ETV Bharat / state

ರಾಜ್ಯ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಭವಿಷ್ಯ: ಸಿ.ಟಿ. ರವಿ ಟಾಂಗ್

ಮಧ್ಯಂತರ ಚುನಾವಣೆ ಬರುತ್ತದೆ ಎಂಬ ಮಾಜಿ ಸಿಎಂ ಸಿದ್ದಾರಮಯ್ಯ ಹೇಳಿಕೆಗೆ, ಮೂಢನಂಬಿಕೆ ನಿಷೇಧ ಮಸೂದೆ ತರೋದಕ್ಕೆ ಹೊರಟಿದ್ದ ಸಿದ್ದರಾಮಯ್ಯನವರು ಭವಿಷ್ಯ ಹೇಳೋದನ್ನ ಯಾವಾಗಿನಿಂದ ಶುರುಮಾಡಿದ್ದಾರೋ ಗೊತ್ತಿಲ್ಲ ಎಂದು ಸಚಿವ ಸಿಟಿ ರವಿ ಟಾಂಗ್ ನೀಡಿದರು.

ಮಾಜಿ ಸಿಎಂ ಸಿದ್ದಾರಮಯ್ಯ
author img

By

Published : Aug 28, 2019, 2:42 PM IST

ಬೆಂಗಳೂರು: ಮಧ್ಯಂತರ ಚುನಾವಣೆ ಬರುತ್ತದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, ಮೂಢನಂಬಿಕೆ ನಿಷೇಧ ಮಸೂದೆ ತರೋದಕ್ಕೆ ಹೊರಟಿದ್ದ ಸಿದ್ದರಾಮಯ್ಯನವರು ಭವಿಷ್ಯ ಹೇಳೋದನ್ನ ಯಾವಾಗಿನಿಂದ ಶುರುಮಾಡಿದ್ದಾರೋ ಗೊತ್ತಿಲ್ಲವೆಂದು ಸಚಿವ ಸಿ. ಟಿ. ರವಿ ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯಗೆ ಸಚಿವ ಸಿ.ಟಿ ರವಿ ಟಾಂಗ್

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಇನ್ನೂ 3 ವರ್ಷ 9 ತಿಂಗಳು ಇರುತ್ತದೆ. ಜೊತೆಗೆ, ದೀರ್ಘಾವಧಿಯ ಯೋಜನೆಗಳನ್ನ ಜಾರಿಗೆ ತರುತ್ತೇವೆ, ಆ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರು ಎಂದುಕೊಂಡಿದ್ದೆ. ಆದರೆ, ಅವರ ಕಾಲು ಎಳೆಯೋ ಕೆಲಸ ಅವರ ಪಕ್ಷದಲ್ಲೇ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಕಾಲು ಜಾರದೆ ಎಚ್ಚರದಿಂದಿರಿ ಅಂತ ಹೇಳುತ್ತೇನೆ ಎಂದು ಟಾಂಗ್ ನೀಡಿದರು.

ಅಲ್ಲದೆ, ಬೆಂಗಳೂರು ನಗರಾಭಿವೃದ್ಧಿ ಖಾತೆ ಬಗ್ಗೆ ನೀವು ವರ್ಣರಂಜಿತವಾಗಿ ಪ್ರಶ್ನೆ‌ ಕೇಳ್ತಿರಾ ನಾನು ವರ್ಣರಂಜಿತವಾಗಿ ಹೇಳೋದಕ್ಕೆ ಹೋದರೆ ಅದು ವಿವಾದ ಆಗುತ್ತೆ. ಇದನ್ನ ಸಿಎಂ ಯಡಿಯೂರಪ್ಪನವರೇ ನೋಡಿಕೊಳ್ತಾರೆಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಇನ್ನು, ರಾಜ್ಯಾಧ್ಯಕರ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಿತು. ಪಕ್ಷದಲ್ಲಿನ ಆಂತರಿಕ ಚುನಾವಣೆ ಸಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಬಹುತೇಕ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರುಗಳು ಅವರೇ ಮುಂದುವರಿಯಬಹುದು. ಸಣ್ಣಪುಟ್ಟ ಬದಲಾವಣೆ ಮಾಡಬಹುದು, ಅದು ರಾಜ್ಯಾಧ್ಯಕರ ವಿವೇಚನೆಗೆ ಬಿಟ್ಟಿರುವ ವಿಚಾರ ಎಂದರು.

Intro:

ಬೆಂಗಳೂರು: ಮೂಢನಂಬಿಕೆ ನಿಷೇಧ ಮಸೂದೆ ತರೋದಕ್ಕೆ ಹೊರಟಿದ್ದ ಸಿದ್ದರಾಮಯ್ಯನವರು ಭವಿಷ್ಯ ಹೇಳೋದನ್ನ ಯಾವಗಿಂದ ಶುರುಮಾಡಿದ್ದಾರೋ ಗೊತ್ತಿಲ್ಲ ಎಂದು ಮಧ್ಯಂತರ ಚುನಾವಣೆ ಬರುತ್ತದೆ ಎಂಬ ಮಾಜಿ ಸಿಎಂ ಸಿದ್ದಾರಮಯ್ಯ ಹೇಳಿಕೆಗೆ ಸಚಿವ ಸಿಟಿ ರವಿ ಟಾಂಗ್ ನೀಡಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಮ್ಮ ಸರ್ಕಾರ ಇನ್ನ 3 ವರ್ಷ 9 ತಿಂಗಳು ಇರುತ್ತದೆ ದೀರ್ಘಾವಧಿಯ ಯೋಜನೆಗಳನ್ನ ಜಾರಿಗೆ ತರುತ್ತೇವೆ ಆ ಬಗ್ಗೆ ಅನುಮಾನ ಬೇಡ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರು ಪ್ರಶ್ನಾತೀತ ನಾಯಕರು ಅಂತ ಅಂದು ಕೊಂಡಿದ್ದೆ ಆದರೆ ಅವರ ಪಕ್ಷದಲ್ಲಿ ಇನ್ನು ವಿರೋಧ ಪಕ್ಷದ ನಾಯಕರನ್ನ ನೇಮಕ ಮಾಡಿಲ್ಲ
ಸಿದ್ದರಾಮಯ್ಯ ಅವರ ಕಾಲು ಎಳೆಯೋ ಕೆಲಸ ಅವರ ಪಕ್ಷದಲ್ಲೇ ನಡೆಯುತ್ತಿದೆ ಸಿದ್ದರಾಮಯ್ಯ ಅವರು ಕಾಲು ಜಾರದೆ ಎಚ್ಚರದಿಂದ ಇರಲಿ ಅಂತ ಹೇಳುತ್ತೇನೆ ಎಂದು ಟಾಂಗ್ ನೀಡಿದರು.

ಬೆಂಗಳೂರು ನಗರಾಭಿವೃದ್ದಿ ಖಾತೆ ಬಗ್ಗೆ ನೀವು ವರ್ಣರಂಜಿತವಾಗಿ ಪ್ರಶ್ನೆ‌ಕೇಳ್ತಿರಾ ನಾನು ವರ್ಣರಂಜಿತವಾಗಿ ಹೇಳೋದಕ್ಕೆ ಹೋದರೆ ಅದು ಕಂಟ್ರಾವರ್ಸಿಯಾಗುತ್ತೆ ಇದನ್ನ ಸಿಎಂ ಯಡಿಯೂರಪ್ಪ ನವರೇ ನೋಡಿಕೊಳ್ತಾರೆ ಎಂದರು.

ರಾಜ್ಯಾಧ್ಯಕರ ನೇತೃತ್ವದಲ್ಲಿ ಪ್ರಧಾನ ಕಾರ್ಯದರ್ಶಿಗಳ ಸಭೆ ಇತ್ತು .ಪಕ್ಷದಲ್ಲಿನ ಆಂತರಿಕ ಚುನಾವಣೆ ಸಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ.ಬಹುತೇಕ ಪದಾಧಿಕಾರಿಗಳು,ವಿವಿಧ ಮೋರ್ಚಾಗಳ ಅಧ್ಯಕ್ಷರುಗಳು ಅವರೇ ಮುಂದುವರಿಯಬಹುದು.ಸಣ್ಣ ಪುಟ್ಣ ಬದಲಾವಣೆ ಮಾಡಬಹುದು ಅದು ರಾಜ್ಯಾಧ್ಯಕರ ವಿವೇಚನೆಗೆ ಬಿಟ್ಟಿರುವ ವಿಚಾರ ಎಂದರು.

Body:.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.