ಬೆಂಗಳೂರು: ಅಖಿಲ ಭಾರತ ಅಂಚೆ ಇಲಾಖೆ ನೀಡುವ ಮೇಘದೂತ್ ಪ್ರಶಸ್ತಿಯನ್ನು ಕರ್ನಾಟಕ ಅಂಚೆ ವಲಯದ ಇಬ್ಬರು ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ರಾಜಭವನಲ್ಲಿರುವ ಪ್ರಧಾನ ಅಂಚೆ ಕಚೇರಿಯ ಮೇಘದೂತ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಮೋಟರ್ ಮೇಲ್ ಸರ್ವಿಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಕೃಷ್ಣ ಹಾಗೂ ಬೆಂಗಳೂರು ಸೀನಿಯರ್ ಸೂಪರಿಂಟೆಂಡೆಂಟ್ ಅಧಿಕಾರಿಯಾಗಿರುವ ಬಿ.ಎಸ್.ಚಂದ್ರಶೇಖರ್ ಅವರನ್ನು ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಪ್ರಶಸ್ತಿ ನೀಡಿ ಗೌರವಿಸಿದರು.
ಓದಿ: ವಿಜಯ್ ದಿವಸ್ : ಹುತಾತ್ಮ ಯೋಧರಿಗೆ ಸಿಎಂ ಯಡಿಯೂರಪ್ಪ ಗೌರವ
ಬಳಿಕ ಮಾತನಾಡಿದ ಶಾರದಾ ಸಂಪತ್, ಉದ್ಯೋಗಿಗಳ ಮೌಲ್ಯಮಾಪನ ಹಾಗೂ ಕೆಲಸದ ಗುಣಮಟ್ಟವನ್ನು ಹೆಚ್ಚಿಸಲು ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಪ್ರಶಸ್ತಿ ಪುರಸ್ಕೃತರಿಗೂ ಸ್ಫೂರ್ತಿ ನೀಡಲಿದೆ. ಕೊರೊನಾ ಸಮಯದಲ್ಲಿ ಇಡೀ ದೇಶದಲ್ಲಿ ಅಂಚೆ ಇಲಾಖೆ ಅತ್ಯುನ್ನತ ಕಾರ್ಯ ಗಳಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.