ETV Bharat / state

ಸಿಎಂ, ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್​ ಒತ್ತಾಯ ಹಾಸ್ಯಾಸ್ಪದ: ಸಚಿವ ಆರ್. ಅಶೋಕ್

ಪಿಎಸ್​ಐ ನೇಮಕಾತಿ ಹಗರಣ- ಗೃಹ ಸಚಿವರು, ಸಿಎಂ ರಾಜೀನಾಮೆಗೆ ಆಗ್ರಹ- ಕಾಂಗ್ರೆಸ್​ ಬೇಡಿಕೆ ಹಾಸ್ಯಾಸ್ಪದ ಎಂದ ಸಚಿವ ಆರ್​. ಅಶೋಕ್​

author img

By

Published : Jul 5, 2022, 7:36 PM IST

ಸಚಿವ ಆರ್. ಅಶೋಕ್
ಸಚಿವ ಆರ್. ಅಶೋಕ್

ಬೆಂಗಳೂರು: ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ಇಟ್ಟಿರುವುದು ಹಾಸ್ಯಾಸ್ಪದ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಸಚಿವ ಆರ್. ಅಶೋಕ್ ಅವರು ಮಾತನಾಡಿರುವುದು

ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸ್ಪಷ್ಟವಾದ ನಿಲುವು ತೆಗೆದುಕೊಂಡಿದ್ದಾರೆ. ನಮ್ಮ ಸರ್ಕಾರ ಇಲ್ಲದಿದ್ದರೆ ತನಿಖೆಯೇ ಆಗುತ್ತಿರಲಿಲ್ಲ. ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬೆದರಿಕೆ ಹಾಕುವವರು ಸಮಾಜದಲ್ಲಿ ಇರುತ್ತಾರೆ. ಆದರೆ, ಬೆದರಿಕೆಗೆ ಬಗ್ಗದೆ ನಮ್ಮ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಬೇರೆಯವರು ಇದ್ದರೆ ಇದೆಲ್ಲವನ್ನು ಮುಚ್ಚಿ ಹಾಕುತ್ತಿದ್ದರು. ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ಈ ಹಿಂದೆಯೂ ಹಲವು ಐಎಎಸ್, ಐಪಿಎಸ್ ಅಧಿಕಾರಿಗಳ ವಿರುದ್ಧ ಆರೋಪಗಳಿದ್ದವು. ಆದರೆ, ಯಾವುದೇ ತನಿಖೆ ಆಗಿರಲಿಲ್ಲ. ಎಲ್ಲವನ್ನು ಮುಚ್ಚಿ ಹಾಕಲಾಗುತ್ತಿತ್ತು. ನಮ್ಮ ಸಿಎಂ ತನಿಖಾಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಆ ಕಾರಣಕ್ಕಾಗಿಯೇ ದಾಳಿ, ಬಂಧನ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಸಚಿವ ಅಶೋಕ್​ ಹೇಳಿದರು.

ರಕ್ಷಣೆ ಮಾಡುವ ಪ್ರಶ್ನೆ ಇಲ್ಲ: ಅಪರಾಧಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಸತ್ಯಾಸತ್ಯತೆ ಬಗ್ಗೆ ತನಿಖೆ ಆಗಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದು ಮುಂದು ನೋಡಲ್ಲ. ಟೀಕೆ, ಮೆಚ್ಚುಗೆ ಬರಲಿ, ಆದರೆ ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡಲ್ಲ ಎಂದು ಹೇಳಿದರು.

ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಎಸಿಬಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ‌ ಹಿಂದೆ ಅಧಿಕಾರಿಗಳನ್ನು ಬಂಧನ ಮಾಡಿಲ್ಲ ಎಂದು ಆರೋಪ ಮಾಡಿದ್ದರು. ಈಗ ದೊಡ್ಡವರನ್ನು ಹಿಡಿದಾಗ ಏಕೆ ಹಿಡಿತೀರಾ ಎಂದು ಕೇಳುತ್ತಿದ್ದಾರೆ. ಪ್ರಶ್ನೆ ಮಾಡಲು ಕೋರ್ಟ್ ಇದೆ. ರಾಹುಲ್ ಗಾಂಧಿ ವಿಚಾರಣೆ ನಡೆದಾಗ ಪ್ರತಿಭಟನೆ ಮಾಡಿದ್ರು. ಅವಾಗ ಇಡಿಯವರು ಏನಾದರೂ ನಿಲ್ಲಿಸಿದ್ರಾ. ಅವರು ಅವರ ಕೆಲಸ ಮಾಡಿದ್ರು. ರಾಹುಲ್ ಗಾಂಧಿ ಅವರ ವಿಚಾರಣೆ ಆಗಿದೆ. ಕಾನೂನು ಎಲ್ಲರಿಗೂ ಒಂದೇ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿದೆ ತಿರುಗಿ ನೋಡಲಿ, ನಾವು ಅವರ ಮಟ್ಟಕ್ಕೆ ಹೋಗಲ್ಲ ಎಂದು‌ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಚಂದ್ರಶೇಖರ್ ಗುರೂಜಿ ಹತ್ಯೆ ಪೂರ್ವನಿಯೋಜಿತ ಕೃತ್ಯ : ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ನೋವಿನ ಸಂಗತಿ. ಇದೊಂದು ಪೂರ್ವನಿಯೋಜಿತ ಕೃತ್ಯ. ಈ ಘಟನೆ ಖಂಡನೀಯವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.

ಚಂದ್ರಶೇಖರ್ ಗುರೂಜಿ ವಾಸ್ತು ಬಗ್ಗೆ ಸಾಕಷ್ಟು ತಜ್ಞರಾಗಿದ್ದರು. ಬಡವರಿಗೂ ವಾಸ್ತು ಅನುಕೂಲ ನೀಡಲು ಮಾಧ್ಯಮಗಳ ಮೂಲಕ ಸಹಾಯ ಮಾಡುತ್ತಿದ್ದರು. ಚಂದ್ರಶೇಖರ್ ಗುರೂಜಿ‌ ಅವರಿಗೆ ಯಾವುದೇ ವೈರಿಗಳು ಇರಲಿಲ್ಲ. ಅಲ್ಲಿನ ಪೊಲೀಸ್ ಕಮಿಷನರ್ ಅವರ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದರು.

ಓದಿ: ಬಿಬಿಎಂಪಿ ವಾರ್ಡ್ ಮರು ವಿಂಡಗಣೆ ಸಂಬಂಧ ಕೇವಲ 107 ಆಕ್ಷೇಪಣೆ ಮಾತ್ರ ಬಂದಿದೆ: ಪಾಲಿಕೆ ವಿಶೇಷ‌ ಆಯುಕ್ತ ದೀಪಕ್ ಕುಮಾರ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.