ಬೆಂಗಳೂರು: ನಮ್ಮಿಂದ ಯಾರೂ ಕಾಂಗ್ರೆಸ್ಗೆ ಹೋಗಲ್ಲ. ಕಾಂಗ್ರೆಸ್ನಿಂದಲೇ ಬಹಳಷ್ಟು ಜನ ಬಿಜೆಪಿಗೆ ಬರ್ತಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಮರಳಿ ಬರುವಂತೆ ಡಿಕೆಶಿ ಆಹ್ವಾನ ವಿಚಾರವಾಗಿ ಪ್ರತಿಕ್ರಿಸಿದ ಅವರು, ನಾವೆಲ್ಲ ಅನರ್ಹರಾದಾಗ ಡಿಕೆಶಿ, ಸಿದ್ದರಾಮಯ್ಯ ಅವರು ಏನೆಲ್ಲ ಮಾತಾಡಿದಾರೆ ಅಂತ ಸದನದಲ್ಲಿ ಎಲ್ಲರೂ ನೋಡಿದ್ದಾರೆ. ನಮ್ಮ ರಾಜಕೀಯ ಸಮಾಧಿ ಆಯ್ತು ಅಂತೆಲ್ಲ ಮಾತಾಡಿದರು. ಸಮಾಧಿ ಆದವರನ್ನು ಈಗ ಡಿಕೆಶಿ ಮತ್ಯಾಕೆ ಕರೀತಿದಾರೆ ಎಂದು ಸಚಿವ ಬಿ ಸಿ ಪಾಟೀಲ್ ತಿರುಗೇಟು ನೀಡಿದರು.
ಅವರು ಕರೀತಿದಾರೆ, ಬಿಟ್ಟು ಹೋದವರು ಬರಬಹುದು ಅಂತ ಕರೀತಿದಾರೆ. ನಮ್ಮವರು ಯಾರೂ ಅರ್ಜಿ ಹಾಕಿಲ್ಲ. ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಕೊರತೆ ಆಗಿರಬಹುದು. ಹಾಗಾಗಿ ಹಳೇ ಗಂಡನ ಪಾದವೇ ಗತಿ ಅಂತ ಕರೀತಿರಬಹುದು ಎಂದರು.
ಬಿಜೆಪಿ ತೊರೆದ ಮಾಜಿ ಶಾಸಕ ಯು.ಬಿ. ಬಣಕಾರ್ ಬಗ್ಗೆ ಪ್ರತಿಕ್ರಿಯಿಸುತ್ತಾ, ಯು.ಬಿ. ಬಣಕಾರ್ ಅವರು ಯಾವ ಪಕ್ಷ ಸೇರಿದ್ದಾರೆ ಅಂತ ಗೊತ್ತಿಲ್ಲ. ಅವರು ಕಾಂಗ್ರೆಸ್ ಸೇರಿದ್ಮೇಲೆ ನನ್ನ ಎದುರಾಳಿ ಆಗಿ ಸ್ಪರ್ಧಿಸಬಹುದು. ಬಣಕಾರ್ ಅವರನ್ನು ನಾನು ಹೊಸದಾಗಿ ಎದುರಿಸ್ತಿಲ್ಲ. ಈಗಾಗಲೇ ಮೂರು ಸಲ ಅವರ ವಿರುದ್ಧ ಕುಸ್ತಿ ಮಾಡಿದ್ದೇನೆ.
ಅವರನ್ನು ಮೂರು ಸಲ ಸೋಲಿಸಿದ್ದೇನೆ. ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಲಿ. ನಾನೇನು ಅಭಿವೃದ್ಧಿ ಮಾಡಿದೀನಿ ಅಂತ ನಾನು ಹೇಳ್ತೀನಿ. ನಾನು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಪುಸ್ತಕವನ್ನೇ ಪ್ರಿಂಟ್ ಮಾಡಿ ಜನರಿಗೆ ಕೊಡ್ತೀನಿ. ಯಾರು ಬೇಕು ಅಂತ ಜನ ತೀರ್ಮಾನ ಮಾಡ್ತಾರೆ ಎಂದರು.
ನಾನು ರಾಜೀನಾಮೆ ಕೊಡ್ತಿದ್ದ ಹಾಗೆ ಬಣಕಾರ್ ಉಗ್ರಾಣ ನಿಗಮದ ಅಧ್ಯಕ್ಷರಾದ್ರು. ನಾವು ಆರು ತಿಂಗಳು ವನವಾಸ ಅನುಭವಿಸಿದೆವು. ನಾವು ಅನರ್ಹರಾದಾಗ ಬಹಳಷ್ಟು ಜನ ಹಾಲು ಕುಡಿದರು. ನನಗಿಂತ ಮುಂಚೆ ಬಣಕಾರ್ ಆರು ತಿಂಗಳು ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದರು. ಬಣಕಾರ್ ಅವರಿಗೆ ನಾನು ಯಾವುದೇ ಕಿರುಕುಳ ಕೊಟ್ಟಿಲ್ಲ. ಯಾವ ರೀತಿ ಕಿರುಕುಳ ಕೊಟ್ಟೆ ಅಂತ ಹೇಳಲಿ. ನನಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದು ಅವರಿಗೆ ಕಿರುಕುಳ ಆಯ್ತಾ ಎಂದು ಪ್ರಶ್ನಿಸಿದರು.
ಮುಂಬರುವ ಚುನಾವಣೆಗೆ ತಯಾರಿ ಮಾಡ್ಕೊಳ್ತಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನ ನನ್ನನ್ನು ಇಷ್ಟಪಟ್ಟಿದ್ದಾರೆ. ಹಾಗಾಗಿ ಮೂರ್ನಾಲ್ಕು ಸಲ ಗೆಲ್ಲಿಸಿದ್ದಾರೆ. ಈ ಸಲವೂ ಖಂಡಿತವಾಗಿ ಜನ ಗೆಲ್ಲಿಸ್ತಾರೆ ಅಂತ ವಿಶ್ವಾಸ ಇದೆ. ಬಣಕಾರ್ ಅವರು ಜನ್ಮದಲ್ಲಿ ನೋಡಲಾಗಷ್ಟು ಅಭಿವೃದ್ಧಿ ನಾನು ಬಂದ ಮೇಲೆ ಆಗಿದೆ. ಅವರು ನನ್ನ ಕಾಲದಲ್ಲಿ ಗುತ್ತಿಗೆದಾರರಿಗೆ ಕೆಲಸ ತಗೊಂಡು, ಲಾಭ ಪಡೆದಿದ್ದಾರೆ. ಈಗ ನನ್ನ ಮೇಲೆ ಕಿರುಕುಳ ಆರೋಪ ಮಾಡ್ತಿದಾರೆ. ಇದನ್ನೆಲ್ಲ ಆ ದೇವರು ನೋಡುತ್ತಿದ್ದಾನೆ ಎಂದರು.
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವ್ಯಾರೂ ಅವರನ್ನು ಮರೆತಿಲ್ಲ. ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಹೈಕಮಾಂಡ್ಗೆ ಕೇಳಬೇಕು. ಜೆಡಿಎಸ್ ಸೇರುವ ಸುದ್ದಿ ಹರಿದಾಡ್ತಿರುವ ವಿಚಾರವೂ ಗೊತ್ತಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ನೀವು ಮಾಡಿದ ತಪ್ಪಿಗೆ ಜೈಲು ಸೇರಿದ್ರಿ.. ಇದರಲ್ಲಿ ಬಿಜೆಪಿ ತಪ್ಪೇನಿದೆ: ಡಿಕೆಶಿಗೆ ಸಚಿವ ಬಿ.ಸಿ. ಪಾಟೀಲ್ ಪ್ರಶ್ನೆ