ನೀವೂ ದೈವ ಭಕ್ತರು. ನೀವು ಸಹ ರಾಮ ಮಂದಿರಕ್ಕೆ ಉದಾರವಾಗಿ ದೇಣಿಗೆ ಕೊಡಿ. ದೇಣಿಗೆ ಕೊಟ್ಟು ರಾಮನ ಕೃಪೆಗೆ ಪಾತ್ರರಾಗಿ ಎಂದು ಮನವಿ ಮಾಡಿದರು.

ಇಂತಹ ಹೇಳಿಕೆ ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ದೇಣಿಗೆ ಸಂಗ್ರಹ ಮಾಡುವವರು ಅನುಮಾನಾಸ್ಪದವಾಗಿ ಕಂಡು ಬಂದರೆ ಪೊಲೀಸರಿಗೆ ದೂರು ಕೊಡಿ. ದೇಣಿಗೆಗಾಗಿ ಧಮ್ಕಿ ಹಾಕಿದ್ದರೆ, ಬಲವಂತ ಮಾಡಿದ್ದರೆ ಪಕ್ಷದ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಜನ ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ. ವಿನಾ ಕಾರಣ ವಿವಾದ ಸೃಷ್ಟಿಸಬೇಡಿ ಎಂದರು.

ಅಹಿಂದ ಸಮಾವೇಶಕ್ಕೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ದೇಶ, ರಾಜ್ಯದಲ್ಲಿ ಸೋತು ಸುಣ್ಣವಾಗಿದೆ. ಕಾಂಗ್ರೆಸ್ ಅಹಿಂದ ಪರ ಇಲ್ಲ. ಬಿಜೆಪಿ ಅಹಿಂದ ವರ್ಗಕ್ಕೆ ಹಲವು ಉತ್ತಮ ಕೆಲಸ ಮಾಡಿಕೊಟ್ಟಿದೆ. ಬಿಜೆಪಿ ಮುಂದೆ ಕಾಂಗ್ರೆಸ್​​ನ ಅಹಿಂದ ಸಮಾವೇಶಗಳು ವರ್ಕೌಟ್ ಆಗಲ್ಲ. ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಅಧಿಕಾರಕ್ಕೆ ಬರುವುದೂ ಇಲ್ಲ ಎಂದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮನ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ನಮ್ಮ ರಾಜ್ಯದ ಉಸ್ತುವಾರಿಗಳು ಬಂದಾಗ ನಾವು ಭೇಟಿ ಮಾಡೋದು ಸಂಪ್ರದಾಯ. ಪ್ರಸ್ತುತ ವಿಚಾರಗಳ ಬಗ್ಗೆ ಅರುಣ್ ಸಿಂಗ್ ಜೊತೆ ಚರ್ಚೆ ಮಾಡುತ್ತೇವೆ. ಸಚಿವನಾಗಿಲ್ಲ ಅಂತ ಹಾದಿ ಬೀದಿಯಲ್ಲಿ ನಾನು ಮಾತಾನಾಡಲ್ಲ. ಪಕ್ಷದ ವೇದಿಕೆಯಲ್ಲಿ ಅದರ ಬಗ್ಗೆ ಮಾತಾನಾಡುತ್ತೇನೆ ಎಂದರು.

ಓದಿ: ನಿಮ್ಮ ರಾಜಕೀಯಕ್ಕಾಗಿ ರಾಮನ ಹೆಸರು ಬಳಸಿಕೊಳ್ತಿದ್ದೀರಾ.. ಮಾಜಿ ಸಿಎಂ ಹೆಚ್‌ಡಿಕೆ ತಿರುಗೇಟು

ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದಲ್ಲಿ ಪಕ್ಷ ತೀರ್ಮಾನ ಕೈಗೊಂಡಿದೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧ. ಯತ್ನಾಳ್ ನೋಟಿಸ್ ಸಿಕ್ಕಿಲ್ಲ ಅಂತ ಹೇಳ್ತಿರೋ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲವನ್ನೂ ಪಕ್ಷ ನಿರ್ಧರಿಸುತ್ತದೆ. ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಪಕ್ಷ ಎಲ್ಲವನ್ನೂ ಗಮನಿಸುತ್ತದೆ ಎಂದರು.

ಮೀಸಲಾತಿ ಹೋರಾಟಗಳ ವಿಚಾರ ಕುರಿತು ಮಾತನಾಡಿದ ಅವರು, ಧರ್ಮದ ತಳಹದಿ ಮೇಲೆ ನಂಬಿಕೆ ಇಟ್ಟಿರುವ ಪಕ್ಷ ನಮ್ಮದು. ಮೀಸಲಾತಿ ಬೇಕೆಂದು ಕನಕ ಪೀಠದ ಶ್ರೀಗಳು ಧರಣಿ ಮಾಡಿದ್ರು. ಅದಕ್ಕೆ ನಾನೂ ಬೆಂಬಲ ನೀಡಿದೆ. ಪಂಚಮಸಾಲಿ ಲಿಂಗಾಯತ ಸಮಾಜದ ಪ್ರತಿಭಟನೆಯಲ್ಲಿ ನಾನೂ ಪಾಲ್ಗೊಂಡು ಬೆಂಬಲಿಸಿದ್ದೆ. ವೀರಶೈವ ಲಿಂಗಾಯತ ಸಮುದಾಯದಲ್ಲಿ ಹಲವು ಒಳಪಂಗಡಗಳಿಗೆ ಮೀಸಲಾತಿ ಬೇಕಿದೆ. ಪಂಚಮಸಾಲಿ ಅವರಿಗೂ ಮೀಸಲಾತಿ ಕೊಡಲು ನಮ್ಮ ವಿರೋಧ ಇಲ್ಲ. ಹಾಗೆಯೇ ಸಮಾಜದ ಒಳಂಗಡಗಳಿಗೂ ಮೀಸಲಾತಿ ಕೊಡಲಿ. ಸಂವಿಧಾನಾತ್ಮಕವಾಗಿ ಚರ್ಚಿಸಿ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.