ಬೆಂಗಳೂರು : ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾದ್ರೂ ಕೆಲ ಏರಿಯಾಗಳಲ್ಲಿ ಜನರು ಇನ್ನೂ ಆತಂಕದಲ್ಲಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಸಕ್ರಿಯವಾಗಿರುವ ಮೈಕ್ರೋ ಕಂಟೋನ್ಮೆಂಟ್ ಝೋನ್ ಸಂಖ್ಯೆ ಹೆಚ್ಚಾಳವಾಗ್ತಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 47 ಮೈಕ್ರೋ ಕಂಟೈನ್ಮೆಂಟ್ ಝೋನ್ಗಳು ಸಕ್ರಿಯವಾಗಿವೆ. 2 ಝೋನ್‌ಗಳಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿವೆ. ಡೇಂಜರ್ ಸ್ಥಿತಿಯಲ್ಲಿ ನಗರದ ಹೊರ ವಲಯಗಳಿದ್ದು, ದಿನೇದಿನೆ ಈ ಎರಡು ವಲಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ಗಳು ಏರಿಕೆಯಾಗುತ್ತಿವೆ.
ಮಹಾದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ತಲಾ 12 ಕಂಟೈನ್ಮೆಂಟ್ ಝೋನ್‌ಗಳಿವೆ. ಈ ವಲಯಗಳಲ್ಲಿ ಎಷ್ಟೆಷ್ಟು ಮೈಕ್ರೋ ಕಂಟೋನ್ಮೆಂಟ್ ಝೋನ್ ಇವೆ ಎಂಬುದನ್ನು ಬಿಬಿಎಂಪಿ ಪಟ್ಟಿ ಮಾಡಿದೆ.
- ಮಹಾದೇವಪುರ - 12
- ಯಲಹಂಕ - 6
- ಬೊಮ್ಮನಹಳ್ಳಿ-12
- ದಕ್ಷಿಣ ವಲಯ- 1
- ಪೂರ್ವ ವಲಯ - 7
- ರಾಜರಾಜೇಶ್ವರಿನಗರ- 0
- ಪಶ್ಚಿಮ ವಲಯ - 4
- ದಾಸರಹಳ್ಳಿ - 6