ETV Bharat / state

ಜನರ ಭಾವನೆ ಪರಿಗಣಿಸಿ ದೇವಾಲಯ ತೆರವು ಮಾಡಲು ಡಿಸಿಗಳಿಗೆ ಸೂಚನೆ: ಸಚಿವ ಆರ್.‌ಅಶೋಕ್ - ದೇವಸ್ಥಾನ ತೆರವು ಕುರಿತು ಆರ್​ ಅಶೋಕ್​ ಪ್ರತಿಕ್ರಿಯೆ

ನಂಜನಗೂಡು ಪುರಾತನ ದೇವಸ್ಥಾನ ತೆರವು ವಿವಾದಕ್ಕೆ ತಿರುಗಿದ ಹಿನ್ನೆಲೆ ಜನರ ಭಾವನೆ ಪರಿಗಣಿಸಿ ಸಂಯಮದಿಂದ ದೇವಾಲಯ ತೆರವು ಮಾಡಲು ಡಿಸಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಸಚಿವ ಆರ್​ ಅಶೋಕ್​ ತಿಳಿಸಿದ್ದಾರೆ.

ashok
ಸಚಿವ ಆರ್.‌ಅಶೋಕ್ ಪ್ರತಿಕ್ರಿಯೆ
author img

By

Published : Sep 14, 2021, 12:57 PM IST

ಬೆಂಗಳೂರು: ನಂಜನಗೂಡು ಪುರಾತನ ದೇವಸ್ಥಾನ ತೆರವು ವಿಚಾರವಾಗಿ ವಿವಾದ ತೀವ್ರಗೊಂಡಿದ್ದು, ಇದೀಗ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ. ಜಿಲ್ಲಾಧಿಕಾರಿಗಳು ಯಾವುದೇ ಪಾರ್ಥನಾ ಮಂದಿರ ತೆರವು‌ ಮುನ್ನ ಸಾರ್ವಜನಿಕರ ಭಾವನೆ, ಸುಪ್ರೀಂಕೋರ್ಟ್ ಆದೇಶ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲು ಸರ್ಕಾರ ಮುಂದಾಗಿದೆ.

ಸಚಿವ ಆರ್.‌ಅಶೋಕ್ ಪ್ರತಿಕ್ರಿಯೆ

ಈ ಕುರಿತಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್.‌ಅಶೋಕ್, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ.‌ ಆದರೆ, ಜನರ ಭಾವನೆಗಳಿಗೆ ಮನ್ನಣೆ ನೀಡಬೇಕು. ಸುಪ್ರೀಂಕೋರ್ಟ್ ಎಲ್ಲೂ ಏಕಾಏಕಿ ಧಾರ್ಮಿಕ ಕಟ್ಟಡಗಳನ್ನು ಒಡೆಯಬೇಕು ಎಂದು ಹೇಳಲಿಲ್ಲ. ಆದೇಶದಲ್ಲಿ ದೇವಾಲಯಗಳ ಸ್ಥಳಾಂತರಕ್ಕೆ ಅವಕಾಶ ಇದೆ ಹಾಗೂ ಜನರ ಮನವವೊಲಿಕೆಗೂ ಅವಕಾಶ ಇದೆ. ಏಕಾಏಕಿ ದೇವಸ್ಥಾನ ಒಡೆಯುವುದು ಸರಿಯಲ್ಲ ಎಂಬುದು ಸರ್ಕಾರದ ಭಾವನೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಮೈಸೂರಿನಲ್ಲಿ ದೇಗುಲಗಳ ತೆರವಿಗೆ ತಾತ್ಕಾಲಿಕ ವಿರಾಮ..

ಈ ಹಿನ್ನೆಲೆಯಲ್ಲಿ ಎಲ್ಲ ಡಿಸಿಗಳ ಜೊತೆ ಮಾತನಾಡುತ್ತೇವೆ. ಈ ಸಂಬಂಧ ಸಿಎಂ ಜೊತೆಗೆ ಮಾತನಾಡಿದ್ದೇವೆ. ಮನವೊಲಿಕೆ ಹಾಗೂ ಬದಲಿ ಜಾಗ ಹುಡುಕುವ ಬಗ್ಗೆ ಸುಪ್ರೀಂ ‌ಆದೇಶದಲ್ಲಿ ಇದೆ. ಅದೆಲ್ಲ ಆದ ಬಳಿಕ ಕ್ರಮ ಕೈಗೊಳ್ಳಬೇಕು. ಇವೆಲ್ಲವನ್ನು ಪರಿಗಣಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ. ಇದು ಇಡೀ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿದೆ ಹಾಗೂ ಇದು ಕೇವಲ ದೇವಸ್ಥಾನಕ್ಕೆ ಮಾತ್ರ ಅಲ್ಲ ಚರ್ಚ್ ಹಾಗೂ ಮಸೀದಿಗೆ ಅನ್ವಯವಾಗುತ್ತದೆ. ಈ ಬಗ್ಗೆ ಸದ್ಯದಲ್ಲಿ ಸರ್ಕಾರದ ನಿಲುವು ಪ್ರಕಟ ಮಾಡುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.