ETV Bharat / state

ಅವ್ಯವಸ್ಥೆಗಳ ಮಹಾತಾಂಡವದಲ್ಲಿ ಪ್ರಾಣವಾಯು ಆಕ್ಸಿಜನ್​ ಜತೆ ಆಂಬುಲೆನ್ಸ್​ ಅಭಾವ! - Covid 19 in Karnatka

ಪ್ರತಿನಿತ್ಯ ಮಹಾನಗರದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು ಪ್ರಮಾಣ ಗಣನೀಯವಾಗಿ ಏರಿಕೆ ಆಗುವುದನ್ನು ಸಹ ಗುಣಮಟ್ಟದ ಆಂಬುಲೆನ್ಸ್ ಸೇವೆ ತಪ್ಪಿಸಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಹಾನಗರದಲ್ಲಿ ರೋಗಿಗಳ ಅಂತ್ಯಸಂಸ್ಕಾರಕ್ಕೆ ಸರದಿ ಸಾಲಲ್ಲಿ ನಿಂತ ಅನೇಕ ಆಂಬುಲೆನ್ಸ್ ಗಳು ಜನರ ಸೇವೆಗೆ ಲಭಿಸುವುದು ಕಿಂತ ನಿಂತಲ್ಲೇ ನಿಂತು ತಮ್ಮ ಸೇವೆಯ ಸದ್ಬಳಕೆಯಿಂದ ವಂಚಿತವಾಗುತ್ತಿವೆ.

ಆಂಬುಲೆನ್ಸ್​
ಆಂಬುಲೆನ್ಸ್​
author img

By

Published : May 14, 2021, 4:09 AM IST

ಬೆಂಗಳೂರು: ಒಂದೆಡೆ ಆಮ್ಲಜನಕದ ಕೊರತೆಯಿಂದಾಗಿ ಸಾಕಷ್ಟು ಮಂದಿ ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಈ ಸಂದರ್ಭ ಆಮ್ಲಜನಕ ಆಳವಡಿಕೆಯಾಗಿರುವ ಆಂಬುಲೆನ್ಸ್​ಗಳ ಅಗತ್ಯ ಮಹಾನಗರಕ್ಕೆ ಎದುರಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ಆಂಬುಲನ್ಸ್ ಸೇವೆ ಸಲ್ಲಿಸುತ್ತಿರುವ ಅನೇಕ ಸಂಸ್ಥೆಗಳು ಎಂದು ಮಹಾನಗರದಲ್ಲಿ ತಮ್ಮ ಸೇವೆಯನ್ನು ಆರಂಭಿಸಿವೆ. ಕರೆ ಮಾಡಿದ ಅರ್ಧಗಂಟೆಯಲ್ಲಿ ರೋಗಿ ಇರುವ ಸ್ಥಳವನ್ನು ತಲುಪಿ ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯಕ್ಕೆ ಸಿದ್ಧವಾಗಿವೆ. ಈ ಮೂಲಕ ಬಹು ಅಮೂಲ್ಯವಾದ ಜೀವ ಉಳಿಸುವ ಕಾಯಕದಲ್ಲಿ ಪ್ರತಿಯೊಂದು ಸಂಸ್ಥೆಗಳು ನಿರತವಾಗಿವೆ. ರಾಜ್ಯ ಸರ್ಕಾರದ ಆಂಬುಲೆನ್ಸ್ ಅಲ್ಲದೆ ವಿವಿಧ ಖಾಸಗಿ ಆಸ್ಪತ್ರೆಗಳು ಹಾಗೂ ಸೇವಾ ಸಂಸ್ಥೆಗಳು ಕೂಡ ಆಂಬುಲೆನ್ಸ್ ಸೇವೆ ಒದಗಿಸುತ್ತಿವೆ.

ಆಂಬುಲೆನ್ಸ್​
ಆಂಬುಲೆನ್ಸ್​

ಪ್ರತಿನಿತ್ಯ ಮಹಾನಗರದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು ಪ್ರಮಾಣ ಗಣನೀಯವಾಗಿ ಏರಿಕೆ ಆಗುವುದನ್ನು ಸಹ ಗುಣಮಟ್ಟದ ಆಂಬುಲೆನ್ಸ್ ಸೇವೆ ತಪ್ಪಿಸಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಹಾನಗರದಲ್ಲಿ ರೋಗಿಗಳ ಅಂತ್ಯಸಂಸ್ಕಾರಕ್ಕೆ ಸರದಿ ಸಾಲಲ್ಲಿ ನಿಂತ ಅನೇಕ ಆಂಬುಲೆನ್ಸ್ ಗಳು ಜನರ ಸೇವೆಗೆ ಲಭಿಸುವುದು ಕಿಂತ ನಿಂತಲ್ಲೇ ನಿಂತು ತಮ್ಮ ಸೇವೆಯ ಸದ್ಬಳಕೆಯಿಂದ ವಂಚಿತವಾಗುತ್ತಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುತಿಸಿದ ವಿವಿಧ ವಿದ್ಯುತ್ ಚಿತಾಗಾರದ ಮುಂದೆ ನಿತ್ಯ ಸರದಿ ಸಾಲಿನಲ್ಲಿ ನಿಂತಿರುವ ಆಂಬುಲೆನ್ಸ್ ಗಳು ಕಾಣಸಿಗುತ್ತವೆ. ಇವರಲ್ಲಿ ಬಹುತೇಕ ಆಂಬುಲೆನ್ಸ್ ಗಳು ಜೀವರಕ್ಷಕ ಸಾಧನವನ್ನು ಹೊತ್ತು ವ್ಯರ್ಥವಾಗಿ ಇಲ್ಲಿ ನಿಂತಿರುತ್ತವೆ. ಇದನ್ನು ತಪ್ಪಿಸುವ ಕಾರ್ಯಕ್ಕಾಗಿ ಬೆಂಗಳೂರು ನಗರ ಆಡಳಿತ ಹಾಗೂ ರಾಜ್ಯ ಸರ್ಕಾರ ಖಾಸಗಿ ಟೆಂಪೋ ಟ್ರಾವೆಲರ್ ಗಳನ್ನು ತಾತ್ಕಾಲಿಕ ಆಂಬುಲೆನ್ಸ್ ಗಳನ್ನಾಗಿ ಪರಿವರ್ತಿಸಿದೆ.

ಒಂದೆಡೆ ಅಂತ್ಯಸಂಸ್ಕಾರಕ್ಕೆ ತೆರಳುವ ಶವ ಸಾಗಿಸುವ ಹಾಗೂ ಅಷ್ಟೇನು ಗಂಭೀರ ಸ್ಥಿತಿಯಲ್ಲಿ ಇಲ್ಲದ ಹಾಗೂ ಆಕ್ಸಿಜನ್ ಪೂರೈಕೆಯ ಅಗತ್ಯವಿಲ್ಲದ ರೋಗಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯಕ್ಕೆ ಬಳಕೆಯಾಗುತ್ತಿದೆ. ಕೋವಿಡ್ ರೋಗಿಗಳಲ್ಲಿ ಆಮ್ಲಜನಕ ಕೊರತೆ ಎದುರಿಸುತ್ತಾ ಉಸಿರು ಚೆಲ್ಲುತ್ತಿರುವ ರೋಗಿಗಳ ರಕ್ಷಣೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇತ್ತೀಚಿಗೆ 371 ಅಂಬುಲೆನ್ಸ್ ಗಳನ್ನು ಸೇವೆಗೆ ನೀಡಿದೆ. ಸಾವಿರಕ್ಕೂ ಹೆಚ್ಚು ಆಂಬುಲೆನ್ಸ್ ಗಳು ಬೆಂಗಳೂರು ಮಹಾನಗರದಲ್ಲಿ ಕೋವಿಡ್ ರೋಗಿಗಳ ರಕ್ಷಣೆ ಕಾರ್ಯದಲ್ಲಿ ತೊಡಗಿವೆ. ಇವುಗಳ ಜೊತೆಗೆ ಬೆಂಗಳೂರು ಮಹಾನಗರದಲ್ಲಿ ಇರುವ ಒಟ್ಟು ಟೆಂಪೋ ಟ್ರಾವೆಲರ್ ಗಳಲ್ಲಿ ಶೇ.50ಕ್ಕೂ ಹೆಚ್ಚು ವಾಹನಗಳು ಆಂಬುಲೆನ್ಸ್ ಗಳಾಗಿ ಪರಿವರ್ತನೆಗೊಂಡು ಸೇವೆ ಸಲ್ಲಿಸುತ್ತಿವೆ.

ಆಂಬುಲೆನ್ಸ್​
ಆಂಬುಲೆನ್ಸ್​

ಸರ್ಕಾರದ ಮೇಲೆ ಅವಲಂಬಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋರಿಕೆಯ ಮೇರೆಗೆ ತಾತ್ಕಾಲಿಕವಾಗಿ ಆಂಬುಲೆನ್ಸ್ ಗಳಾಗಿ ಪರಿವರ್ತನೆಗೊಂಡಿರುವ ಟೆಂಪೋ ಟ್ರಾವೆಲರ್ ಗಳು ನಿರೀಕ್ಷಿತ ಪ್ರಮಾಣದಲ್ಲಿ ಸೇವೆಗೆ ಬಳಕೆಯಾಗುತ್ತಿಲ್ಲ. ಕಾರಣ ಇದರಲ್ಲಿ ಆಕ್ಸಿಜನ್ ಸೌಲಭ್ಯ ಅಳವಡಿಸದ ಹಿನ್ನೆಲೆ ಮನೆಯಲ್ಲಿಯೇ ವಾರಂಟ್ ಏನಾಗಿದೆ ಉಸಿರಾಟದ ಸಮಸ್ಯೆ ಎದುರಿಸಿ ಆಸ್ಪತ್ರೆಗೆ ತೆರಳುವವರಿಗೆ ಇದು ಪ್ರಯೋಜನಕಾರಿ ಅಲ್ಲ. ಈ ಹಿನ್ನೆಲೆ ನಗರದ ವಿವಿಧ ಬಡಾವಣೆಗಳ ಬಳಿ ಸುಮ್ಮನೆ ನಿಂತಿರುವುದಕ್ಕೆ ಸೀಮಿತವಾಗಿವೆ. ಇದರ ಚಾಲಕರಾಗಿರುವ ನಮಗೆ ಆತಂಕ ಉಂಟಾಗುತ್ತಿದೆ. ಕೋವಿಡ್ ಮೊದಲ ಅಲೆ ಸಂದರ್ಭ ನಮ್ಮ ಸೇವೆ ಬಳಸಿಕೊಂಡು ಪೂರ್ಣಪ್ರಮಾಣದ ಬಾಡಿಗೆ ವಿತರಿಸಿ ರಲಿಲ್ಲ. ಈ ಸಾರಿ ಪ್ರಕರಣಗಳು ಹೆಚ್ಚಿದ್ದರೂ ಸಹ ಹಿಂದಿನಷ್ಟು ಬಳಕೆ ಆಗಿಲ್ಲ. ನಗರದಲ್ಲಿ ಆಮ್ಲಜನಕ ಅಳವಡಿಕೆ ಇರುವ ಅಂಬುಲೆನ್ಸ್ ಗಳ ಕೊರತೆ ಇದೆ. ಈ ಹಿನ್ನೆಲೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದು ತಾತ್ಕಾಲಿಕವಾಗಿ ಟೆಂಪೋ ಟ್ರಾವೆಲ್ಲರ್ ಗಳನ್ನು ಆಂಬುಲೆನ್ಸ್ ಗಳಾಗಿ ಪರಿವರ್ತಿಸಿದ ಮಾದರಿಯಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯನ್ನು ಅಳವಡಿಸುವಂತೆ ಕೋರಿದ್ದೇವೆ. ಈ ಕಾರ್ಯ ಸರ್ಕಾರದಿಂದ ಆದಲ್ಲಿ ಮೂರನೇ ಅಲೆಯನ್ನು ನಾವು ಸುಲಭವಾಗಿ ಎದುರಿಸಬಹುದು ಆಗಿದೆ ಎಂದು ಬೆಂಗಳೂರು ನಗರ ಟೆಂಪೋ ಟ್ರಾವೆಲರ್ ಸಂಘದ ಹಿರಿಯ ಸದಸ್ಯರಾದ ಜಯರಾಮರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಎಚ್ಚರಿಕೆಯೇ ಪರಿಹಾರಮಹಾನಗರ ಸೇರಿದಂತೆ ರಾಜ್ಯದಲ್ಲಿ ಆಂಬುಲೆನ್ಸ್ ಗಳ ಕೊರತೆ ಇಲ್ಲ ಎನ್ನುತ್ತಿರುವ ಆರೋಗ್ಯ ಸಚಿವ ಡಾ ಕೆ ಸುಧಾಕರ್, ನಾವು ಜನರ ಜೀವ ರಕ್ಷಣೆಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಜನ ಸಾಧ್ಯವಾದಷ್ಟು ತಮ್ಮ ಆರೋಗ್ಯದ ವಿಚಾರದಲ್ಲಿ ಕಾಳಜಿ ವ್ಯಕ್ತಪಡಿಸಬೇಕು. ಸಣ್ಣಪ್ರಮಾಣದಲ್ಲಿ ಅನಾರೋಗ್ಯ ಕಾಡಿದ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಕೋವಿಡ್ ಸಮಸ್ಯೆ ಉಲ್ಬಣಗೊಂಡರೆ ನಿಯಂತ್ರಣಕ್ಕೆ ತರುವುದು ಬಹಳ ಕಷ್ಟ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ಮುಂಬರುವ ದಿನಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಆಂಬುಲೆನ್ಸ್ ಗಳ ಅಗತ್ಯತೆ ಇನ್ನಷ್ಟು ಹೆಚ್ಚಲಿದ್ದು ಸರ್ಕಾರ ಈ ನಿಟ್ಟಿನಲ್ಲಿ ಇನ್ನಷ್ಟು ಮುಂಜಾಗ್ರತೆ ಹಾಗೂ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.