ಬೆಂಗಳೂರು: ವೀಕ್ಷಕರು ತಂಗಿರುವ ಕೆ.ಕೆ. ಗೆಸ್ಟ್ ಹೌಸ್ಗೆ ನಿಯೋಜಿತ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಿ ಮಾತುಕತೆ ನಡೆಸಿದರು. 11 ಗಂಟೆಗೆ ಬಸವರಾಜ್ ಬೊಮ್ಮಾಯಿ ನೂತನ ಸಿಎಂ ಅಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ಕೇಂದ್ರ ವೀಕ್ಷಕರಾದ ಧರ್ಮೇಂದ್ರ ಪ್ರಧಾನ್, ಕಿಷನ್ ರೆಡ್ಡಿ, ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಕೆ.ಕೆ.ಗೆಸ್ಟ್ ಹೌಸ್‌ನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಇತ್ತ ಸಚಿವಾಕಾಂಕ್ಷಿಗಳಾದ ಆರ್. ಅಶೋಕ್, ಗೋವಿಂದ ಕಾರಜೋಳ, ಎಚ್. ವಿಶ್ವನಾಥ್, ಡಾ. ಸುಧಾಕರ್, ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಎಂ.ಪಿ. ಕುಮಾರಸ್ವಾಮಿ, ತಿಪ್ಪಾರೆಡ್ಡಿ, ಲಿಂಬಾವಳಿ, ಮುರುಗೇಶ್ ನಿರಾಣಿ ಸೇರಿದಂತೆ ಹಲವು ಸಚಿವಾಕಾಂಕ್ಷಿಗಳು ಕೆ.ಕೆ. ಗೆಸ್ಟ್ ಹೌಸ್ಗೆ ಆಗಮಿಸಿ ಕೇಂದ್ರ ವೀಕ್ಷಕರ ಜೊತೆ ಮಾತುಕತೆ ನಡೆಸಿದರು.
ಇದನ್ನೂ ಓದಿ: ವೈದ್ಯರು - ಸಾರ್ವಜನಿಕರ ನಡುವೆ ನಂಬಿಕೆ, ವಿಶ್ವಾಸ ಬೆಳೆಸಲು ವೈದ್ಯರಿಬ್ಬರ ಸೈಕಲ್ ಜಾಥಾ..
ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದ್ದು, ಮಿತ್ರ ಮಂಡಳಿಯ ಕೆಲ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.