ETV Bharat / state

ಮಹಿಳೆಯರಿಂದ ಉತ್ತಮ ಸ್ಪಂದನೆ, ಸರ್ಕಾರದ ಶಕ್ತಿ ಯೋಜನೆ ಸಶಕ್ತ: ಸಚಿವ ರಾಮಲಿಂಗಾ ರೆಡ್ಡಿ - ಈಟಿವಿ ಭಾರತ್ ಕನ್ನಡ ಸುದ್ದಿ

ಕಾಂಗ್ರೆಸ್‌ ಚುನಾವಣಾ ಪೂರ್ವ ಪಂಚ ಭರವಸೆಗಳಲ್ಲೊಂದಾದ ಶಕ್ತಿ ಯೋಜನೆ ಜಾರಿಯಾಗಿದ್ದು, ಯೋಜನೆಯ ಫಲಶ್ರುತಿ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿದರು.

ಸಾರಿಗೆ ಸಚಿವ ರಾಮಲಿಂಗರೆಡ್ಡಿ
ಸಾರಿಗೆ ಸಚಿವ ರಾಮಲಿಂಗರೆಡ್ಡಿ
author img

By

Published : Jun 30, 2023, 6:35 PM IST

ಬೆಂಗಳೂರು : ರಾಜ್ಯದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಸಶಕ್ತವಾಗಿದೆ. ಮಹಿಳೆಯರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ಶುಕ್ರವಾರ ಶಾಂತಿನಗರದಲ್ಲಿ ಬಿಎಂಟಿಸಿ ಹೊಸ ಬಸ್‌ಗಳು, ಬೊಲೆರೊ ಹಾಗೂ ತಪಾಸಣಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ 3745 ಚಾಲನಾ ಸಿಬ್ಬಂದಿ ಹಾಗೂ 726 ತಾಂತ್ರಿಕ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ಹೊಸದಾಗಿ 1433 ಚಾಲನಾ ಸಿಬ್ಬಂದಿ ಮತ್ತು 2738 ತಾಂತ್ರಿಕ ಸಿಬ್ಬಂದಿ ನೇರ ನೇಮಕಾತಿ ಮಾಡಲು ಸರ್ಕಾರದಿಂದ ಅನುಮತಿಗೆ ಕಾಯಲಾಗುತ್ತಿದೆ ಎಂದು ತಿಳಿಸಿದರು.

ನಿಗಮದ ಖಾಲಿ ನಿವೇಶನದಲ್ಲಿ ವಾಣಿಜ್ಯ ಆದಾಯ ಗಳಿಸುವ ಉದ್ದೇಶದಿಂದ ಟೆಂಡರ್‌ನಲ್ಲಿ ಆಯ್ಕೆಯಾಗಿರುವ ಭಾರತ್‌ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಔಟ್‌ಲೆಟ್‌ಗಳನ್ನು ತೆರೆಯಲು ಒಪ್ಪಿಗೆ ನೀಡಲಾಗಿದೆ. ಇನ್ನೂ 36 ಸ್ಥಳಗಳಲ್ಲಿ ಬಂಕ್ ತೆರೆಯಲು ಮರು ಟೆಂಡರ್ ಕರೆದು ಆಯ್ಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಬೊಲೆರೊ ವಾಹನಗಳಿಗೆ ಚಾಲನೆ ನೀಡಿದ ಸಚಿವ ರಾಮಲಿಂಗ ರೆಡ್ಡಿ
ಬೊಲೆರೊ ವಾಹನಗಳಿಗೆ ಚಾಲನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ

ಸದ್ಯ ನಮ್ಮಲ್ಲಿರುವ ಸರಕು ಸಾಗಣೆ ಯೋಜನೆಗೆ 6 ಟನ್ ಸಾಮರ್ಥ್ಯದ 20 ಪೂರ್ಣ ನಿರ್ಮಿತ ಟ್ರಕ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಇದನ್ನು ಸರಕು ಸಾಗಣೆ ಜೊತೆಗೆ ನಿಗಮದ ಘಟಕ ಹಾಗೂ ವಿಭಾಗೀಯ ಕಾರ್ಯಗಾರದಲ್ಲೂ ಬಳಸಲಾಗುತ್ತದೆ. ಸುಖಾಸೀನ ವಾಹನಗಳ ಬೇಡಿಕೆ ಹೆಚ್ಚಿರುವುದರಿ೦ದ ಹಾಗೂ ಖಾಸಗಿಯವರೊಂದಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ 44 ಹೊಸ ಹವಾನಿಯಂತ್ರಿತ ರಹಿತ ಹಾಗೂ 4 ಹವಾನಿಯಂತ್ರಿತ ಸ್ಲೀಪರ್ ಬಸ್​ಗಳನ್ನು ಖರೀದಿಸಲಾಗುವುದು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 450 ವಿದ್ಯುತ್ ಚಾಲಿತ ವಾಹನಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ಟೆಂಡರ್ ಕರೆಯಲಾಗುವುದು. 20 ಸಾಮಾನ್ಯ ಹಾಗೂ 4 ಹವಾನಿಯಂತ್ರಿತ ಸ್ಲೀಪರ್ ವಾಹನಗಳನ್ನು ಖರೀದಿಸಲಾಗುವುದು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೂ ಹಲವು ಬಸ್‌ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ನಿಗಮದ ನೌಕರರು ಕ್ಯಾನ್ಸರ್ ಕಾಯಿಲೆಗೆ ವೈದ್ಯರ ಸಲಹೆ ಮೇರೆಗೆ ಕಿಮೋ ಅಥವಾ ರೇಡಿಯೋ ಥೆರಪಿಗೆ ಒಳಪಟ್ಟಲ್ಲಿ ಸರ್ಕಾರದಲ್ಲಿ ಜಾರಿ ಇರುವಂತೆಯೇ ಚಿಕಿತ್ಸಾ ಅವಧಿಯಲ್ಲಿ ಗರಿಷ್ಠ ಆರು ತಿಂಗಳು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಖಾಸಗಿ ಬಸ್​ಗಳ "ಶಕ್ತಿ" ಕುಂದಿಸಿದ ಸರ್ಕಾರದ ಉಚಿತ ಪ್ರಯಾಣ.. ನಮ್ಮ ಗೋಳು ಕೇಳೋರು ಯಾರು ಅಂತಿದ್ದಾರೆ ಮಾಲೀಕರು

ಬಿಎಂಟಿಸಿಯಲ್ಲಿ ಸೇವೆಯಲ್ಲಿರುವಾಗ ನೌಕರರು ಅಪಘಾತದಲ್ಲಿ ಮೃತಪಟ್ಟರೆ, ಅವರ ಅವಲಂಬಿ ತೆರಿಗೆ ಅಥವಾ ಶಾಶ್ವತ ಅಥವಾ ಭಾಗಶಃ ಅಂಗ ವೈಕಲ್ಯರಾಗಿರುವವರಿಗೆ ಬ್ಯಾಂಕುಗಳಿಗೆ ಒಡಂಬಡಿಕೆ ಮಾಡಿಕೊಂಡು ವೇತನ ಪ್ಯಾಕೇಜ್​ನ ಅಡಿ ಹೆಚ್ಚಿನ ಪರಿಹಾರ ನೀಡುವ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಯಾವುದೇ ಬ್ಯಾಂಕ್‌ನಲ್ಲೂ ಖಾತೆ ಹೊಂದಿದ್ದರೂ ಈ ಸೌಲಭ್ಯ ದೊರಕಲಿದೆ. 2000 ನಿರ್ವಾಹಕರು ಹಾಗೂ 1000 ಚಾಲಕ ಕಮ್ ನಿರ್ವಾಹಕ ಹುದ್ದೆಗೆ ನೇಮಕ ಮಾಡಿಕೊಳ್ಳಲಿದ್ದೇವೆ ಎಂದರು. ಬೆಳ್ಳಿ ಹಾಗೂ ಚಿನ್ನದ ಪದಕ ಪಡೆಯಲು ನೌಕರರಿಗೆ ಸದ್ಯ ಇರುವ ಮಾನದಂಡವನ್ನು ಸಡಿಲಿಕೆ ಮಾಡಿ ಮತ್ತು ಪದಕ ಪಡೆದ ಚಾಲಕರಿಗೆ ಭತ್ಯೆ ಹೆಚ್ಚಳಕ್ಕೆ ಆದೇಶಿಸಲಾಗಿದೆ ಎಂದು ಸಚಿವ ರೆಡ್ಡಿ ಹೇಳಿದರು.

ಇದನ್ನೂ ಓದಿ: ಸರ್ಕಾರಿ ಬಸ್‌ಗಳಲ್ಲಿ 'ಶಕ್ತಿ' ಪ್ರದರ್ಶನ: ಶಾಲಾ, ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳ ಹರಸಾಹಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.