ETV Bharat / state

ಕೋವಿಡ್ ತಪಾಸಣಾ ವಾಹನಗಳಿಗೆ ಸಚಿವ ಅಶ್ವತ್ಥ್​ ನಾರಾಯಣ ಚಾಲನೆ.. - ಕೋವಿಡ್ ಪರೀಕ್ಷೆಗೆ ವಿನೂತನ ಡ್ರೈವ್ ಥ್ರೂ ವ್ಯವಸ್ಥೆ

ಕೊರೊನಾ/ಒಮಿಕ್ರಾನ್ ಸೋಂಕಿನಿಂದ ಎದುರಾಗಲಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಮಲ್ಲೇಶ್ವರಂ ಕ್ಷೇತ್ರದಲ್ಲಿ ಈಗಾಗಲೇ ಸಕಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವತ್ಥ್‌ ನಾರಾಯಣ ತಿಳಿಸಿದರು..

minister-ashwath-narayan-inaguarates-drive-thru-system-for-covid-testing
ಕೋವಿಡ್ ತಪಾಸಣಾ ವಾಹನಗಳಿಗೆ ಸಚಿವ ಅಶ್ವತ್ಥ್​ ನಾರಾಯಣ್​ ಚಾಲನೆ
author img

By

Published : Jan 19, 2022, 4:09 PM IST

ಬೆಂಗಳೂರು : ನಗರದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಮನೆಗೂ ಹೋಗಿ ತ್ವರಿತ ಗತಿಯಲ್ಲಿ ಕೋವಿಡ್ ಅಥವಾ ಒಮೈಕ್ರಾನ್ ಸೋಂಕು ಪರೀಕ್ಷೆ ಮಾಡಲಿರುವ ಮತ್ತು ಸಾರ್ವಜನಿಕರು ತಾವಾಗಿಯೇ ವಾಹನಗಳಲ್ಲಿ ಬಂದು ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವಂತಹ ವಿನೂತನ ಡ್ರೈವ್ ಥ್ರೂ/ವಾಕ್ ಇನ್ ವ್ಯವಸ್ಥೆಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವತ್ಥ್‌ ನಾರಾಯಣ ಬುಧವಾರ ಚಾಲನೆ ನೀಡಿದರು.

ಇದರ ಅಂಗವಾಗಿ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ 18ನೇ ಅಡ್ಡರಸ್ತೆಯಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಕೊರೊನಾ ಮತ್ತು ಒಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿದೆ. ಹೀಗಾಗಿ, ಇಂತಹ ಸರಳ, ಸುಲಭ ಮತ್ತು ಸುರಕ್ಷಿತ ತಪಾಸಣಾ ವ್ಯವಸ್ಥೆ ಬೇಕಾಗಿತ್ತು. ಈ ಪರೀಕ್ಷೆಗಳು ಸಂಪೂರ್ಣ ಉಚಿತವಾಗಿವೆ ಎಂದರು.

Minister Ashwath Narayan Inaguarates Drive-thru system for covid testing
ಕೋವಿಡ್ ತಪಾಸಣಾ ವಾಹನಗಳಿಗೆ ಸಚಿವ ಅಶ್ವತ್ಥ್​ ನಾರಾಯಣ​ ಚಾಲನೆ

ಸಾರ್ವಜನಿಕರು ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರು ಇತ್ಯಾದಿಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಬಂದರೆ ವೈದ್ಯಕೀಯ ಸಿಬ್ಬಂದಿ ತಾವೇ ಖುದ್ದಾಗಿ ಗಂಟಲು ದ್ರವವನ್ನು ಸಂಗ್ರಹಿಸಿಕೊಳ್ಳಲಿದ್ದಾರೆ. ಪರೀಕ್ಷೆಯ ಫಲಿತಾಂಶವನ್ನು ಆಯಾ ವ್ಯಕ್ತಿಗಳ ಮೊಬೈಲ್ ಫೋನ್​ಗೆ ರವಾನಿಸಲಾಗುವುದು.

ಈ ಡ್ರೈವ್-ಇನ್/ವಾಕ್ ಥ್ರೂ ಕೇಂದ್ರವು ಬೆಳಗ್ಗೆ 8ರಿಂದ ರಾತ್ರಿ 8ರವರೆಗೂ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಗಂಟಲು ದ್ರವ ಸಂಗ್ರಹಕರು, ಲ್ಯಾಬ್ ಟೆಕ್ನೀಷಿಯನ್ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳು ಇರುತ್ತಾರೆ. ಈ ವ್ಯವಸ್ಥೆಯನ್ನು ಮಲ್ಲೇಶ್ವರಂ ಕ್ಷೇತ್ರದ ಉಳಿದ ಭಾಗಗಳಿಗೂ ವಿಸ್ತರಿಸಲಾಗುವುದು. ಇಲ್ಲಿ ಯಾರು ಬೇಕಾದರೂ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಸಚಿವ ಅಶ್ವತ್ಥ್​ ನಾರಾಯಣ ಕ್ಷೇತ್ರದ 7 ವಾರ್ಡ್​ಗಳ ವ್ಯಾಪ್ತಿಯಲ್ಲೂ ಪ್ರತಿ ಮನೆಗೂ ಹೋಗಿ ಕೋವಿಡ್/ಒಮಿಕ್ರಾನ್ ಸೋಂಕು ಪರೀಕ್ಷೆ ಮಾಡಲಿರುವ ಸಂಚಾರಿ ತಪಾಸಣಾ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.

Covid test
ಕೋವಿಡ್ ಪರೀಕ್ಷೆ

ಈ ವಾಹನಗಳಲ್ಲಿ ಕೂಡ ನುರಿತ ವೈದ್ಯಕೀಯ ಸಿಬ್ಬಂದಿ ತಂಡ ಇರಲಿದೆ. ಸ್ಥಳದಲ್ಲೇ ಆರ್‌ಎಟಿ ಪರೀಕ್ಷೆ ನಡೆಸಲಿದೆ. ಜತೆಗೆ, ಆರ್​​ಟಿಪಿಸಿಆರ್ ಪರೀಕ್ಷೆ ಅಗತ್ಯವೆನಿಸಿದರೆ ಗಂಟಲು ದ್ರವವನ್ನು ಸಂಗ್ರಹಿಸಿಕೊಳ್ಳಲಿದೆ. ಫಲಿತಾಂಶವನ್ನು ಸಂಬಂಧಿಸಿದ ವ್ಯಕ್ತಿಗಳ ಮೊಬೈಲ್​​ಗೆ ಕಳುಹಿಸಿಕೊಡಲಾಗುವುದು.

ಜತೆಗೆ ಕೋವಿಡ್ ಸೋಂಕಿಗೆ ಸಂಬಂಧಪಟ್ಟಂತೆ ಜಾಗೃತಿ, ಪರೀಕ್ಷೆ, ಟ್ರಯೇಜ್, ಸಿಸಿಸಿ, ಸಹಾಯವಾಣಿ, ವಾರ್ ರೂಮ್ ಕುರಿತು ಅಗತ್ಯ ಮಾಹಿತಿಗಳನ್ನು ಧ್ವನಿವರ್ಧಕದ ಮೂಲಕ ಬಿತ್ತರಿಸಲಾಗುವುದು ಎಂದು ಅವರು ತಿಳಿಸಿದರು. ಇದರ ಜತೆಗೆ ಸೋಂಕಿತರ ಜತೆ ಪ್ರಾಥಮಿಕ ಮತ್ತು ದ್ವಿತೀಯ ಸ್ತರದ ಸಂಪರ್ಕ ಹೊಂದಿದ್ದವರ ತಪಾಸಣೆಯನ್ನೂ ಉಚಿತವಾಗಿ ನಡೆಸಲಾಗುವುದು.

ಆದರೆ, ಇದಕ್ಕಾಗಿ ಯಾರನ್ನೂ ಒತ್ತಾಯ ಪಡಿಸುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತ ಡಾ. ದೀಪಕ್, ಕೋವಿಡ್ ಉಸ್ತುವಾರಿ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಮತ್ತು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳಾದ ಡಾ. ಮನೋರಂಜನ್ ಹೆಗಡೆ, ಡಾ. ಸುಚೇತಾ, ಡಾ. ಪ್ರಕಾಶ್ ಉಪಸ್ಥಿತರಿದ್ದರು.

ಮಲ್ಲೇಶ್ವರಂನಲ್ಲಿ ಲಭ್ಯವಿರುವ ಸೌಲಭ್ಯಗಳು : ಕೊರೊನಾ/ಒಮಿಕ್ರಾನ್ ಸೋಂಕಿನಿಂದ ಎದುರಾಗಲಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಮಲ್ಲೇಶ್ವರಂ ಕ್ಷೇತ್ರದಲ್ಲಿ ಈಗಾಗಲೇ ಸಕಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದರು. ಇದರಂತೆ, ಪ್ಯಾಲೇಸ್ ಗುಟ್ಟಹಳ್ಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24/7 ಪರೀಕ್ಷಾ ಕೇಂದ್ರ, ಕೋವಿಡ್ ಆರೈಕೆ ಕೇಂದ್ರ, 3 ಸಾವಿರ ಪಲ್ಸ್ ಆಕ್ಸಿಮೀಟರ್ ಸಂಗ್ರಹ, ಕ್ಷೇತ್ರದಲ್ಲಿ 100 ಆಕ್ಸಿಜನ್ ಕಾನ್ಸಂಟ್ರೇಟರುಗಳು, ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಿತ 100 ಹಾಸಿಗೆಗಳ ಐಸಿಯು ಘಟಕ, 100 ಸಾಮಾನ್ಯ ಹಾಸಿಗೆಗಳ ಐಸಿಯು ಘಟಕ, ಕ್ಷೇತ್ರದ 7 ವಾರ್ಡ್​ಗಳಲ್ಲೂ ಒಂದೊಂದು ಟ್ರೈಯೇಜ್ ಟೀಮ್, ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ ರೂಮ್, 7 ಸಂಚಾರಿ ಕೋವಿಡ್ ತಪಾಸಣಾ ತಂಡಗಳು ಇವೆ ಎಂದರು.

ಸೋಂಕು ಕಂಡು ಬಂದವರು ಕ್ಷೇತ್ರದ ವ್ಯಾಪ್ತಿಗೆ ಬರುವ ಗಾಯತ್ರಿನಗರ, ಸುಬ್ರಹ್ಮಣ್ಯನಗರ, ಪ್ಯಾಲೇಸ್ ಗುಟ್ಟಹಳ್ಳಿ, ಮತ್ತಿಕೆರೆಯ ನೇತಾಜಿ ಸರ್ಕಲ್, ಮಲ್ಲೇಶ್ವರಂನಲ್ಲಿರುವ ಗಾಂಧಿ ಗ್ರಾಮ, ಸುಬೇದಾರ್ ಪಾಳ್ಯ ಮತ್ತು ವೈಯಾಲಿಕಾವಲ್​ನ ದೋಬಿ ಘಾಟ್ ಬಳಿ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಓದಿ: ಬಂದ್ ನಡೆಸಿದವರಿಂದಲೇ ಸಾರ್ವಜನಿಕ ಆಸ್ತಿ ನಷ್ಟ ವಸೂಲಿ ವಿಚಾರ : ವಿವರ ಕೇಳಿದ ಹೈಕೋರ್ಟ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.