ETV Bharat / state

'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮಕ್ಕೆ ಸಚಿವ ಆರ್.ಅಶೋಕ್ ಚಾಲನೆ

author img

By

Published : Feb 20, 2021, 7:07 PM IST

ಪ್ರತಿ ತಿಂಗಳ 3ನೇ ಶನಿವಾರದಂದು ತಾಲೂಕಿನ ಹಿಂದುಳಿದ ಗ್ರಾಮಗಳಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯಲಿದೆ. ಅದರ ಉದ್ಘಾಟನಾ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಇಂದು ನೆರವೇರಿಸಿದರು.

'jilladhikarigala nade halli kade' campaign
'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮಕ್ಕೆ ಸಚಿವ ಆರ್. ಅಶೋಕ್ ಚಾಲನೆ

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ವಿನೂತನ 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದರು. ಈ ಮೂಲಕ ಏಕಕಾಲದಲ್ಲಿ ರಾಜ್ಯದ 227 ಕಡೆ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮಕ್ಕೆ ಸಚಿವ ಆರ್.ಅಶೋಕ್ ಚಾಲನೆ

ಪ್ರತಿ ತಿಂಗಳ 3ನೇ ಶನಿವಾರದಂದು ತಾಲೂಕಿನ ಹಿಂದುಳಿದ ಗ್ರಾಮಗಳಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯಲಿದೆ. ಅದರ ಉದ್ಘಾಟನಾ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಇಂದು ನೆರವೇರಿಸಿದರು.

ಸಿಂಗಾರಗೊಂಡ ಎತ್ತಿನಗಾಡಿಯಲ್ಲಿ ಕಂದಾಯ ಸಚಿವರನ್ನು ಬರಮಾಡಿಕೊಂಡ ಗ್ರಾಮಸ್ಥರು:

'ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ' ಕಾರ್ಯಕ್ರಮದ ಉದ್ಘಾಟನೆಗೆ ಹೊಸಹಳ್ಳಿಗೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಸಿಂಗಾರಗೊಂಡ ಎತ್ತಿನಗಾಡಿಯಲ್ಲಿ ಗ್ರಾಮಸ್ಥರು ಬರಮಾಡಿಕೊಂಡರು. ಸಚಿವರಿಗೆ ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸಾಥ್ ನೀಡಿದರು. ಎತ್ತಿನಗಾಡಿಯಲ್ಲಿ ಬಂದ ಸಚಿವರಿಗೆ ತಮಟೆ ವಾದ್ಯ ಮತ್ತು ಪೂರ್ಣಕುಂಭದ ಸ್ವಾಗತ ಕೋರಿದರು. ಬಳಿಕ ಸಚಿವರು ಹೊಸಹಳ್ಳಿ ಗ್ರಾಮದೇವತೆ ಮಾರಮ್ಮ ಮತ್ತು ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ದಲಿತರ ಕಾಲೋನಿಗೆ ಭೇಟಿ, ಸಮಸ್ಯೆ ಆಲಿಸಿದ ಸಚಿವರು:

ದಲಿತರ ಕಾಲೋನಿಗೆ ಭೇಟಿ ನೀಡಿದ ಸಚಿವರು, ದಲಿತರ ಸಮಸ್ಯೆಗಳನ್ನ ಆಲಿಸಿದರು. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಯುವತಿ ಲಾವಣ್ಯ ಮನವಿ ಮಾಡಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಭಾಗ್ಯಮ್ಮ ಕಳೆದ 20 ವರ್ಷದಿಂದ ಗಂಡನನ್ನು ಬಿಟ್ಟು ತಾಯಿ ಮನೆಯಲ್ಲಿದ್ದು, ತಮಗೆ ನಿವೇಶನ ಕೊಡುವಂತೆ ಮನವಿ ಮಾಡಿದರು. ಮಹಿಳೆಯ ಮನವಿಗೆ ಸ್ಪಂದಿಸಿದ ಸಚಿವರು, ಸ್ಥಳದಲ್ಲೇ ಮಹಿಳೆಗೆ ಮನಸ್ವಿನಿ ಯೋಜನೆಯಲ್ಲಿ ಪಿಂಚಣಿ ನೀಡುವಂತೆ ಮತ್ತು ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಿವ್ಯಾ ಎಂಬ ಮಹಿಳೆ ತಮ್ಮ ಅಂಗವಿಕಲ ಮಗಳ ಸಮಸ್ಯೆಯನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದು, ಮಹಿಳೆ ಕಣ್ಣೀರಿಗೆ ಕರಗಿದ ಸಚಿವರು ಸ್ಥಳದಲ್ಲೇ ವ್ಹೀಲ್​​ ಚೇರ್ ಕೊಡಿಸಿದರು. ಗ್ರಾಮಸ್ಥರ ಸ್ಮಶಾನಕ್ಕೆ ಜಾಗ ನೀಡುವಂತೆ ಮನವಿ ಮಾಡಿದ್ದು, ಸ್ಮಶಾನ ಜಾಗಕ್ಕೆ ಸರ್ವೇ ಮಾಡುವಂತೆ ತಿಳಿಸಿದರು. ಒಂದೊಂದು ಮನೆಯಲ್ಲಿ ಐದಾರು ಸಂಸಾರ ವಾಸವಿದ್ದು, ನಿವೇಶನಕ್ಕೆ ಮಾನವಿ ಮಾಡಿದರು. ನಿವೇಶನಕ್ಕಾಗಿ 5 ಎಕರೆ ಜಾಗವನ್ನು ಮಿಸಲಿಟ್ಟು ಅರ್ಹ ಫಲಾನುಭವಿಗಳಿಗೆ 400 ನಿವೇಶನ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕ ಸಮಸ್ಯೆ ಅಲಿಸಿದ ನಂತರ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹೊಸಹಳ್ಳಿಯಲ್ಲಿ ಹೊಸತನ ತರಲು ಗ್ರಾಮಕ್ಕೆ ಬಂದಿದ್ದೇನೆ. ಕಂದಾಯ ಇಲಾಖೆಯ ಹಲವು ಕಾರ್ಯಕ್ರಮಗಳನ್ನ ಜನರಿಗೆ ತಲುಪಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಹಳ ದಿನಗಳ ಹಿಂದಿನಿಂದ ಸರ್ಕಾರ ಒಂದು ಕಡೆ, ಜನರು ಒಂದು ಕಡೆ ಇರುವಂತೆ ಆಗಿದೆ. ಅಧಿಕಾರಿಗಳು ಒಂದು ತೀರ, ಜನರು ಒಂದು ತೀರದಂತೆ ಆಗಿದೆ. ಪ್ರತಿ ತಿಂಗಳ 3ನೇ ಶನಿವಾರ ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲಕ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆ ಆಲಿಸುವ ಕೆಲಸ ಮಾಡಲಾಗಿದೆ. ಜನ ಕಂದಾಯ ಇಲಾಖೆಗೆ ಅಲೆಯುವುದನ್ನ ತಪ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಸರ್ಕಾರಿ ಅಧಿಕಾರಿ, ಜನಪ್ರತಿನಿಧಿಗಳು ಜನರ ಸೇವಕರು. ಅವರ ಸೇವೆ ಮಾಡುವುದು ನಮ್ಮ ಕರ್ತವ್ಯ. ಆಗ ಮಾತ್ರ ಗಾಂಧೀಜಿಯವರ ರಾಮ ರಾಜ್ಯದ ಕನಸು ನೆರವೇರಲು ಸಾಧ್ಯ. ಹೀಗಾಗಿ ಎಲ್ಲಾ ಜಿಲ್ಲೆಯಲ್ಲೂ ಅಧಿಕಾರಿಗಳು ಹಳ್ಳಿಗೆ ಹೋಗಿದ್ದಾರೆ. ಇಂದು ಸ್ಥಳದಲ್ಲಿಯೇ 400 ಜನರಿಗೆ ಸೈಟ್ ಕೊಡಲು ಆದೇಶ ನೀಡಿದ್ದೇನೆ. ಈಗಾಗಲೇ ಜಾಗ ಗುರುತಿಸಿ ಆದೇಶ ಮಾಡಲಾಗಿದೆ. ಗ್ರಾಮದಲ್ಲಿ ಸ್ಮಶಾನ ಒತ್ತುವರಿಯಾಗಿದ್ದು, ಈಗಾಗಲೇ ಸ್ಮಶಾನದ ಸರ್ವೇ ಕಾರ್ಯ ಆರಂಭವಾಗಿದೆ. ಇನ್ನು ಎರಡು ಗಂಟೆಗಳಲ್ಲಿ ಸರ್ವೇ ಕಾರ್ಯ ಮುಗಿಯಲಿದೆ. ಇಂದು ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಹಲವು ಸಮಸ್ಯೆಗಳು ಸ್ಥಳದಲ್ಲಿಯೇ ಬಗೆಹರಿಸಿದ್ದೇವೆ. ಕಂದಾಯ ಇಲಾಖೆ ಎಂದ್ರೆ ಯಾರಿಗೂ ಗೊತ್ತೇ ಇರಲಿಲ್ಲ. ಈ ಕಾರ್ಯಕ್ರಮದಿಂದ ಕಂದಾಯ ಇಲಾಖೆ ತಿಳಿದಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.