ETV Bharat / state

ಮರಾಠ ನಿಗಮ ಕಿಡಿ.. ಕೆಆರ್‌ಪುರದಲ್ಲಿ ಗಡಿ ಬಂದ್ ಮಾಡಿ ಕನ್ನಡ ಪರ ಸಂಘಟನೆಯ ಪ್ರತಿಭಟನೆ - ಕರ್ನಾಟಕ ಬಂದ್

ಪ್ರತಿಭಟನೆಯಲ್ಲಿ ನೂರಾರು ಕಾರ್ಯಕತರ್ಯರು ಭಾಗಿಯಾಗಿದ್ದು, ಬಿಬಿಎಂಪಿ ಮುಂಭಾಗದಿಂದ ಜಾಥಾ ನಡೆಸಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ಬಿಬಿಎಂಪಿ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ..

pro kannada activists Blocked boarder in KR Pura
ಕನ್ನಡ ಪರ ಸಂಘಟನೆಯ ಪ್ರತಿಭಟನೆ
author img

By

Published : Nov 28, 2020, 12:28 PM IST

ಬೆಂಗಳೂರು : ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ನಗರದ ಕೆಆರ್​​​ಪುರ ಗಡಿಯಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಕನ್ನಡ ಪರ ಸಂಘಟನೆಯ ಕಾರ್ಯಯಕರ್ತರು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕೆಆರ್​​ ಪುರದಲ್ಲಿ ಗಡಿ ಬಂದ್ ಮಾಡಿ ಕನ್ನಡ ಪರ ಸಂಘಟನೆಯ ಪ್ರತಿಭಟನೆ

ಇದೀಗ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕತರ್ಯರು ಭಾಗಿಯಾಗಿದ್ದು, ಬಿಬಿಎಂಪಿ ಮುಂಭಾಗದಿಂದ ಜಾಥಾ ನಡೆಸಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆ ಬಿಬಿಎಂಪಿ ಕಚೇರಿ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.

ಮರಾಠ ನಿಗಮ ರಚನೆ ಖಂಡಿಸಿ ಡಿಸೆಂಬರ್ 5ರಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದ್ದು, ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಅಲ್ಲಿಯವರೆಗೂ ನಗರದ ಹಲವೆಡೆ ಪ್ರತಿಭಟನೆ ಮುಂದುವರೆಸುವುದಾಗಿ ಕನ್ನಡ ಪರ ಸಂಘಟನೆಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.