ETV Bharat / state

ಪಾದರಾಯನಪುರ ಗಲಾಟೆ ಮಾಸ್ಟರ್​ಮೈಂಡ್​ ಬಿಚ್ಚಿಟ್ಟ ಇಂಚಿಂಚು ಮಾಹಿತಿ: ಗಲಭೆ ಹಿಂದೆ ಕಾರ್ಪೊರೇಟರ್ ಕೈವಾಡ ಶಂಕೆ - ಮಾಸ್ಟರ್​ಮೈಂಡ್ ಇರ್ಫಾನ್

ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಂಧಿತನಾದ ಆರೋಪಿ ಇರ್ಫಾನ್, ಬೆಚ್ಚಿಬೀಳಿಸುವ ಮಾಹಿತಿಯನ್ನು ಹೊರ ಹಾಕಿದ್ದಾನೆ ಎನ್ನಲಾಗ್ತಿದೆ.

irfan
ಇರ್ಫಾನ್​
author img

By

Published : Apr 28, 2020, 11:42 AM IST

ಬೆಂಗಳೂರು: ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಂಧಿತನಾದ ಪ್ರಮುಖ ಆರೋಪಿ ಕೆಲವೊಂದು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದರಾಯನಪುರ ನಿವಾಸಿ ಇರ್ಫಾನ್​ನನ್ನು ಬಂಧಿಸಲಾಗಿದ್ದು, ಗಲಭೆ ಪೂರ್ವನಿಯೋಜಿತವಾಗಿದ್ದು ಎಂಬ ವಿಚಾರವನ್ನು ಪೊಲೀಸ್​ ವಿಚಾರಣೆ ವೇಳೆ ಹೇಳಿದ್ದಾನೆ ಎನ್ನಲಾಗ್ತಿದೆ.

ಮಾಸ್ಟರ್ ಮೈಂಡ್​​ಗಳ ಪ್ರಿಪ್ಲಾನ್ ಇಂಚಿಂಚೂ ಮಾಹಿತಿ:

ಏ.19 ರಂದು 58 ಜನರನ್ನು ಕ್ವಾರಂಟೈನ್ ಮಾಡಲು ಕೊರೊನಾ ವಾರಿಯರ್ಸ್ ಬೆಂಗಳೂರಿನ ಪಾದರಾಯನಪುರಕ್ಕೆ ತೆರಳಿದ್ದರು. ಈ ವಿಷಯ ಮೊದಲೇ ತಿಳಿದಿದ್ದ ಆರೋಪಿಗಳಾದ ಇರ್ಫಾನ್, ವಾಜೀದ್, ಜಬಿ, ಕಬೀರ್, ಲೇಡಿ ಡಾನ್ ಫರ್ಜಾನಾ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕೆಲವೊಂದು ಯೋಚನೆ ರೂಪಿಸಿದ್ದರಂತೆ.

ಇಲ್ಲಿಗೆ ಬರುವ ಅಧಿಕಾರಿಗಳು, ವೈದ್ಯರು, ಪೊಲೀಸರು ಮೇಲೆ ಹಲ್ಲೆ ನಡೆಸಿ ಸೀಲ್​ಡೌನ್​ ಬ್ರೇಕ್​ ಮಾಡುವುದು. ಹಾಕಿದ್ದ ಪೆಂಡಾಲ್ ಕಿತ್ತಾಕಿ ಪೊಲೀಸರ ಮೇಲೆ ಹಲ್ಲೆ ಮಾಡಲು ವಾಜೀದ್, ಜಬಿ ಟೀಂ ಮುಂದಾಗಬೇಕು. ಸೀಲ್​ಡೌನ್ ಬ್ರೇಕ್ ಮಾಡಲು ಫರ್ಜಾನಾ, ಕಬೀರ್ ಮುಂದಾಗಬೇಕು. ಹೀಗೆ ಪೂರ್ವನಿಯೋಜಿತವಾಗಿ ಮೊದಲೇ ಎಲ್ಲಾ ರೀತಿಯ ಯೋಜನೆ ರೂಪಿಸಲಾಗಿತ್ತು ಎಂಬ ವಿಚಾರವನ್ನು ಪೊಲೀಸರ ಎದುರು ಇರ್ಫಾನ್​ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗ್ತಿದೆ.

ಘಟನೆಯ ಕಿಂಗ್ ಪಿನ್ ಇರ್ಫಾನ್ ಹಿಂದೆ ಒಬ್ಬ ಕಾರ್ಪೊರೇಟರ್ ಇರೋದು ತನಿಖೆಯಲ್ಲಿ ತಿಳಿದು ಬಂದಿದ್ದು, ಆ ಕಾರ್ಪೊರೇಟರ್​ನಿಂದಲೇ ಇರ್ಫಾನ್​​ಗೆ ಕೊರೊನಾ ವಾರಿಯರ್ಸ್ ಪಾದರಾಯನಪುರಕ್ಕೆ ಬರುವ ಮಾಹಿತಿ ಸಿಕ್ಕಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗ್ತಿದೆ. ಸದ್ಯ ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದು, ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.