ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ಐಷಾರಾಮಿ ಬಂಗಲೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಗೆ ಹಾಲು ಹಾಕಲು ಬಂದಿದ್ದ ವ್ಯಕ್ತಿಯೂ ಮನೆಯಲ್ಲಿ ಲಾಕ್ ಆಗಿರುವ ಘಟನೆ ನಡೆದಿದೆ.
ಇಡಿ ದಾಳಿಗೂ ಮುನ್ನ ಜಮೀರ್ ನಿವಾಸಕ್ಕೆ ಟಿವಿಎಸ್ ಬೈಕ್ನಲ್ಲಿ ವ್ಯಕ್ತಿಯೋರ್ವ ಹಾಲು ಹಾಕಲು ಬಂದಿದ್ದಾನೆ. ಈ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯನ್ನು ಸಂಪೂರ್ಣ ಲಾಕ್ ಮಾಡಿದ್ದಾರೆ.
ಜಮೀರ್ ಅಹಮದ್ ನಗರದ ಹಲವೆಡೆ ಆಸ್ತಿ ಹೊಂದಿದ್ದಾರೆ ಎನ್ನಲಾಗ್ತಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ ನಾಲ್ಕು ತಂಡಗಳು ಈ ದಾಳಿ ನಡೆಸಿ, ಶೋಧ ಕಾರ್ಯದಲ್ಲಿ ತೊಡಗಿವೆ ಎಂದು ತಿಳಿದುಬಂದಿದೆ.