ETV Bharat / state

ವಾಸ್ತವತೆಯಿಂದ ದೂರ, ಕೇವಲ ಪೇಪರ್ ಘೋಷಿತ ಬಜೆಟ್: ಡಿಕೆಶಿ

ಇದು ಬಿಜೆಪಿಯ ಕೊನೆಯ ಬಜೆಟ್. ಇದಕ್ಕೆ ಗೊತ್ತು ಗುರಿ ಇಲ್ಲ ಎಂದು ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿದರು.

KPCC president DK Shivakumar spoke.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದರು.
author img

By

Published : Feb 17, 2023, 5:15 PM IST

Updated : Feb 17, 2023, 5:43 PM IST

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ

ಬೆಂಗಳೂರು: ನೈಜತೆ ಹಾಗೂ ವಾಸ್ತವತೆಗೆ ದೂರವಾದ ಹಾಗೂ ಕೇವಲ ಪೇಪರ್ ಘೋಷಿತ ಬಜೆಟ್ ಇದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಕಾಗದದಲ್ಲಿ ಮಾತ್ರ ಉಳಿಯುವ ಬಜೆಟ್. ಮುಖ್ಯಮಂತ್ರಿಗಳ ಭಾಷಣದಲ್ಲಿ ದಮ್ಮು ಇರಲಿಲ್ಲ. ನಾವು ಕಿವಿಗೆ ಚೆಂಡು ಹೂವು ಹಾಕಿಕೊಂಡು ಹೋಗಿದ್ದೆವು. ಅದಕ್ಕೆ ಬೆಲೆ ಕೊಡುವಷ್ಟು ಮೌಲ್ಯದ ಬಜೆಟ್ ಸಹ ಇದಲ್ಲ. ಉದ್ಯೋಗ ಸೃಷ್ಟಿ, ಮಹಿಳಾ ಸ್ವಾವಲಂಬನೆ ಸೇರಿದಂತೆ ಯಾವ ಕ್ಷೇತ್ರಕ್ಕೂ ಅವಕಾಶವಿಲ್ಲ ಎಂದರು.

40 ಪರ್ಸೆಂಟ್‌ಗೆ ಉತ್ತರ ಇಲ್ಲ: ರಾಜ್ಯದಲ್ಲಿ ಭಾರಿ ಹವಾ ಸೃಷ್ಟಿಸಿರುವ 40 ಪರ್ಸೆಂಟ್ ಸರ್ಕಾರ ಆರೋಪಕ್ಕೂ ಉತ್ತರ ಕೊಟ್ಟಿಲ್ಲ. ಎಲ್ಲ ಕ್ಷೇತ್ರಗಳು ಹಾಗೂ ಕೃಷಿಕರಿಗೆ ಸಮಸ್ಯೆ ಉಂಟಾಗುತ್ತಿದೆ. ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಕಲ್ಪಿಸುವ ಮೊದಲು ಗೃಹ ಸಚಿವರು ಅಡಿಕೆ ಬೆಳೆಯುವುದನ್ನು ನಿಲ್ಲಿಸಿ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಅಶ್ವಥ್ ನಾರಾಯಣ್ ವಿರುದ್ಧ ವಾಗ್ದಾಳಿ: ಅಶ್ವತ್ಥ ನಾರಾಯಣ ವಿರುದ್ದ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿ, ರಾಮ ಮಂದಿರವಾದರೂ ಕಟ್ಟು, ಸೀತಾ ಮಂದಿರವಾದರೂ ಕಟ್ಟು, ಅಶ್ವತ್ಥ ನಾರಾಯಣ ಮಂದಿರವಾದರೂ ಕಟ್ಟು, ಬಸವರಾಜ ಮಂದಿರವಾದರೂ ಕಟ್ಟು, ಯಡಿಯೂರಪ್ಪ ಮಂದಿರವಾದರೂ ಕಟ್ಟು, ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ಮೊದಲು ರಾಮನಗರದಲ್ಲಿ ಬಿಜೆಪಿ ಆಫೀಸ್ ಕಟ್ಟಲಿ ಎಂದು ಟಾಂಗ್‌ ಕೊಟ್ಟರು.

ನನಗೆ ನನ್ನ ಕಚೇರಿಯೇ ದೇವಸ್ಥಾನ. ಏನೋ ಕ್ಲೀನ್ ಮಾಡಿಸ್ತೀನಿ ಅಂದ ಏನಪ್ಪಾ ಮಾಡಿದ? ಅಲ್ಲಿಗೆ ಬಂದು ವೃಷಭಾವತಿ ನೀರು ಕುಡೀಲಿ ಮೊದಲು. ಕೊಚ್ಚೆ ನೀರನ್ನು ಕ್ಲೀನ್ ಮಾಡ್ಸಿದಾನಾ? ಕರಪ್ಶನ್ ನಿಲ್ಸಿದಾನಾ? ಸ್ಕಿಲ್ ಡೆವಲಪ್ಮೆಂಟ್ ಹಗರಣ ಬಿಚ್ಚಿಟ್ಟಿಲ್ಲ ಇನ್ನೂ ನಾನು. ಇನ್ನು ಕೆಲ ದಿನಗಳಲ್ಲಿ ಅದನ್ನೂ ಬಿಚ್ಚಿಡ್ತೀನಿ ಎಂದು ಎಚ್ಚರಿಕೆ ಕೊಟ್ಟರು.

ದಕ್ಷಿಣ ಭಾರತದಲ್ಲಿ ಹೆಬ್ಬಾಗಿಲು ತೆರೆಯುತ್ತಿದ್ದೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಯ ಕೊನೆಯ ಬಜೆಟ್ ಇದಾಗಿದೆ. ಇನ್ನು ದಕ್ಷಿಣ ಭಾರತದ ಯಾವ ರಾಜ್ಯದಲ್ಲಿಯೂ ಬಿಜೆಪಿಗೆ ಬಜೆಟ್ ಮಂಡಿಸುವ ಅವಕಾಶ ಇಲ್ಲ. ಡಬಲ್ ಇಂಜಿನ್ ಸರ್ಕಾರ ಸಂಪೂರ್ಣ ಆಫ್ ಆಗಿರುವಂತೆ ಕಂಡು ಬಂತು ಎಂದರು.

ಇದನ್ನೂಓದಿ:ತೋಟಗಾರಿಕಾ ಬೆಳೆ ಮೌಲ್ಯವರ್ಧನೆ, ರಫ್ತು, ಸಂಸ್ಕರಣೆಗೆ ಒತ್ತು: ವಿಶೇಷ ಅನುದಾನಗಳ ಘೋಷಣೆ

Last Updated : Feb 17, 2023, 5:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.