ಬೆಂಗಳೂರು: ವಿಜಯನಗರವನ್ನು ನೂತನ ಜಿಲ್ಲೆಯಾಗಿ ಮಾಡಲು ಬಳ್ಳಾರಿ ಜಿಲ್ಲೆ ವಿಭಜನೆಗೆ ಅಪಸ್ವರ ವ್ಯಕ್ತವಾದ ಹಿನ್ನಲೆ, ಸಚಿವ ಆನಂದ್ ಸಿಂಗ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿತು.
ಸಿಎಂ ಯಡಿಯೂರಪ್ಪ ಮೈಸೂರಿಗೆ ತೆರಳುವ ಮುನ್ನ ಸಚಿವ ಆನಂದ್ ಸಿಂಗ್, ಸಂಸದ ದೇವೇಂದ್ರಪ್ಪ ಭೇಟಿ ಮಾಡಿದರು. ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ಕೆಲವರು ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಇಂದು ತುರ್ತಾಗಿ ಆನಂದ್ ಸಿಂಗ್, ಸಿಎಂ ಜೊತೆ ಮಾತುಕತೆ ನಡೆಸಿದರು. ನಿರ್ಧಾರ ಬದಲಿಸದಂತೆ ಮನವಿ ಮಾಡಿ ವಿಜಯನಗರವನ್ನು ನೂತನ ಜಿಲ್ಲೆಯನ್ನಾಗಿ ಮಾಡಲು ತಾತ್ವಿಕ ಒಪ್ಪಿಗೆ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಶಾಸಕ ಕೆ.ಜಿ ಬೋಪಯ್ಯ, ಹಾಲಪ್ಪ ಆಚಾರ್ ದೊಡ್ಡನಗೌಡ ಪಾಟೀಲ್ ಕೂಡ ಬಿಎಸ್ವೈ ಜಿಲ್ಲಾ ಪ್ರವಾಸಕ್ಕೆ ತೆರಳುವ ಮುನ್ನಾ ಭೇಟಿ ಮಾಡಿ ಮಾತುಕತೆ ನಡೆಸಿದರು. ಸಂಪುಟಕ್ಕೆ ಸೇರುವ ಅಪೇಕ್ಷೆ ಇರಿಸಿಕೊಂಡಿದ್ದರೂ, ಬಹಿರಂಗವಾಗಿ ಆಗ್ರಹಪೂರ್ವಕ ಒತ್ತಾಯ ಮಾಡಲು ಸಾಧ್ಯವಾಗದೆ ಸಚಿವ ಸ್ಥಾನದ ಬೇಡಿಕೆಯನ್ನು ಪರೋಕ್ಷವಾಗಿ ಸಿಎಂ ಗಮನಕ್ಕೆ ತಂದರು.
ಜಿಲ್ಲಾ ಪ್ರವಾಸ ಮುಗಿಸಿ ಸಿಎಂ ಗುರುವಾರ ನಗರಕ್ಕೆ ವಾಪಸಾಗಲಿದ್ದು, ಅಂದು ಸಂಪುಟ ಸರ್ಜರಿ ಸಾಧ್ಯತೆ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆ, ಇಂದೇ ಬಿಎಸ್ವೈ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ನಾಲ್ಕೈದು ವಾರಗಳಲ್ಲಿ ಕೋವಿಡ್ ಲಸಿಕೆ ಬರುವ ಸಾಧ್ಯತೆ: ಸಿಎಂ ಬಿಎಸ್ವೈ