ETV Bharat / state

ಕುರುಬ ಸಮುದಾಯದ ಬೃಹತ್ ಸಮಾವೇಶದಲ್ಲಿ ಕೋವಿಡ್​ ನಿಯಮ ಮಾಯ - ಕುರುಬ ಸಮುದಾಯದ ಬೃಹತ್ ಸಮಾವೇಶ

ಸಮಾವೇಶದಲ್ಲಿ ಸಾಮಾಜಿಕ ಅಂತರವನ್ನಂತೂ ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು. ಸೇರಿದ್ದ ಲಕ್ಷಾಂತರ ಮಂದಿಯಲ್ಲಿ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ವೇದಿಕೆ ಮೇಲೆ ಕೂತಿದ್ದ ಗಣ್ಯರೂ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ತೋರಿದ್ದರು.

Massive convention of the Kuruba community
ಕುರುಬ ಸಮುದಾಯದ ಬೃಹತ್ ಸಮಾವೇಶ
author img

By

Published : Feb 8, 2021, 8:24 AM IST

ಬೆಂಗಳೂರು: ಎಸ್ ಟಿ ಮೀಸಲಾತಿಗೆ ಆಗ್ರಹಿಸಿ ಭಾನುವಾರ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಕುರುಬ ಸಮುದಾಯದ ಬೃಹತ್ ಸಮಾವೇಶ ನಡೆಯಿತು. ಆದರೆ ಲಕ್ಷಾಂತರ ಜನ ಸೇರಿದ್ದ ಸಮಾವೇಶದಲ್ಲಿ ಕೋವಿಡ್ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು.

ಸಮಾವೇಶದಲ್ಲಿ ಜನಸಾಗರವೇ ಹರಿದು ಬಂದಿತ್ತು. ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆದರೆ ಸಚಿವರು, ರಾಜಕಾರಣಿಗಳು ಪಾಲ್ಗೊಂಡ ಈ ಸಮಾವೇಶದಲ್ಲಿ ಯಾವುದೇ ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಸಾಮಾಜಿಕ ಅಂತರವನ್ನಂತೂ ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು. ಸೇರಿದ್ದ ಲಕ್ಷಾಂತರ ಮಂದಿಯಲ್ಲಿ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ವೇದಿಕೆ ಮೇಲೆ ಕೂತಿದ್ದ ಗಣ್ಯರೂ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ತೋರಿದ್ದರು.

ಸಿದ್ದರಾಮಯ್ಯ ಗೈರು: ಇನ್ನು ಬೃಹತ್ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗೈರಾಗಿದ್ದರು. ಈ‌ ಮುಂಚಿನಿಂದಲೂ ಎಸ್ ಟಿ ಹೋರಾಟದಲ್ಲಿ ಗುರುತಿಸಿಕೊಳ್ಳದ ಸಿದ್ದರಾಮಯ್ಯ, ಇಂದು ನಡೆದ ಬೃಹತ್ ಸಮಾವೇಶಕ್ಕೆ ನಿರೀಕ್ಷೆಯಂತೆಯೇ ಗೈರಾಗಿದ್ದರು. ಆದರೆ ಸಚಿವ ಕೆ.ಎಸ್.ಈಶ್ವರಪ್ಪ, ಎಚ್.ವಿಶ್ವನಾಥ್ ಪರೋಕ್ಷವಾಗಿ ಸಿದ್ದರಾಮಯ್ಯರನ್ನು ತಮ್ಮ ಭಾಷಣದಲ್ಲಿ ಟೀಕಿಸಿದರು.

ಇತ್ತ ಮಾಜಿ ಸಚಿವ ಎಚ್.ಎಂ ರೇವಣ್ಣ ಅವರು ತಮ್ಮ ಭಾಷಣದ ವೇಳೆ ಸಿದ್ದರಾಮಯ್ಯರ ಹೆಸರು ಪ್ರಸ್ತಾಪಿಸುತ್ತಿದ್ದ ಹಾಗೇ ನೆರೆದಿದ್ದ ಲಕ್ಷಾಂತರ ಮಂದಿ ಜೋರಾಗಿ ಹರ್ಷೋದ್ಘಾರ ಮಾಡಿದರು.

ಓದಿ : ದೇವನಹಳ್ಳಿಯಲ್ಲಿ ಶಶಿಕಲಾ ಪರ ಹಾಕಿದ್ದ ಬ್ಯಾನರ್​ಗಳಿಗೆ​ ಬೆಂಕಿ ಇಟ್ಟ ಕನ್ನಡಪರ ಸಂಘಟನೆಗಳು

ಪೊಲೀಸರ ಹರಸಾಹಸ: ಇತ್ತ ಲಕ್ಷಾಂತರ ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಪೊಲೀಸರಿಗೆ ಜನರನ್ನು ನಿಯಂತ್ರಿಸುವುದೇ ಸವಾಲಾಗಿತ್ತು. ಜನರು ವೇದಿಕೆ ಮುಂಭಾಗದ ಬ್ಯಾರಿಕೇಡ್ ಬಳಿ ನುಗ್ಗಿ ಬರುವ ಮೂಲಕ ನೂಕು ನುಗ್ಗಲು ಉಂಟಾಯಿತು.‌ ಸ್ವಾಮಿಗಳು, ಸಚಿವರು ಎಷ್ಟೇ ಮನವಿ ಮಾಡಿದರೂ ನೆರೆದಿದ್ದವರ ನೂಕಾಟ ತಳ್ಳಾಟ ಕಡಿಮೆಯಾಗಲಿಲ್ಲ. ಇತ್ತ ಪೊಲೀಸರು ಅತಿ ಉತ್ಸಾಹದಲ್ಲಿದ್ದ ಜನರ ಗುಂಪನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.