ETV Bharat / state

ಸಿಎಂ ನಿವಾಸದಲ್ಲಿ ಮಹತ್ವದ ಸಭೆ: ಕುತೂಹಲ ಕೆರಳಿಸಿದ ಹೊರಟ್ಟಿ ಭೇಟಿ - jds leader basavaraj horatti

ಸಿಎಂ ಬಿಎಸ್​ವೈ ತಮ್ಮ ನಿವಾಸದಲ್ಲಿ ಚುನಾವಣಾ ಉಸ್ತುವಾರಿಗಳು ಹಾಗೂ ಅಭ್ಯರ್ಥಿಗಳ ಜೊತೆ ಸಭೆ ನಡೆಸಿದರು. ಚುನಾವಣಾ ಪ್ರಚಾರ ಹಾಗೂ ರಣತಂತ್ರದ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಆಗಮಿಸಿದ್ದು, ಜೆಡಿಎಸ್ ಸಂದೇಶ ಹೊತ್ತು ಬಂದರಾ ಎನ್ನುವ ಅನುಮಾನ ಹುಟ್ಟಿದೆ.

bng
author img

By

Published : Nov 19, 2019, 6:37 PM IST

ಬೆಂಗಳೂರು: ಡಿಸೆಂಬರ್ 5ರಂದು 15 ಕ್ಷೇತ್ರಗಳ ಉಪ‌ ಚುನಾವಣೆ ಹಿನ್ನೆಲೆಯಲ್ಲಿ ಗೆಲುವಿನ ತಂತ್ರಗಾರಿಕೆ ಕುರಿತು ಸಿಎಂ ಬಿಎಸ್​ವೈ ಮಹತ್ವದ ಸಭೆ ನಡೆಸಿದರು. ಈ ವೇಳೆ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಆಗಮಿಸಿದ್ದು, ಜೆಡಿಎಸ್ ಸಂದೇಶ ಹೊತ್ತು ಬಂದರಾ ಎನ್ನುವ ಅನುಮಾನ ಹುಟ್ಟುಹಾಕಿದೆ.

ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸ ಧವಳಗಿರಿಯಲ್ಲಿ ಚುನಾವಣಾ ಉಸ್ತುವಾರಿಗಳು, ಅಭ್ಯರ್ಥಿಗಳ ಜೊತೆ ಸಿಎಂ ಸಭೆ ನಡೆಸಿದರು. ಹುಣಸೂರು ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್​, ಸಚಿವರಾದ ಮಾಧುಸ್ವಾಮಿ, ಸಚಿವ ವಿ.ಸೋಮಣ್ಣ ಜೊತೆ ಸಿಎಂ ಚರ್ಚೆ ನಡೆಸುತ್ತಿದ್ದಾರೆ. ಈ ಕ್ಷೇತ್ರಗಳಲ್ಲಿ ಪ್ರಚಾರ ಹಾಗೂ ಚುನಾವಣಾ ರಣತಂತ್ರದ ಬಗ್ಗೆ ಚರ್ಚೆ ನಡೆಸಿದರು.

ಬಿಎಸ್​ವೈ ನಿವಾಸದಲ್ಲಿ ಮಹತ್ವದ ಸಭೆ

ಮಹಾಲಕ್ಷ್ಮಿ ಲೇಔಟ್ ಚುನಾವಣಾ ಉಸ್ತುವಾರಿ ಹೊತ್ತಿರುವ ಸಚುವ ವಿ.ಸೋಮಣ್ಣ ಮಹಾಲಕ್ಷ್ಮಿ ಲೇಔಟ್​​ನ ಬಂಡಾಯ ಶಮನದ ಬಗ್ಗೆ ಸಿಎಂ ಬಿಎಸ್​ವೈಗೆ ಮಾಹಿತಿ ನೀಡಿದರು. ಬೆಳಗ್ಗೆ ಮಹಾಲಕ್ಷ್ಮಿ ಲೇಔಟ್​ನಲ್ಲಿ ಅಭ್ಯರ್ಥಿ ಗೋಪಾಲಯ್ಯ ಹಾಗೂ ಸ್ಥಳೀಯ ಕಮಲ ಮುಖಂಡರ ಜೊತೆ ಸಭೆ ನಡೆಸಿದ್ದ ಸೋಮಣ್ಣ ಇದೀಗ ಸಭೆ ಬಗ್ಗೆ ಸಿಎಂ ಬಿಎಸ್​ವೈಗೆ ಮಾಹಿತಿ ನೀಡಿದರು. ನಂತರ ಮಹಾಲಕ್ಷ್ಮಿ ಲೇಔಟ್​ನಲ್ಲಿ ಗೆಲ್ಲುವ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಲಾಯಿತು.

ಇದರ ಜೊತೆಯಲ್ಲಿಯೇ ಶಿವಾಜಿನಗರ ಕ್ಷೇತ್ರದ ಕುರಿತೂ ಸಭೆ ನಡೆಸಲಾಯಿತು. ಮೊದಲು ಅನರ್ಹ ಶಾಸಕ ರೋಷನ್ ಬೇಗ್​ರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ ಸಿಎಂ, ನಂತರ ಬಿಜೆಪಿ ಅಭ್ಯರ್ಥಿ ಶರವಣರನ್ನು ಕರೆಸಿಕೊಂಡು ಸಭೆ ನಡೆಸಿದರು.

ಸಿಎಂ ಸಭೆ ನಡುವೆಯೇ ಜೆಡಿಎಸ್ ಎಂಎಲ್​ಸಿ ಬಸವರಾಜ್ ಹೊರಟ್ಟಿ ಸಿಎಂ ನಿವಾಸಕ್ಕೆ ಭೇಟಿ ನೀಡಿ, ಕೆಲಕಾಲ ಮಾತುಕತೆ ನಡೆಸಿದರು. ಹಿಂದಿನ ದಿನವಷ್ಟೇ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಗೆಲ್ಲದೇ ಇದ್ದರೆ ಬಿಜೆಪಿಗೆ ಜೆಡಿಎಸ್ ಬೆಂಬಲಿಸಬಹುದು ಎಂದು ಹೊರಟ್ಟಿ‌ ಹೇಳಿಕೆ ನೀಡಿದ್ದರು. ಅದರ ಬೆನ್ನೆಲ್ಲೆ ಇಂದು ಸಿಎಂ ಭೇಟಿ ಮಾಡಿದ್ದು ತೀವ್ರ ಕುತೂಹಲ ಕೆರಳಿಸಿದೆ.

ಜೆಡಿಎಸ್ ನಾಯಕರ ಸಂದೇಶವನ್ನು ಹೊರಟ್ಟಿ ಹೊತ್ತು ತಂದಿದ್ದರಾ? ಅನಿವಾರ್ಯ ಸ್ಥಿತಿ ನಿರ್ಮಾಣವಾದಲ್ಲಿ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುವ ಕುರಿತು ಜೆಡಿಎಸ್ ನಿಲುವನ್ನು ವ್ಯಕ್ತಪಡಿಸಲು ಬಂದಿದ್ದರಾ ಎನ್ನುವ ಪ್ರಶ್ನೆ ಮೂಡಿಸಿದೆ.

ತನ್ವೀರ್ ಸೇಠ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ‌ ಸೋಮಣ್ಣ:

ತನ್ವೀರ್ ಸೇಠ್ ಆರೋಗ್ಯದ ಬಗ್ಗೆ ಸಚಿವ ವಿ.ಸೋಮಣ್ಣ ಸಿಎಂಗೆ ಮಾಹಿತಿ ನೀಡಿದರು. ಮೈಸೂರಿಗೆ ತೆರಳಿ ತನ್ವೀರ್ ಸೇಠ್ ಆರೋಗ್ಯ ವಿಚಾರಿಸುವಂತೆ ಸೋಮಣ್ಣ‌ಗೆ ಖುದ್ದು ಸಿಎಂ ಸೂಚಿಸಿದ್ದು, ಅದರಂತೆ ನಿನ್ನೆ ಸಂಜೆ ಮೈಸೂರಿಗೆ ತೆರಳಿ ತನ್ವೀರ್ ಆರೋಗ್ಯ ವಿಚಾರಿಸಿದ್ದ ಸಚಿವ ಸೋಮಣ್ಣ, ಇಂದು ಅದರ ಬಗ್ಗೆ ಮಾಹಿತಿ ನೀಡಿದರು.

Intro:

ಬೆಂಗಳೂರು: ಡಿಸೆಂಬರ್ 5 ರಂದು 15 ಕ್ಷೇತ್ರಗಳ ಉಪ‌ ಚುನಾವಣೆ ಹಿನ್ನೆಲೆಯಲ್ಲಿ ಗೆಲುವಿನ ತಂತ್ರಗಾರಿಕೆ ಕುರಿತು ಸಿಎಂ ಬಿಎಸ್ವೈ ಮಹತ್ವದ ಸಭೆ ನಡೆಸಿದರು.ಈ ವೇಳೆ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಆಗಮಿಸಿದ್ದು ಜೆಡಿಎಸ್ ಸಂದೇಶ ಹೊತ್ತು ಬಂದರಾ ಎನ್ನುವ ಅನುಮಾನ ಹುಟ್ಟುಹಾಕಿದೆ.

ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸ ಧವಳಗಿರಿಯಲ್ಲಿ ಚುನಾವಣಾ ಉಸ್ತುವಾರಿಗಳು, ಅಭ್ಯರ್ಥಿಗಳ ಜೊತೆ ಸಿಎಂ ಸಭೆ ನಡೆಸಿದರು. ಹುಣಸೂರು ಬಿಜೆಪಿ ಅಭ್ಯರ್ಥಿ ಹೆಚ್ ವಿಶ್ವನಾಥ, ಸಚಿವರಾದ ಮಾಧುಸ್ವಾಮಿ, ಸಚಿವ ವಿ ಸೋಮಣ್ಣ ಜೊತೆ ಸಿಎಂ ಚರ್ಚೆ ನಡೆಸುತ್ತಿದ್ದಾರೆ. ಈ
ಕ್ಷೇತ್ರಗಳಲ್ಲಿ ಪ್ರಚಾರ ಹಾಗೂ ಚುನಾವಣಾ ರಣತಂತ್ರದ ಬಗ್ಗೆ ಚರ್ಚೆ ನಡೆಸಿದರು.

ಮಹಾಲಕ್ಷ್ಮಿ ಲೇಔಟ್ ಚುನಾವಣಾ ಉಸ್ತುವಾರಿ ಹೊತ್ತಿರುವ ಸಚುವ ವಿ.ಸೋಮಣ್ಣ ಮಹಾಲಕ್ಷ್ಮಿ ಲೇಔಟ್ ನ ಬಂಡಾಯ ಶಮನದ ಬಗ್ಗೆ ಸಿಎಂ ಬಿಎಸ್ವೈ ಗೆ ಮಾಹಿತಿ ನೀಡಿದರು.ಬೆಳಗ್ಗೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ಅಭ್ಯರ್ಥಿ ಗೋಪಾಲಯ್ಯ ಹಾಗೂ ಸ್ಥಳೀಯ ಕಮಲ ಮುಖಂಡರ ಜೊತೆ ಸಭೆ ನಡೆಸಿದ್ದ ಸೋಮಣ್ಣ ಇದೀಗ ಸಭೆ ಬಗ್ಗೆ ಸಿಎಂ ಬಿಎಸ್ವೈ ಗೆ ಮಾಹಿತಿ ನೀಡಿದರು. ನಂತರ ಮಹಾಲಕ್ಷ್ಮಿ ಲೇಔಟ್ ನಲ್ಲಿ ಗೆಲ್ಲುವ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಲಾಯಿತು.

ಇದರ ಜೊತೆಯಲ್ಲಿಯೇ ಶಿವಾಜಿನಗರ ಕ್ಷೇತ್ರದ ಕುರಿತೂ ಸಭೆ ನಡೆಸಲಾಯಿತು, ಮೊದಲು ಅನರ್ಹ ಶಾಸಕ ರೋಷನ್ ಬೇಗ್ ರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿದ ಸಿಎಂ ನಂತರ ಬಿಜೆಪಿ ಅಭ್ಯರ್ಥಿ ಶರವಣರನ್ನು ಕರೆಸಿಕೊಂಡು ಸಭೆ ನಡೆಸಿದರು.

ಸಿಎಂ ಸಭೆ ನಡುವೆಯೇ ಜೆಡಿಎಸ್ ಎಂಎಲ್ಸಿ ಬಸವರಾಜ್ ಹೊರಟ್ಟಿ ಸಿಎಂ ನಿವಾಸಕ್ಕೆ ಭೇಟಿ ನೀಡಿದರು. ಕೆಲಕಾಲ ಮಾತುಕತೆ ನಡೆಸಿದರು.ಹಿಂದಿನ ದಿನವಷ್ಟೇ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಗೆಲ್ಲದೇ ಇದ್ದರೆ, ಬಿಜೆಪಿಗೆ ಜೆಡಿಎಸ್ ಬೆಂಬಲಿಸಬಹುದು ಎಂದು ಹೊರಟ್ಟಿ‌ ಹೇಳಿಕೆ ನೀಡಿದ್ದರು ಅದರ ಬೆನ್ನೆಲ್ಲೆ ಇಂದು ಸಿಎಂ ಭೇಟಿ ಮಾಡಿದ್ದು ತೀವ್ರ ಕುತೂಹಲ ಕೆರಳಿಸಿದೆ.

ಜೆಡಿಎಸ್ ನಾಯಕರ ಸಂದೇಶವನ್ನು ಹೊರಟ್ಟಿ ಹೊಂತು ತಂದಿದ್ದರಾ? ಅನುವಾರ್ಯ ಸ್ಥಿತಿ ನಿರ್ಮಾಣವಾದಲ್ಲಿ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುವ ಕುರಿತು ಜೆಡಿಎಸ್ ನಿಲುವನ್ನು ವ್ಯಕ್ತಪಡಿಸಲು ಬಂದಿದ್ದರಾ ಎನ್ನುವ ಪ್ರಶ್ನೆ ಮೂಡಿಸಿದೆ.

ತನ್ವೀರ್ ಸೇಠ್ ಆರೋಗ್ಯ ಮಾಹಿತಿ ನೀಡಿದ‌ ಸೋಮಣ್ಣ:

ಮಾಜಿ ತನ್ವೀರ್ ಸೇಠ್ ಆರೋಗ್ಯದ ಬಗ್ಗೆ ಸಚಿವ ವಿ.ಸೋಮಣ್ಣ ಸಿಎಂ ಮಾಹಿತಿ ನೀಡಿದರು.ಮೈಸೂರಿಗೆ ತೆರಳಿ
ತನ್ವೀರ್ ಸೇಠ್ ಆರೋಗ್ಯ ವಿಚಾರಿಸುವಂತೆ ಸೋಮಣ್ಣ‌ಗೆ ಖುದ್ದು ಸಿಎಂ ಸೂಚಿಸಿದ್ದು ಅದರಂತೆ ನಿನ್ನೆ ಸಂಜೆ ಮೈಸೂರಿಗೆ ತೆರಳಿ ತನ್ವೀರ್ ಆರೋಗ್ಯ ವಿಚಾರಿಸಿದ್ದ ಸಚಿವ ಸೋಮಣ್ಣ ಇಂದು ಅದರ ಬಗ್ಗೆ ಮಾಹಿತಿ ನೀಡಿದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.