ಬೆಂಗಳೂರು : ಆರ್‌ಆರ್‌ನಗರದ ವಾರ್ ರೂಂಗೆ ದಿಢೀರ್ ಭೇಟಿ ನೀಡಿದ ಸಚಿವ ಆರ್. ಅಶೋಕ್ ಹಾಗೂ ಎಸ್ ಟಿ ಸೋಮಶೇಖರ್ ವಾರ್ ರೂಂ ಅಧಿಕಾರಿಗಳು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿರುವ ಮೌಂಟ್ ಕಾರ್ಮೆಲ್ ಇಂಗ್ಲೀಷ್ ಸ್ಕೂಲ್ನ ವಾರ್ ರೂಮ್ ಆಗಿ ಪರಿವರ್ತನೆ ಮಾಡಿದ್ದು, ಪಾಸಿಟಿವ್ ಬಂದ ಕೇಸ್ಗಳನ್ನು ಟ್ರಾಕ್ ಮಾಡುವುದು, ಬಿಯು ನಂಬರ್ ಬಂದ ಮೇಲೆ ಸಲಹೆ ಸೂಚನೆ ನೀಡುವ ಕಾರ್ಯ ಈ ವಾರ್ ರೂಂನಿಂದ ನಡೆಯುತ್ತಿದೆ. 13 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈ ಆರ್‌ಆರ್‌ನಗರ ಝೋನ್ಗೆ ಬರುತ್ತವೆ.
5 ರಿಂದ 7 ಜನ ಡಾಕ್ಟರ್ಗಳು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ನಿರಂತರವಾಗಿ ರೋಗಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಆರ್‌ಆರ್‌ನಗರ ಬೆಡ್ ಬುಕ್ಕಿಂಗ್ ಕೂಡ ಇಲ್ಲಿಂದಲೇ ಆಗುತ್ತಿದೆ. ಹೀಗಾಗಿ, ಇಲ್ಲಿನ ಎಲ್ಲ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿವೆಯೇ? ಎಂಬುದನ್ನು ತಿಳಿಯಲು ಖುದ್ದು ಸಚಿವರೇ ಪರಿಶೀಲಿಸಿದರು.
ಡಾಕ್ಟರ್, ಡೇಟಾ ಎಂಟ್ರಿ ಆಪರೇಟರ್, ಕಂಪ್ಯೂಟರ್ ಆಪರೇಟರ್ಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಚಿವರುಗಳಿಗೆ ವಾರ್ ರೂಂ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಡಾಕ್ಟರ್ ಹಾಗೂ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಮಯದಲ್ಲಿ ಸಚಿವರು ಡಾಕ್ಟರ್ ಹಾಗೂ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆ ನೀಡಿದರು.
ಓದಿ: ಮಂಡ್ಯ ಆಕ್ಸಿಜನ್ ಪಾಲಿಟಿಕ್ಸ್: ಬಿಲ್ ಸಹಿತ ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಅಂಬರೀಶ್ ಟಾಂಗ್