ETV Bharat / state

ಕಾಲೇಜು ಮುಚ್ಚುವಂತ ನಿರ್ಧಾರಕ್ಕೆ ಸರ್ಕಾರ ಮುಂದಾಗಲ್ಲ: ಅಶ್ವತ್ಥನಾರಾಯಣ - ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ

ಹೊಸ ಪ್ರಭೇದದ ವೈರಸ್ ಜೀವಕ್ಕೆ ಹೆಚ್ಚು ಅಪಾಯಕಾರಿ ಅಲ್ಲ ಎನ್ನುವ ಮಾಹಿತಿ ಬಂದಿದೆ. ಕಾಲೇಜುಗಳಲ್ಲಿ ಸೋಂಕು ಆಗಬಹುದು. ಆದರೆ, ಅದಕ್ಕೆ ಆತಂಕ ಪಡುವ ಬದಲು ನಿರ್ವಹಣೆ ಮಾಡಬೇಕು, ನಿರ್ವಹಣೆ ಮಾಡಲು ಏನೆಲ್ಲಾ ಕ್ರಮಗಳು ಬೇಕೋ ಆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ..

ಸಚಿವ ಅಶ್ವತ್ಥನಾರಾಯಣ ಸ್ಪಷ್ಟನೆ
ಸಚಿವ ಅಶ್ವತ್ಥನಾರಾಯಣ ಸ್ಪಷ್ಟನೆ
author img

By

Published : Dec 6, 2021, 8:02 PM IST

ಬೆಂಗಳೂರು : ಈಗಾಗಲೇ ಎರಡು ವರ್ಷಗಳ ಕಾಲ ವಿದ್ಯಾಭ್ಯಾಸಕ್ಕೆ ಮಕ್ಕಳು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ನಮ್ಮ ಯುವಕರು ಅವರ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಜೀವರಕ್ಷಣೆ, ಜೀವನೋಪಾಯ ಮತ್ತು ವಿದ್ಯಾಭ್ಯಾಸ ಜೊತೆಜೊತೆಯಲ್ಲಿಯೇ ನಡೆಯುವಂತಾಗಬೇಕು. ಹಾಗಾಗಿ, ಕಾಲೇಜು ಮುಚ್ಚುವಂತ ನಿರ್ಧಾರಕ್ಕೆ ಸರ್ಕಾರ ಮುಂದಾಗಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಕಡೆ ಎರಡು ಡೋಸ್ ಕೋವಿಡ್ ಲಸಿಕೆ ಕೊಟ್ಟೇ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲಾಗಿದೆ. ಸದ್ಯ ಹೊಸ ಪ್ರಭೇದದ ವೈರಸ್ ಜೀವಕ್ಕೆ ಹೆಚ್ಚು ಅಪಾಯಕಾರಿ ಅಲ್ಲ ಎನ್ನುವ ಮಾಹಿತಿ ಬಂದಿದೆ.

ಕಾಲೇಜುಗಳಲ್ಲಿ ಸೋಂಕು ಆಗಬಹುದು. ಆದರೆ, ಅದಕ್ಕೆ ಆತಂಕಪಡುವ ಬದಲು ನಿರ್ವಹಣೆ ಮಾಡಬೇಕು, ನಿರ್ವಹಣೆ ಮಾಡಲು ಏನೆಲ್ಲಾ ಕ್ರಮಗಳು ಬೇಕೋ ಆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆತಂಕವಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಕಲಿಯಲು ಅವಕಾಶವಿದೆ. ಆದರೆ, ಪರೀಕ್ಷೆ ಮಾತ್ರ ನೇರವಾಗಿ ಬಂದು ಬರೆಯಬೇಕು ಎಂದರು.

ಕಾಲೇಜುಗಳನ್ನ ಬಂದ್‌ ಮಾಡುವ ಕುರಿತಂತೆ ಸಚಿವ ಅಶ್ವತ್ಥ್‌ ನಾರಾಯಣ ಸ್ಪಷ್ಟನೆ ನೀಡಿರುವುದು..

ಒಂದು ವೇಳೆ ಸಂದಿಗ್ಧ ಪರಿಸ್ಥಿತಿ ಬಂದಾಗ ಬೇರೆ ಬೇರೆ ನಿಲುವನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ಸನ್ನಿವೇಶ ಬಂದಾಗ ಆಗಿನ ಸಂದರ್ಭಕ್ಕೆ ತಕ್ಕ ಕ್ರಮ ಕೈಗೊಳ್ಳಲಾಗುತ್ತದೆ. ಈಗಲೇ ಆ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ತುಂಬಾ ಬೇಗ ಪ್ರತಿಕ್ರಿಯೆ ಕೊಟ್ಟರೆ ನಾಗರಿಕ ಸಮಾಜಕ್ಕೆ ತುಂಬಾ ಸಮಸ್ಯೆಯಾಗಲಿದೆ. ಜನರಿಗೆ ನಾವು ಸಮಸ್ಯೆ ಹೆಚ್ಚಿಸಬಾರದು, ಎಷ್ಟು ಸಾಧ್ಯವೋ ಅಷ್ಟು ಉತ್ತಮವಾಗಿ ಬದುಕಲು ಏನೆಲ್ಲ ಅವಶ್ಯಕತೆಗಳನ್ನು ಮಾಡಿಕೊಳ್ಳಬೇಕು.

ಸರ್ಕಾರ ಬಹಳ ಜವಾಬ್ದಾರಿಯ ಕೆಲಸವನ್ನು ಮಾಡಲಿದೆ. ಮುಖ್ಯಮಂತ್ರಿಗಳು ಸದಾ ಎಲ್ಲಾ ವಿಚಾರದಲ್ಲಿ ಜಾಗ್ರತೆವಹಿಸಿ, ನಾಯಕತ್ವವಹಿಸಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ನಾವು ಅವರಿಗೆ ಬೇಕಿರುವ ಎಲ್ಲ ಸಹಕಾರ ಕೊಟ್ಟು ಉತ್ತಮವಾಗಿ ನಿರ್ವಹಣೆ ಮಾಡುತ್ತೇವೆ ಎಂದರು.

ಒಮಿಕ್ರಾನ್‌ನಿಂದ ಸೋಂಕಿನ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವುದು ಮುಖ್ಯವಲ್ಲ, ಅದರಿಂದ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಹೆಚ್ಚಾಗಿ ಜೀವ ಹಾನಿ ಹೆಚ್ಚಾದರೆ ಆಗ ಇದೆಲ್ಲವನ್ನು ನೋಡಿ ನಂತರ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುತ್ತದೆ. ಇದುವರೆಗೂ ಸದ್ಯಕ್ಕೆ ಬೇಕಿರುವ ಎಲ್ಲ ಕ್ರಮಗಳನ್ನು ವಹಿಸಿ ನಾವು ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಕೊರೊನಾ ನಿರ್ವಹಣೆ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿದೆ. ಎಲ್ಲಾ ಸಭೆಗಳಲ್ಲೂ ಬಹಳ ಸ್ಪಷ್ಟವಾಗಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇಡೀ ದೇಶದಲ್ಲಿ ಜಿನೋಮ್ ಸೀಕ್ವೆನ್ಸ್‌ನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.

ಒಮಿಕ್ರಾನ್ ಪ್ರಕರಣ ಪತ್ತೆ ಹಚ್ಚಿದ್ದು ನಾವು ಕರ್ನಾಟಕದವರು, ಕೊರೊನಾ ಪರೀಕ್ಷೆಯನ್ನು ಪ್ರತಿದಿನ ಒಂದು ಲಕ್ಷಕ್ಕೆ ತಲುಪಿಸಿದ್ದೇವೆ. ಕೊರೊನಾಗೆ ಬಹಳ ಒತ್ತುಕೊಟ್ಟು ನಿರ್ವಹಣೆ ಮಾಡುತ್ತಿದ್ದೇವೆ. ಎಲ್ಲಾ ಕಡೆ ನಿಯಮಗಳನ್ನು ಪಾಲನೆ ಮಾಡಲು ಎಲ್ಲ ಸಂಸ್ಥೆಗಳಲ್ಲೂ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ : ಡಿ.ಕೆ ಶಿವಕುಮಾರ್​ಗೆ ಆಹ್ವಾನ ನೀಡಿಲ್ಲ, ಅವರ ಅವಶ್ಯಕತೆಯೂ ನಮಗಿಲ್ಲ: ಸಚಿವ ಅಶ್ವತ್ಥ್ ನಾರಾಯಣ್

ಚಿತ್ರಮಂದಿರ, ಮಾಲ್‌ಗಳ ಪ್ರವೇಶ, ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರಿಗೆ, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಎರಡು ಡೋಸ್ ಲಸಿಕೆ ಕಡ್ಡಾಯಗೊಳಿಸುವ ಎಲ್ಲಾ ಪ್ರಯತ್ನ ಮಾಡಲಾಗಿದೆ. ಅದರ ಜೊತೆಗೆ ಆಸ್ಪತ್ರೆಯಲ್ಲಿ ಬೇರೆ ಬೇರೆ ಸೌಕರ್ಯ, ಸೌಲಭ್ಯಗಳನ್ನು ಕಲ್ಪಿಸಿ ಮೂಲ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ.

ಔಷಧಿ, ಸಿಬ್ಬಂದಿ ವ್ಯವಸ್ಥೆ, ಆಮ್ಲಜನಕ ದಾಸ್ತಾನು ಸೇರಿ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಗಡಿಭಾಗಗಳನ್ನು ಮೂರು ಪಾಳಿಯಲ್ಲಿ ನಿರ್ವಹಣೆ ಮಾಡುತ್ತಿದ್ದೇವೆ. ಗಡಿಯಲ್ಲಿ ತಪಾಸಣೆ ಮಾಡಿಯೇ ಒಳಗಡೆ ಬಿಡಲಾಗುತ್ತಿದೆ. ಇಷ್ಟೆಲ್ಲ ಮುನ್ನೆಚ್ಚರಿಕೆ ಇದ್ದರೂ ಇನ್ನೂ ಹೆಚ್ಚಿನ ರೀತಿಯಲ್ಲಿ ಕ್ರಮಗಳನ್ನು ಮಾಡಲಾಗುತ್ತದೆ ಎಂದರು.

ಸದ್ಯ ಎಲ್ಲಾ ಕಾರ್ಯಕ್ರಮಗಳಿಗೂ 500 ಜನರ ಗರಿಷ್ಠ ಮಿತಿಗೊಳಿಸಿ ನಿರ್ಣಯ ಕೈಗೊಳ್ಳಲಾಗಿದೆ, ಬೇರೆ ಎಲ್ಲಾ ಚಟುವಟಿಕೆಗಳನ್ನು ಎರಡು ತಿಂಗಳುಗಳ ಕಾಲ ಮುಂದೆ ಹಾಕಲಾಗಿದೆ. ಪರಿಸ್ಥಿತಿ ನಿಭಾಯಿಸಲು ನಾವು ಸಂಪೂರ್ಣವಾಗಿ ತಯಾರಿದ್ದೇವೆ. ಇನ್ನೂ ಹೆಚ್ಚಿನ ರೀತಿಯ ಕ್ರಮವಹಿಸುವ ಕೆಲಸವಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.