ಬೆಂಗಳೂರು: ಕೆ ಆರ್ ಪುರ ಕ್ಷೇತ್ರದ ರಾಮಮೂರ್ತಿನಗರದಲ್ಲಿ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ ಹಾಗೂ ಇಂಡಿಯಾ ನ್ಯಾಚುರಲ್ ರೆಮಿಡೀಸ್ ಸಹಾಯದಿಂದ 3 ದಿನಗಳ ಕಾಲ ಆಯೋಜಿಸಿರುವ ಆಕ್ಸಿಜನ್ ಬಸ್ ಓಡಾಟಕ್ಕೆ ರಾಮಮೂರ್ತಿ ನಗರದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಚಾಲನೆ ನೀಡಿದರು.
ಆಸ್ಪತ್ರೆಯಲ್ಲಿ ಸೋಂಕಿತರಿಗೆ ಆಕ್ಸಿಜನ್ ಅಭಾವ ನೀಗಿಸಲು ಸರ್ಕಾರ ಬಿಎಂಟಿಸಿ ಸಹಭಾಗಿತ್ವದೊಂದಿಗೆ ಬಸ್ಗಳಿಗೆ ಆಕ್ಸಿಜನ್ ಅಳವಡಿಸಿ ಆಕ್ಸಿಜನ್ ಬಸ್ಗಳಾಗಿ ಮಾರ್ಪಾಟು ಮಾಡಿ ನಗರಗಳಲ್ಲಿ ಹಾಗೂ ಆಸ್ಪತ್ರೆಯ ಮುಂಭಾಗಗಳಲ್ಲಿ ಅವಶ್ಯಕ ಇರುವ ಸೋಂಕಿತರಿಗೆ ಆಕ್ಸಿಜನ್ ನೀಡುವ ಕಾರ್ಯ ತ್ವರಿತವಾಗಿ ಮಾಡುತ್ತಿದೆ. ಹಾಗೂ ಸರ್ಕಾರದೊಂದಿಗೆ ಫೌಂಡೇಷನ್ಗಳು ಇದಕ್ಕೆ ಸಾಥ್ ನೀಡಿವೆ.
ರಾಮಮೂರ್ತಿನಗರದ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ ಹಾಗೂ ಇಂಡಿಯಾ ನ್ಯಾಚುರಲ್ ರೆಮಿಡೀಸ್ ಸಹಾಯದಿಂದ 3 ದಿನಗಳ ಕಾಲ ಆಕ್ಸಿಜನ್ ಬಸ್ ರಾಮಮೂರ್ತಿ ನಗರದಲ್ಲಿ ಇರಲಿದ್ದು ಕೋವಿಡ್ ಬಾಧಿತರು ಆಕ್ಸಿಜನ್ ನೆರವು ಪಡೆಯಬಹುದಾಗಿದೆ.
ಬಸ್ನಲ್ಲಿ ಒಮ್ಮೆಲೇ 8 ಜನರಿಗೆ ಆಕ್ಸಿಜನ್ ಕೊಡುವ ಸೌಲಭ್ಯವಿದ್ದು, ಹೆಚ್ಚಿನ ಅವಶ್ಯಕತೆ ಇದ್ದಲ್ಲಿ ಅಂಥವರನ್ನು ಆಸ್ಪತ್ರೆಗೆ ವರ್ಗಾವಣೆ ಮಾಡಲಾಗುವುದು. ಇಲ್ಲಿನ ಸುತ್ತಮುತ್ತಲಿನ ಸೋಂಕಿತರಿಗೆ ಆಕ್ಸಿಜನ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅಭಾವವನ್ನು ನೀಗಿಸಲು ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.