ETV Bharat / state

ನಿಗಮ ಅಧ್ಯಕ್ಷಗಿರಿ ವಿಚಾರದಲ್ಲಿ ಬಿಎಸ್ವೈ, ಬೊಮ್ಮಾಯಿ ವೈಮನಸ್ಸು: ಬಳಿಗಾರ್ ನೇಮಕದ ಲೆಕ್ಕಾಚಾರವೇನು? - ಈಟಿವಿ ಭಾರತ ಕನ್ನಡ

ಜೆಡಿಎಸ್ ಮುಖಂಡ ಹೆಚ್.ಟಿ ಬಳಿಗಾರ್ ಅವರನ್ನು ಪಕ್ಷಕ್ಕೆ ಕರೆತಂದು ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಿ ವಿಜಯೇಂದ್ರರ ಚುನಾವಣಾ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ ಬಿಎಸ್​ವೈ ಸಫಲರಾಗಿದ್ದಾರೆ. ಈ ವಿಚಾರವೇ ಸಿಎಂ ಬೊಮ್ಮಾಯಿ ಮತ್ತು ಬಿಎಸ್​ವೈ ನಡುವೆ ಅಸಮಾಧಾನ ಉಂಟಾಗಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

misunderstanding-between-b-s-yadiyurappa-and-cm-basavaraja-bommai
Etv ನಿಗಮದ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಬಿಎಸ್ವೈ,ಬೊಮ್ಮಾಯಿ ನಡುವೆ ಅಸಮಾಧಾನ :ಬಳಿಗಾರ್ ನೇಮಕದ ಹಿಂದಿನ ಲೆಕ್ಕಾಚಾರವೇನು?
author img

By

Published : Dec 15, 2022, 9:33 PM IST

ಬೆಂಗಳೂರು: ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕ್ಷೇತ್ರವನ್ನು ಪುತ್ರನಿಗೆ ಭದ್ರ ಮಾಡಿಕೊಡುವ ನಿಟ್ಟಿನಲ್ಲಿ ಚಾಣಾಕ್ಷ ನಡೆ ಇರಿಸಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ಮುಖಂಡನನ್ನು ಪಕ್ಷಕ್ಕೆ ಕರೆತಂದು ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಿ ವಿಜಯೇಂದ್ರರ ಚುನಾವಣಾ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಈ ಬೆಳವಣಿಗೆ ಬಿಎಸ್ವೈ ಮತ್ತು ಬೊಮ್ಮಾಯಿ ನಡುವೆ ಸಣ್ಣ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ತವರು ಕ್ಷೇತ್ರ ಶಿಕಾರಿಪುರವನ್ನು ರಾಜಕೀಯವಾಗಿ ತಮ್ಮ ಕುಟುಂಬದ ಹಿಡಿತದಲ್ಲೇ ಇರಿಸಿಕೊಳ್ಳಲು ಮುಂದಾಗಿರುವ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಪ್ರತಿಸ್ಪರ್ಧಿಗೆ ಗಾಳ ಹಾಕಿ ಚುನಾವಣಾ ಪೂರ್ವದ ಆಪರೇಷನ್ ನಡೆಸಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಮಾಜಿ ಸಿಎಂ ಎಸ್.ಬಂಗಾರಪ್ಪ ನಿಕಟವರ್ತಿಯಾಗಿದ್ದ ಹೆಚ್.ಟಿ ಬಳಿಗಾರ್ ಕೆಎಎಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ನಂತರ ತಮ್ಮ ನಾಯಕ ಬಂಗಾರಪ್ಪ ಅವರ ಜೊತೆ ಜೆಡಿಎಸ್ ನಿಂದ ರಾಜಕೀಯ ಪ್ರವೇಶಿಸಿ ಶಿಕಾರಿಪುರದಲ್ಲಿ ಯಡಿಯೂರಪ್ಪ ವಿರುದ್ಧ ಸೆಣಸಿದ್ದರು. 2013 ರಲ್ಲಿ 15 ಸಾವಿರ ಮತ್ತು 2018 ರಲ್ಲಿ 13 ಸಾವಿರ ಮತಗಳಿಸಿದ್ದರು. ಶಿಕಾರಿಪುರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸಿ, ಶಕ್ತಿ ತುಂಬಿದ್ದರು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಪ್ರತಿಸ್ಪರ್ಧಿಯನ್ನೇ ಪಕ್ಷಕ್ಕೆ ಕರೆತಂದು ನಿಗಮದ ಜವಾಬ್ದಾರಿ ಕೊಟ್ಟಿದ್ದಾರೆ.

ವಿಧಾನಸಭೆ ಚುನಾವಣೆಗೆ ಐದು ತಿಂಗಳು ಮಾತ್ರ ಉಳಿದಿದೆ. ಎಲ್ಲಾ ಪಕ್ಷದಲ್ಲೂ ರಾಜಕೀಯ ಲೆಕ್ಕಾಚಾರಗಳು ಆರಂಭಗೊಂಡಿದ್ದು, ಚುನಾವಣಾ ರಣತಂತ್ರಗಳು ಸಿದ್ಧವಾಗುತ್ತಿದೆ. ಇದರ ಭಾಗವಾಗಿಯೇ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರ ಹಾದಿ ಸುಗುಮಗೊಳಿಸಲು ಬಳಿಗಾರ್ ಅವರನ್ನು ಕಳೆದ ತಿಂಗಳು ಪಕ್ಷಕ್ಕೆ ಕರೆತಂದು ಇಂದು ಆಯಕಟ್ಟಿನ ಜಾಗದಲ್ಲಿ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಯಡಿಯೂರಪ್ಪ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಈ ಬಾರಿ ಎರಡನೇ ಪುತ್ರ ಬಿ.ವೈ ವಿಜಯೇಂದ್ರ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಅದನ್ನು ಬಹಿರಂಗವಾಗಿ ಘೋಷಿಸಿಯೂ ಆಗಿದೆ. ಈ ಬಾರಿ ಪುತ್ರನ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಹಾಗಾಗಿ ಹೆಚ್.ಟಿ.ಬಳಿಗಾರ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದರೆ, ಹೆಚ್ಚಿನ ಪ್ರಮಾಣದ ಮತ ಸೆಳೆಯುವ ಸಾಧ್ಯತೆ ಇದೆ. ಇದು ಬಿಜೆಪಿಯ ಮತ ಗಳಿಕೆ ಮೇಲೆ ಪ್ರಭಾವ ಉಂಟು ಮಾಡುವ ಸಂಭವವಿತ್ತು ಎನ್ನಲಾಗಿದೆ.

ಈ ಬಗ್ಗೆ ಇದ್ದ ಮಾಹಿತಿಗಳ ಆಧಾರದಿಂದಾಗಿಯೇ ಹೆಚ್.ಟಿ.ಬಳಿಗಾರ್ ಅವರನ್ನು ಬಿಜೆಪಿಗೆ ಸೆಳೆಯುವ ಸಂಬಂಧ ಸರಣಿ ಸಭೆಗಳನ್ನು ನಡೆಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಜೊತೆ ಬಳಿಗಾರ್ ಸಭೆ ನಡೆಸಿದ್ದರು. ಶಿರಾಳಕೊಪ್ಪ, ಶಿಕಾರಿಪುರದಲ್ಲಿ ಬೆಂಬಲಿಗರ ಸಭೆ ನಡೆಸಿದ ಬಳಿಕ ಹೆಚ್.ಟಿ.ಬಳಿಗಾರ್ ಅವರು ಬಿಜೆಪಿ ಸೇರ್ಪಡೆಯಾದರು.

ಷರತ್ತು ಪೂರೈಕೆ ವಿಚಾರದಲ್ಲೇ ಬಿಎಸ್​ವೈ-ಬೊಮ್ಮಾಯಿ ನಡುವೆ ಮನಸ್ತಾಪ?: ಬಳಿಗಾರ್ ಪಕ್ಷ ಸೇರ್ಪಡೆಗೆ ನಿಗಮದ ಆಶ್ವಾಸನೆ ಕೊಡಲಾಗಿತ್ತು. ಅದರಂತೆ ಇಂದು ಅವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಷರತ್ತು ಪೂರೈಕೆ ವಿಷಯದಲ್ಲಿಯೇ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ತಮ್ಮ ಆಪ್ತರಾಗಿದ್ದ ಯು.ಬಿ ಬಣಕಾರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಿಗಮದ ಅಧ್ಯಕ್ಷ ಸ್ಥಾನವನ್ನೇ ಬಳಿಗಾರ್ ಗೆ ನೀಡುವಂತೆ ಸಿಎಂಗೆ ತಿಳಿಸಿದ್ದರು. ಆದರೆ ಸಿಎಂ ಈಗ ಒಂದು ನಿಗಮದ ನೇಮಕಕ್ಕೆ ಮುಂದಾದರೆ ಅಸಮಾಧಾನ ಸೃಷ್ಟಿಯಾಗಬಹುದು ಎನ್ನುವ ಆತಂಕ ವ್ಯಕ್ತಪಡಿಸಿ ನೇಮಕವನ್ನು ವಿಳಂಬ ಮಾಡಿದರು. ಆದರೆ ಇದರಿಂದ ಯಡಿಯೂರಪ್ಪ ಅಸಮಾಧಾನಗೊಂಡಿದ್ದರು. ಒಂದು ನಿಗಮ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಈ ರೀತಿ ಕಡೆಗಣಿಸಲಾಗಿದೆ ಎಂದು ಬೇಸರಗೊಂಡಿದ್ದರು ಎನ್ನಲಾಗಿದೆ.

ಈ ವಿಷಯದ ಬಗ್ಗೆ ಇಂದು ಜೆಪಿ ನಡ್ಡಾ ಸಿಎಂ ಬೊಮ್ಮಾಯಿ, ಕಟೀಲ್ ಗೆ ಕೆಲವೊಂದು ಸೂಚನೆ ನೀಡಿದ್ದು, ಯಡಿಯೂರಪ್ಪ ಕಡೆಗಣನೆಯಂತಹ ಕೆಲಸ ಮಾಡದಂತೆ ತಾಕೀತು ಮಾಡಿದ್ದಾರೆ. ಕೂಡಲೇ ಬಣಕಾರ್ ಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಲಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಪವರ್ ಕ್ಯಾನ್ಸರ್ ಶುರುವಾಗಿದೆ: ಬಿಜೆಪಿ ಟ್ವೀಟ್​ ಟೀಕಾಸ್ತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.