ETV Bharat / state

ನಾನೇನು ರೇಪ್ ಮಾಡಿದ್ನಾ ಎಂದ ಲಿಂಬಾವಳಿ... ಸ್ತ್ರೀಯರಿಗೆ ಮಾಡಿದ ಅವಮಾನ: ಕಾಂಗ್ರೆಸ್ ಆಕ್ರೋಶ

MLA Aravinda Limbavali abuses Woman: ಮಹಿಳೆಗೆ ಶಾಸಕ ಅರವಿಂದ್ ಲಿಂಬಾವಳಿ ಆವಾಜ್ ಹಾಕಿದ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಮಧ್ಯೆ ಲಿಂಬಾವಳಿ ಅವರು ನಾನು ರೇಪ್ ಮಾಡಿದ್ನಾ ಅಂತಾ ಹೇಳಿರುವುದು ವಿವಾದಕ್ಕೆ ಗುರಿಯಾಗಿದೆ.

ಮಹಿಳೆಗೆ ಶಾಸಕ ಅರವಿಂದ್ ಲಿಂಬಾವಳಿ ಆವಾಜ್
ಮಹಿಳೆಗೆ ಶಾಸಕ ಅರವಿಂದ್ ಲಿಂಬಾವಳಿ ಆವಾಜ್
author img

By

Published : Sep 3, 2022, 5:26 PM IST

Updated : Sep 3, 2022, 7:45 PM IST

ಬೆಂಗಳೂರು: ಮಹಿಳೆಯ ಮೇಲೆ ದರ್ಪ ತೋರಿದ್ದು ಮಾತ್ರವಲ್ಲದೆ ಮಾಧ್ಯಮಗಳ ಮುಂದೆ ನಾನೇನು ಅವಳನ್ನ ರೇಪ್ ಮಾಡಿದ್ದೀನಾ ಎಂದು ಹೇಳಿ ಶಾಸಕ ಅರವಿಂದ ಲಿಂಬಾವಳಿ ಉದ್ಧಟತನ ತೋರಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಾನೇನು ರೇಪ್ ಮಾಡಿದ್ನಾ ಅಂತಾ ಹೇಳಿದ್ದಾರೆ. ರೇಪ್ ಅನ್ನೋದು ಬರೀ ನಾಲ್ಕು ಅಕ್ಷರಗಳ ಪದವಲ್ಲ. ಅದನ್ನು ಬಳಸುವುದರಿಂದ ತಂದೆ, ತಾಯಿ, ಅಣ್ಣ ತಮ್ಮಂದಿರಿಗೆ ನೋವಾಗುತ್ತದೆ. ಆ ಪದವನ್ನು ಅಷ್ಟು ಸುಲಭವಾಗಿ ಹೇಗೆ ಬಳಸುತ್ತೀರಿ? ಅವರಿಗೆ ನಾಚಿಕೆ ಆಗಲ್ವಾ ಎಂದು ಪುಷ್ಪಾ ಅಮರನಾಥ್ ತರಾಟೆಗೆ ತೆಗೆದುಕೊಂಡಿದ್ದಾರೆ

ಮಹಿಳೆಗೆ ಲಿಂಬಾವಳಿ ಅವಮಾನ: ಕಾಂಗ್ರೆಸ್ ಆಕ್ರೋಶ

ಇಂದು ಅರವಿಂದ್ ಲಿಂಬಾವಳಿಯಿಂದ ಅಪಮಾನಕ್ಕೆ ಕೊಳಗಾದ ಕಾಂಗ್ರೆಸ್ ನಾಯಕಿ ರೂತ್ ಸಗಾಯ್ ಮೇರಿ ಮಾತನಾಡಿ, ನಮ್ಮ ಕಟ್ಟಡದ ಗೋಡೆಯನ್ನು ಒಡೆದು ಹಾಕುತ್ತಿದ್ದರು. ಅದನ್ನು ನೋಡಿ ಒಂದು ನೋಟಿಸ್ ಕೊಡಬೇಕಾಗಿತ್ತಲ್ಲ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಕೇಳಿದೆ. ಆಗ ಅವರು ಶಾಸಕರಿಂದ ಸೂಚನೆ ಬಂದಿದೆ ಅಂತಾ ಹೇಳಿದ್ರು. ನಮ್ಮ ಪ್ರಕಾರ ನಾವು ಅತಿಕ್ರಮಣ ಮಾಡಿಲ್ಲ. ನಮ್ಮ ದಾಖಲೇ ಪ್ರಕಾರ ಕಟ್ಟಡ ನಿರ್ಮಿಸಿದ್ದೇವೆ. ನಿಮ್ಮಲ್ಲಿ ದಾಖಲೆ ಇದ್ದರೆ ಕೊಡಿ, ಒತ್ತುವರಿ ಮಾಡಿದ್ದರೆ ತೆರವು ಮಾಡ್ತೇನೆ ಅಂತಾ ಹೇಳಿದ್ದೇನೆ. ಆದರೆ ಏಕಾಏಕಿ ನನ್ನಿಂದ ದಾಖಲೆಗಳನ್ನು ಕಿತ್ತುಕೊಳ್ಳಲು ಬಂದರು. ಜೊತೆಗೆ ಹೊಡಿರೋ ಅವಳಿಗೆ ಅಂತಾ ಜೊತೆಗಿದ್ದವರಿಗೆ ಸೂಚಿಸಿದರು ಎಂದು ತಿಳಿಸಿದರು.

ಕಾಂಗ್ರೆಸ್ ಟ್ವಿಟ್
ಕಾಂಗ್ರೆಸ್ ಟ್ವಿಟ್

ನಮ್ಮ ಮನೆಗೆ ಗೋಡೆ ಒತ್ತುವರಿ ಅಂತ ತೆರವು ಮಾಡಿದ್ರು. ನಮ್ಮ ದಾಖಲೆಗಳು ಸರಿ ಇದೆ. ಆದ್ರೆ ಡೆಮಾಲಿಷ್ ‌ಮಾಡುವ ಮುಂಚೆ ಒಂದು ನೋಟಿಸ್ ಕೊಟ್ಟಿಲ್ಲ. ಇದು ಸರ್ಕಾರಿ ‌ಜಮೀನು ಶಾಸಕರು ತೆರವು ಮಾಡೋಕೆ ಹೇಳಿದ್ರು ಅಂತಾ ಡೆಮಾಲಿಷ್ ‌ಮಾಡಿದ್ರು. ನಾನು ದಾಖಲೆ ತೋರಿಸೋಕೆ ಹೋದಾಗ ದಾಖಲೆ‌ ಕಿತ್ತುಕೊಂಡ್ರು. ಬಾಯಿಗೆ ಬಂದಂತೆ ನನಗೆ ಬೈದರು. ನಾನು ಮಹಿಳೆ ಸರ್ ಅಂತ ಅಂದೆ. ಏನ್ ಮಹಿಳೆ ನಾಚಿಕೆ‌ ಮಾನ‌ ಮರ್ಯಾದೆ ಇಲ್ವಾ ಅಂತ ಬೈದ್ರು. ನನ್ನ ಮೇಲೆ ಹಲ್ಲೆ ಮಾಡೋಕೆ ಬಂದ್ರು. ಲೇಡಿ ಪೊಲೀಸ್ ಕರೆಸಿ ಪೊಲೀಸ್ ಸ್ಟೇಷನ್​​ಗೆ ಕರ್ಕೊಂಡು ಹೋದ್ರು. ಆದ್ರೆ ಪೊಲೀಸರು ‌ಕೂಡ ಯಾವುದೇ ದೂರು ದಾಖಲಿಸಿಕೊಳ್ಳಲಿಲ್ಲ ಎಂದರು.

(ಇದನ್ನೂ ಓದಿ: ಮಳೆ ಹಾನಿ ಪ್ರದೇಶದ ವೀಕ್ಷಣೆ ವೇಳೆ ಮಹಿಳೆಗೆ ಗದರಿದ ಶಾಸಕ ಲಿಂಬಾವಳಿ.. ವಿಡಿಯೋ ವೈರಲ್​)

ಬೆಂಗಳೂರಿನ ವಿವಿಧ ಪ್ರದೇಶಗಳ ಮಳೆ ಹಾನಿ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಶಾಸಕ ಅರವಿಂದ್ ಲಿಂಬಾವಳಿ ಮಹಿಳೆಗೆ ಆವಾಜ್ ಹಾಕಿರುವುದು ಚರ್ಚೆಗೆ ಗುರಿಯಾಗಿದೆ. ಈ ಬಗ್ಗೆ ಮಹಿಳೆಯ ಕ್ಷಮೆ ಕೇಳುವಂತೆ ಕಾಂಗ್ರೆಸ್ ಆಗ್ರಹಿಸಿದೆ.

  • ಬಿಜೆಪಿ
    ◆ರೇಪ್ ಆರೋಪಿ ರಮೇಶ್ ಜಾರಕಿಹೊಳಿಯನ್ನೇ ಸಮರ್ಥಿಸಿಕೊಂಡಿದೆ
    ◆ಮೈಸೂರಿನ ರೇಪ್ ಸಂತ್ರಸ್ತೆಯನ್ನು ದೂಷಿಸಿದೆ
    ◆ಗುಜರಾತಿನಲ್ಲಿ ರೇಪಿಸ್ಟರನ್ನು ಸನ್ಮಾನಿಸಿದೆ
    ◆ಕಾಶ್ಮೀರದಲ್ಲಿ ರೇಪ್ ಆರೋಪಿಗಳ ಮೆರವಣಿಗೆಯನ್ನೇ ಮಾಡಿದೆ

    ಇಂತ #ಮಹಿಳಾವಿರೋಧಿಬಿಜೆಪಿ ಗೆ ಲಿಂಬಾವಳಿ ಮಾತು ಪ್ರಿಯವಾಗಬಹುದು, ಆದರೆ ರಾಜ್ಯದ ಮಹಿಳೆಯರಿಗೆ ಅದು ಅಸಹ್ಯವಾಗಿದೆ.

    — Karnataka Congress (@INCKarnataka) September 3, 2022 " class="align-text-top noRightClick twitterSection" data=" ">

ಈ ಬಗ್ಗೆ ಕ್ಷಮೆ ಕೇಳಲು ಸಿದ್ಧನಿದ್ದೇನೆ. ಆದರೆ ನಿಮ್ಮ ಪಕ್ಷದ ಇದೇ ಕಾರ್ಯಕರ್ತೆ ರೂತ್ ಸಗಾಯ್ ಮೇರಿ ಎಷ್ಟೋ ವರ್ಷಗಳಿಂದ ರಾಜಕಾಲುವೆ ಒತ್ತುವರಿ ಮಾಡಿ, ಜನರಿಗೆ ಸಮಸ್ಯೆಯುಂಟು ಮಾಡಿದ್ದಾರಲ್ಲ, ಅದನ್ನು ಖಾಲಿ ಮಾಡಲು ಹೇಳಿ. ನಿಮ್ಮ ಕಾರ್ಯಕರ್ತೆಯ ಮೊಂಡುತನವನ್ನು ಇಲ್ಲಿಗೇ ನಿಲ್ಲಿಸಲು ಹೇಳಿ ಎಂದು ಲಿಂಬಾವಳಿ ತಿರುಗೇಟು ನೀಡಿದ್ದಾರೆ.

(ಇದನ್ನೂ ಓದಿ: ಮಹಿಳೆಗೆ ಆವಾಜ್ ಹಾಕಿದ ಪ್ರಕರಣ: ಕ್ಷಮೆ ಕೇಳಲು ಸಿದ್ಧ ಎಂದು ಅರವಿಂದ್ ಲಿಂಬಾವಳಿ)

ಕಾಂಗ್ರೆಸ್ ಸರಣಿ ಟ್ವಿಟ್: ಸರಣಿ ಟ್ವಿಟ್ ಮೂಲಕ ತನ್ನ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್, ಅಹವಾಲು ಹೇಳಿಕೊಳ್ಳಲು ಬಂದ ಮಹಿಳೆಯ ಮೇಲೆ ದರ್ಪ ತೋರಿದ ಶಾಸಕ ಅರವಿಂದ್ ಲಿಂಬಾವಳಿಯ ವರ್ತನೆಯು ಬಿಜೆಪಿಯ ಜನವಿರೋಧಿ ಧೋರಣೆ, ದುರಹಂಕಾರ ಪರಮಾವಧಿಗೆ ತಲುಪಿರುವುದಕ್ಕೆ ಸಾಕ್ಷಿ. ಜನತೆಯ ಮೇಲೆ ದರ್ಪ ತೋರಿದ ಮಾತ್ರಕ್ಕೆ ನಿಮ್ಮ ಅಯೋಗ್ಯತನ ಮರೆಯಾಗುವುದಿಲ್ಲ. ಬಸವರಾಜ್ ಬೊಮ್ಮಾಯಿ ಅವರೇ, ನಿಮ್ಮ ಶಾಸಕರ ಈ ವರ್ತನೆ ನಿಮಗೆ ಸಹ್ಯವೇ? ಎಂದು ಪ್ರಶ್ನಿಸಿದೆ.

  • ತನ್ನದೇ ಮತಕ್ಷೇತ್ರದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದರೂ ಶಾಸಕ ಅರವಿಂದ್ ಲಿಂಬಾವಳಿ ವಿರುದ್ಧ ಕ್ರಮ ಜರುಗಿಸದೆ ನಾಲಿಗೆ ಉದ್ಧವಾಗಲು ಬಿಟ್ಟ ಮುಖ್ಯಮಂತ್ರಿ @BSBommai ಅವರು
    ಮಂಡಿಯೂರಿ ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು.

    ಬಿಜೆಪಿಗೆ ನಿಜಕ್ಕೂ ಮಹಿಳೆಯರ ಮೇಲೆ ಗೌರವ ಇದ್ದರೆ ಲಿಂಬಾವಳಿಯನ್ನು ವಜಾಗೊಳಿಸಿ ನಿರೂಪಿಸಲಿ.#ಮಹಿಳಾವಿರೋಧಿಬಿಜೆಪಿ

Last Updated : Sep 3, 2022, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.