ಬೆಂಗಳೂರು : ಅಕ್ಟೋಬರ್ ತಿಂಗಳಲ್ಲಿ ಮಕ್ಕಳಿಗೂ ಲಸಿಕೆ ಬರಲಿದೆ. ಎಲ್ಲರಿಗೂ ಪೂರ್ಣ ಪ್ರಮಾಣದ ಲಸಿಕೆ ಸಿಗುವವರೆಗೆ ಸಭೆ-ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಜೈಡಸ್ ಕ್ಯಾಡಿಲಾ ಫೇಸ್-3 ವ್ಯಾಕ್ಸಿನೇಷನ್ ಆರಂಭವಾಗಲಿದೆ. ಕೇಂದ್ರ ದರ ನಿಗದಿಪಡಿಸಲಿದೆ. ಸದ್ಯ ಮಾರ್ಗಸೂಚಿ ಅನ್ವಯ ಶಾಲೆ ಆರಂಭಗೊಂಡಿವೆ. ಶೇ.10ರಷ್ಟು ಮಕ್ಕಳಿಗೆ ಟೆಸ್ಟ್ ಮಾಡಬೇಕು ಅಂತಾ ಸೂಚಿಸಿದ್ದೇನೆ. ಮಕ್ಕಳಲ್ಲಿ ಶೇ.0.008ರಷ್ಟು ಮಾತ್ರ ಸೋಂಕಿದೆ ಎಂದರು.
ನೈಟ್ ಕರ್ಫ್ಯೂ ಸಡಲಿಕೆ ವಿಚಾರ : ಸಿನಿಮಾ ಮಂದಿರಗಳಿಗೆ ಶೇ.100ರಷ್ಟು ಅವಕಾಶ ನೀಡಲಾಗಿದೆ. ಅದನ್ನ ಹೊರತುಪಡಿಸಿದರೆ ಕೆಲ ನಿರ್ಬಂಧ ಮಾತ್ರ ಇದೆ. ಎರಡು ಡೋಸ್ ಸಂಪೂರ್ಣ ಕೊಡುವವರೆಗೂ ಯಾವುದೇ ರೀತಿಯ ಸಮಾರಂಭ ಮಾಡಲು ಅವಕಾಶ ಇಲ್ಲ. ಈಜುಕೊಳಕ್ಕೂ ಕೂಡ ಸದ್ಯ ಅನುಮತಿ ಕೊಡುವುದಿಲ್ಲ ಎಂದರು.
ಕೇರಳ, ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚು ಸೋಂಕಿದೆ. ಹಾಗಾಗಿ, ಎರಡು ಗಡಿಯಲ್ಲಿ RTPCR ಟೆಸ್ಟ್ ತರೋದು ಕಡ್ಡಾಯ ಮಾಡಲಾಗಿದೆ. ರಾಜ್ಯ ಪ್ರವೇಶಿಸುವ 48 ಗಂಟೆ ಮೊದಲು ತಪಾಸಣೆ ಮಾಡಿಸಿರಬೇಕು ಎಂದರು.
ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಡುವ ವಿಚಾರ : ನಮ್ಮ ಸರ್ಕಾರ ಜನಪರ ಸರ್ಕಾರ. ಜನರು ಅಪೇಕ್ಷಿಸಿದ್ದನ್ನ ನಾವು ಮಾಡುತ್ತೇವೆ. ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಡುವ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
ಓದಿ: ಬೆಂಗಳೂರಲ್ಲಿ ತಟ್ಟೆ ಇಡ್ಲಿ, ಬಟನ್ ಇಡ್ಲಿ ಬಳಿಕ ಈಗ ಕ್ಯಾಂಡಿ ಇಡ್ಲಿ! ಈ ಐಡಿಯಾಗೆ ನೀವೇನಂತೀರಿ?