ಬೆಂಗಳೂರು: ಕೊರೊನಾ ಮಾಹಿತಿ ನಿರ್ವಹಣೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ನೇಮಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇಲಾಖೆಗೆ ಸಂಬಂಧ ಪಡದ, ಸಂಸದೀಯ ಖಾತೆಯೂ ಇಲ್ಲದ ಸುರೇಶ್ ಕುಮಾರ್ ಅವರನ್ನು ಕೋವಿಡ್-19 ಸೋಂಕು ನಿರ್ವಹಣಾ ಜವಾಬ್ದಾರಿ ನೀಡಿದ ಮುಖ್ಯಮಂತ್ರಿಗಳ ನಡೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಪ್ರಶ್ನಿಸಿದ್ದಾರೆ.
-
ಕರೊನಾ ಮಾರಿಯಿಂದ ಕ್ವಾರೆಂಟೈನ್ ವ್ಯವಸ್ಥೆ ಪರಿಚಯವಾಗಿದೆ. ಇದು ಎಂತಹ ವಿಪರ್ಯಾಸ? ನಮ್ಮ ಮುಖ್ಯಮಂತ್ರಿ ರಾಜ್ಯದ ಆರೋಗ್ಯ ಮತ್ತು ಆರೋಗ್ಯ ಶಿಕ್ಷಣ ಸಚಿವರನ್ನೇ ಕ್ವಾರೆಂಟೈನ್ ನಲ್ಲಿ ಇಟ್ಟು ಕರೊನಾ ಮಾಹಿತಿ ನಿರ್ವಹಣೆ ಜವಾಬ್ದಾರಿ ಸುರೇಶ್ ಕುಮಾರ್ ಗೆ ನೀಡಿದ್ದಾರೆ
— Ramesh Babu (@rameshbabuexmlc) April 4, 2020 " class="align-text-top noRightClick twitterSection" data="
ಇವರನ್ನು ಕ್ವಾರೆಂಟೈನ್ ನಲ್ಲಿ ಇಡಲು ಮುಖ್ಯಮಂತ್ರಿಗೆ ಬಂದ ಅನುಮಾನಏನು ತಿಳಿಸಿ
">ಕರೊನಾ ಮಾರಿಯಿಂದ ಕ್ವಾರೆಂಟೈನ್ ವ್ಯವಸ್ಥೆ ಪರಿಚಯವಾಗಿದೆ. ಇದು ಎಂತಹ ವಿಪರ್ಯಾಸ? ನಮ್ಮ ಮುಖ್ಯಮಂತ್ರಿ ರಾಜ್ಯದ ಆರೋಗ್ಯ ಮತ್ತು ಆರೋಗ್ಯ ಶಿಕ್ಷಣ ಸಚಿವರನ್ನೇ ಕ್ವಾರೆಂಟೈನ್ ನಲ್ಲಿ ಇಟ್ಟು ಕರೊನಾ ಮಾಹಿತಿ ನಿರ್ವಹಣೆ ಜವಾಬ್ದಾರಿ ಸುರೇಶ್ ಕುಮಾರ್ ಗೆ ನೀಡಿದ್ದಾರೆ
— Ramesh Babu (@rameshbabuexmlc) April 4, 2020
ಇವರನ್ನು ಕ್ವಾರೆಂಟೈನ್ ನಲ್ಲಿ ಇಡಲು ಮುಖ್ಯಮಂತ್ರಿಗೆ ಬಂದ ಅನುಮಾನಏನು ತಿಳಿಸಿಕರೊನಾ ಮಾರಿಯಿಂದ ಕ್ವಾರೆಂಟೈನ್ ವ್ಯವಸ್ಥೆ ಪರಿಚಯವಾಗಿದೆ. ಇದು ಎಂತಹ ವಿಪರ್ಯಾಸ? ನಮ್ಮ ಮುಖ್ಯಮಂತ್ರಿ ರಾಜ್ಯದ ಆರೋಗ್ಯ ಮತ್ತು ಆರೋಗ್ಯ ಶಿಕ್ಷಣ ಸಚಿವರನ್ನೇ ಕ್ವಾರೆಂಟೈನ್ ನಲ್ಲಿ ಇಟ್ಟು ಕರೊನಾ ಮಾಹಿತಿ ನಿರ್ವಹಣೆ ಜವಾಬ್ದಾರಿ ಸುರೇಶ್ ಕುಮಾರ್ ಗೆ ನೀಡಿದ್ದಾರೆ
— Ramesh Babu (@rameshbabuexmlc) April 4, 2020
ಇವರನ್ನು ಕ್ವಾರೆಂಟೈನ್ ನಲ್ಲಿ ಇಡಲು ಮುಖ್ಯಮಂತ್ರಿಗೆ ಬಂದ ಅನುಮಾನಏನು ತಿಳಿಸಿ
ಈ ಸಂಬಂಧ ಟ್ವೀಟ್ ಮಾಡಿರುವ ರಮೇಶ್ ಬಾಬು, ನಮ್ಮ ರಾಜ್ಯದ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರನ್ನೇ ಕ್ವಾರಂಟೈನ್ನಲ್ಲಿ ಇಟ್ಟು ಕೊರೊನಾ ಮಾಹಿತಿ ನಿರ್ವಹಣೆ ಜವಾಬ್ದಾರಿಯನ್ನು ಸುರೇಶ್ ಕುಮಾರ್ಗೆ ವಹಿಸಿದ್ದಾರೆ. ಇವರನ್ನು ಕ್ವಾರಂಟೈನ್ನಲ್ಲಿಡಲು ಮುಖ್ಯಮಂತ್ರಿಗೆ ಬಂದ ಅನುಮಾನವೇನು? ಎಂದು ಪ್ರಶ್ನಿಸಿದ್ದಾರೆ.
ಇದರ ಜೊತೆಗೆ ಕೊರೊನಾದಿಂದ ರಾಜ್ಯದ ಜನ ತತ್ತರಿಸಿರುವಾಗ ಸರ್ಕಾರದಿಂದ ಸಹಜವಾಗಿ ಪರಿಹಾರ ಬಯಸುತ್ತಾರೆ. ಈ ಸಂದರ್ಭದಲ್ಲಿ ನಿಮ್ಮ ಗುಂಪುಗಾರಿಕೆ ನಮಗೆ ಅನಾವಶ್ಯಕ. ಇದ್ದರೂ ಅದು ನಿಮ್ಮ ನಿಮ್ಮಲ್ಲೇ ಬಗೆಹರಿಯಲಿ. ಕೊರೊನಾ ವಿರುದ್ಧ ಸರ್ಕಾರದ ಜೊತೆಗೆ ಜನಸಾಮಾನ್ಯರೂ ಕೈಜೋಡಿಸಿದ್ದಾರೆ. ಮುಖ್ಯಮಂತ್ರಿಗಳು ಎಲ್ಲಾ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.