ETV Bharat / state

ಕಾಂಗ್ರೆಸ್ ನಾಯಕರ ಅನುಕಂಪದ ಬಗ್ಗೆ‌ ಅನುಮಾನವಿದೆ: ಬಿ.ಸಿ.ಪಾಟೀಲ್

ವೀರಶೈವ ಲಿಂಗಾಯತ ಮತ ಕಾಂಗ್ರೆಸ್‌ಗೆ ಸೆಳೆಯುವ ತಂತ್ರ ಇದು. ಶಾಮನೂರು ಶಿವಶಂಕರಪ್ಪ ಅವರು ಮಹಾಸಭಾದಲ್ಲಿದ್ದವರು. ಅವರಿಗೆ ನಿಜವಾದ ಲಿಂಗಾಯತ ಕಳಕಳಿ ಇದೆ ಎಂದು ಸಚಿವ ಬಿ.ಸಿ ಪಾಟೀಲ್​ ಹೇಳಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್  ಹೇಳಿಕೆ
ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ
author img

By

Published : Jul 20, 2021, 6:41 PM IST

ಬೆಂಗಳೂರು: ಯಡಿಯೂರಪ್ಪನವರು ವೀರಶೈವ -ಲಿಂಗಾಯತ ಪ್ರಭಾವಿ ನಾಯಕ. ಈ ಬಗ್ಗೆ ಎಂ.ಬಿ.ಪಾಟೀಲ್ ನಿಜವಾದ ಕಳಕಳಿಯಿಂದ ಹೇಳಿಕೆ ನೀಡಿದ್ದರೆ ಸ್ವಾಗತ. ರಾಜಕೀಯ ಲಾಭಕ್ಕಾಗಿ ಹೇಳಿಕೆ ನೀಡಿದ್ದರೆ ಅದು ತಪ್ಪು. ಕಾಂಗ್ರೆಸ್ ನಾಯಕರ ಅನುಕಂಪದ ಬಗ್ಗೆ‌ ಅನುಮಾನವಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ

ವಿಕಾಸಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರ ಕುರ್ಚಿ ಅಲುಗಾಡುವ ಪ್ರಶ್ನೆ ಇಲ್ಲ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ. ದೆಹಲಿಗೆ ಹೋಗಿ ಬಂದ ನಂತರವೂ ಸಿಎಂ ಹೇಳಿದ್ದಾರೆ ಎಂದರು.

ಯಡಿಯೂರಪ್ಪ ಸಿಎಂ ಆಗಲಿ, ಬಿಜೆಪಿ ಅಧಿಕಾರಕ್ಕೆ ಬರಲಿ ಎಂದು ಬೆಂಬಲ ನೀಡಿದ್ದೇವೆ. ಯಡಿಯೂರಪ್ಪ ಸಿಎಂ ಆಗಿದ್ದಾರೆ. ಬಿಜೆಪಿಯೂ ಅಧಿಕಾರದಲ್ಲಿದೆ. ನಮಗೆ ಯಾವುದೇ ಆತಂಕ ಇಲ್ಲ. ವೀರಶೈವ ಲಿಂಗಾಯತ ಮತ ಕಾಂಗ್ರೆಸ್‌ಗೆ ಸೆಳೆಯುವ ತಂತ್ರ ಇದು. ಶಾಮನೂರು ಶಿವಶಂಕರಪ್ಪ ಅವರು ಮಹಾಸಭಾದಲ್ಲಿದ್ದವರು. ಅವರಿಗೆ ನಿಜವಾದ ಲಿಂಗಾಯತ ಕಳಕಳಿ ಇದೆ ಎಂದರು.

ವಲಸಿಗ ಅಥವಾ ಮೂಲ ಎಂಬ ಯಾವುದೇ ಗುಂಪಿಲ್ಲ. ಮಿತ್ರಮಂಡಳಿ ಎಂಬ ಹೊಸ ಪದ ಪ್ರಯೋಗ ಮಾಡುವುದಕ್ಕೆ ನಾವೆಲ್ಲರೂ ಬಿಜೆಪಿಯಲ್ಲಿದ್ದೇವೆ, ಬಿಜೆಪಿ ಸಚಿವರು. ನಾವು ನಿನ್ನೆ ಸೇರಿದ್ದು ಯಾವುದೇ ಸಭೆಯಲ್ಲ. ಆಗಾಗ ನಾವೆಲ್ಲ ಊಟಕ್ಕೆ ಸೇರಿ ವಿಚಾರ ವಿನಿಮಯ ಮಾಡುತ್ತೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು. ನನಗೆ ಹಾವೇರಿ ಉಸ್ತುವಾರಿ ಸಿಕ್ಕಿದ್ದರೆ ಒಳ್ಳೆದಿತ್ತು. ಆದರೆ ಬಸವರಾಜ ಬೊಮ್ಮಾಯಿಯವರು ಇದ್ದಾರೆ. ದಾವಣಗೆರೆ ಉಸ್ತುವಾರಿ ನೀಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಇದನ್ನೂ ಓದಿ : ಮೋದಿ ಬಂದ ಬಳಿಕ ಇದು ಆಗಿದ್ದಲ್ಲ, ಕಾಂಗ್ರೆಸ್‌ ಕೂಡಾ ಫೋನ್ ಕದ್ದಾಲಿಕೆ ಮಾಡಿದೆ: ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.