ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ವೇಳೆ ವಾಪಸ್ ಪಡೆಯಲಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆ ಮರಳಿ ನನಗೆ ಕೊಡಲಾಗುತ್ತದೆ ಎಂದು ಸಿಎಂ ಕಚೇರಿಯಿಂದ ಮಾಹಿತಿ ಬಂದಿದೆ ಅಂತಾ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಖಾತೆ ತೆಗೆದುಕೊಳ್ಳುವುದು ಮುಖ್ಯ ಅಲ್ಲ, ಆರೋಗ್ಯ ಮತ್ತು ವೈದ್ಯಕೀಯ ಎರಡೂ ಖಾತೆ ಒಬ್ಬರ ಬಳಿ ಇದ್ದರೆ ನಿಭಾಯಿಸಲು ಸುಲಭವಾಗುತ್ತದೆ. ಈಗ ಕೊರೊನಾ ವ್ಯಾಕ್ಸಿನ್ ಹಂಚಿಕೆ ಮಾಡಬೇಕಾಗಿದೆ. ಸಮನ್ವಯತೆ ಕೊರತೆ ತಪ್ಪಿಸಲು ಒಬ್ಬರಿಗೆ ಎರಡು ಖಾತೆ ಜವಾಬ್ದಾರಿ ನೀಡುವುದು ಅಗತ್ಯ. ಯಾವುದೇ ಸರ್ಕಾರ ಬಂದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣವನ್ನ ಒಟ್ಟಿಗೆ ಕೊಡಬೇಕು ಎಂದರು.
ಹೊಸದಾಗಿ ಸಚಿವರಾಗಿದ್ದವರಿಗೂ ಖಾತೆ ಹಂಚಿಕೆ ಮಾಡಬೇಕು. ಹಾಗಾಗಿ ಸಿಎಂಗೂ ಸವಾಲಿದೆ. ಹಾಗಾಗಿ ವ್ಯತ್ಯಾಸ ಆಗಿದೆ ಈಗ ವೈದ್ಯಕೀಯ ಶಿಕ್ಷಣ ನಿಮಗೆ ಕೊಡುತ್ತಿದ್ದಾರೆ ಅಂತಾ ಸಿಎಂ ಕಚೇರಿಯಿಂದ ಮಾಹಿತಿ ಬಂದಿದೆ. ನಮ್ಮ ಮುಂದಿರುವ ಸವಾಲು ಲಸಿಕೆ ಕೊಡೋದು. ಜಿಲ್ಲಾ ಮಟ್ಟದಲ್ಲಿ ಎರಡು ಇಲಾಖೆ ಅಧಿಕಾರ ಹಂಚಿಕೆಯಾದರೆ ಕಷ್ಟ. ಎರಡು ಇಲಾಖೆಯು ಶಾಶ್ವತವಾಗಿ ಇರಬೇಕು ಅಂತಾ ಹೇಳುತ್ತೇನೆ. ಸಿಎಂ ಮಾರ್ಗಸೂಚಿಯಂತೆ ಸಲಹೆಯ ಪ್ರಕಾರ ಕೆಲಸ ಮಾಡುತ್ತೇನೆ ಎಂದರು.
ವೈದ್ಯಕೀಯ ಖಾತೆ ಮರಳಿ ನೀಡುವುದಾಗಿ ಸಿಎಂ ಕಚೇರಿಯಿಂದ ಮಾಹಿತಿ ಬಂದಿದೆ: ಸುಧಾಕರ್ - ವೈದ್ಯಕೀಯ ಶಿಕ್ಷಣ ಖಾತೆ ಮರಳಿ ನನಗೆ ಕೊಡಲಾಗುತ್ತದೆ ಎಂದ ಸುಧಾಕರ್
ನೂತನ ಸಚಿವರಿಗೆ ಖಾತೆ ಹಂಚಿಕೆ ವೇಳೆ ವಾಪಸ್ ಪಡೆಯಲಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆ ಮರಳಿ ನನಗೆ ಕೊಡಲಾಗುತ್ತದೆ ಎಂದು ಸಿಎಂ ಕಚೇರಿಯಿಂದ ಮಾಹಿತಿ ಬಂದಿದೆ ಅಂತಾ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.