ETV Bharat / state

ಹೊರಗಡೆಯಿಂದ ಏರ್ ಶೋ ವೀಕ್ಷಣೆಗೆ ನೂರೊಂದು ನಿಯಮ: ಜನರ ಅಸಮಾಧಾನ - ಏರ್ ಪೋರ್ಸ್  ಸ್ಟೇಷನ್

ಈ ಬಾರಿ ಕೋವಿಡ್ ಹಿನ್ನೆಲೆ ಏರ್​ ಶೋ ವೀಕ್ಷಣೆಗೆ ಸೀಮಿತ ಜನರಿಗಷ್ಟೇ ಅವಕಾಶ ನೀಡಲಾಗಿದೆ. ಅದರಲ್ಲೂ ಕೋವಿಡ್ ಟೆಸ್ಟ್ ವರದಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಲವು ನಿಯಮ ಜಾರಿ ಮಾಡಲಾಗಿದೆ.

air show 2021
ಏರ್ ಶೋ
author img

By

Published : Feb 3, 2021, 7:35 PM IST

ಯಲಹಂಕ: ಏರ್ ಪೋರ್ಟ್ ರಸ್ತೆಯ ಯಲಹಂಕದ ಏರ್ ಪೋರ್ಸ್ ಸ್ಟೇಷನ್​ನಲ್ಲಿ ಇಂದಿನಿಂದ ಮೂರು ದಿನಗಳ ಏರೋ ಇಂಡಿಯಾ 2021 ನಡೆಯಲಿದ್ದು, ಏರ್ ಪೋರ್ಸ್ ಸ್ಟೇಷನ್​ನಲ್ಲಿ ಏರ್ ಶೋ ನೋಡಲು ವ್ಯವಸ್ಥೆ ಮಾಡಲಾಗಿದೆ. ಆದರೆ, 10 ಪಟ್ಟು ಜನರು ಏರ್ ಪೋರ್ಸ್ ಹೊರಭಾಗದಿಂದ ನೋಡುತ್ತಾರೆ. ಹೊರಗಡೆಯಿಂದ ನೋಡುವುದಕ್ಕೂ ನೂರೊಂದು ನಿಯಮಗಳನ್ನ ಪಾಲನೆ ಮಾಡಬೇಕಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಹೊರಗಡೆಯಿಂದ ಏರ್ ಶೋ ವೀಕ್ಷಣೆಗೆ ನೂರೊಂದು ನಿಯಮಗಳು

ಲೋಹದ ಹಕ್ಕಿಗಳು ನಡೆಸುವ ವೈಮಾನಿಕ ಪ್ರದರ್ಶನ ನೋಡಲು ಸಾವಿರಾರು ಜನ ಯಲಹಂಕದ ಏರ್ ಫೋರ್ಸ್ ಸ್ಟೇಷನ್​ಗೆ ಬಂದಿದ್ದಾರೆ. ಈ ಬಾರಿ ಕೋವಿಡ್ ಹಿನ್ನೆಲೆ ಸಾರ್ವಜನಿಕರ ಪ್ರದರ್ಶನಕ್ಕೆ ಸೀಮಿತ ಜನರಿಗಷ್ಟೇ ಅವಕಾಶ ನೀಡಲಾಗಿದೆ. ಕೋವಿಡ್ ಟೆಸ್ಟ್ ವರದಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಲವು ನಿಯಮ ಜಾರಿ ಮಾಡಲಾಗಿದೆ.

ಏರ್ ಪೋರ್ಸ್ ಸ್ಟೇಷನ್ ಒಳಭಾಗದಲ್ಲಿ ಏರ್ ಶೋ ನೋಡುವ ಜನರಿಗಿಂತ ಅತಿ ಹೆಚ್ಚಿನ ಜನ ಹೊರಗಡೆಯಿಂದ ನೋಡುತ್ತಾರೆ, ಏರ್ ಪೋರ್ಸ್ ಮುಂಭಾಗದ ಹೆದ್ದಾರಿಯಲ್ಲಿ ಲೋಹದ ಹಕ್ಕಿಗಳ ಪ್ರದರ್ಶನವನ್ನು ಸ್ವಷ್ಟವಾಗಿ ನೋಡಬಹುದು ಹಾಗಾಗಿ ಸುತ್ತಮುತ್ತಲಿನ ಗ್ರಾಮದ ಜನರು ಸೇರಿದಂತೆ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಸಹ ತಮ್ಮ ವಾಹನಗಳನ್ನ ಪಾರ್ಕ್ ಮಾಡಿ ಏರ್ ಶೋ ಕಣ್ತುಂಬಿಕೊಳ್ಳುತ್ತಿದ್ದಾರೆ.

ಕಳೆದ ಬಾರಿ ನಡೆದ ಅಗ್ನಿ ಅವಘಡ ಮತ್ತು ಕೋವಿಡ್ -19 ಹಿನ್ನೆಲೆ ರಸ್ತೆ ಬದಿಯಲ್ಲಿ ನಿಂತು ನೋಡುವ ಜನರ ಮೇಲೂ ಹಲವು ನಿಯಮಗಳನ್ನು ಹಾಕಲಾಗಿದೆ. ಕಳೆದ ವರ್ಷ ಕೆರೆಯ ದಂಡೆಯ ಮೇಲೆ ನಿಂತು ಏರ್ ಶೋ ನೊಡುವ ಅವಕಾಶ ನೀಡಲಾಗಿತ್ತು. ಆದರೆ. ಈ ಕೆರೆಯ ದಂಡೆಯಿಂದ ನೋಡಲು ಅವಕಾಶ ನೀಡಿಲ್ಲ. ರಸ್ತೆಯ ಮತ್ತೊಂದು ಬದಿಗೆ ನೋಡಲು ಅವಕಾಶ ನೀಡಲಾಗಿದೆ. ಏರ್ಪೋರ್ಸ್ ಸುತ್ತಲು ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ರಸ್ತೆ ಬದಿಯಲ್ಲಿ ನಿಂತು ನೋಡುವ ಜನರ ಮೇಲು ಕಣ್ಣಿಡಲಾಗಿದೆ.

ಏರ್ ಶೋ ನೋಡಲು ನಿಂತ ಜನರನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಳುಹಿಸುತ್ತಿದ್ದಾರೆ. ಇದರಿಂದ ಕುಟುಂಬ ಸಮೇತರಾಗಿ ಬಂದವರು ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಬಾರಿ 5 ದಿನ ನಡೆದ ಏರ್ ಶೋ ಈ ಬಾರಿ 3 ದಿನಗಳು ಮಾತ್ರ ನಡೆಯಲಿದೆ, ಇದು ಸಹ ಜನರ ಬೇಸರಕ್ಕೆ ಕಾರಣವಾಗಿದೆ.

ಏರ್ ಶೋ ನೋಡಲು ರಸ್ತೆ ಬದಿಯಲ್ಲಿ ಸಾವಿರಾರು ಜನ ಸೇರಿದ ಹಿನ್ನೆಲೆ ಸಂತೆಯ ರೀತಿ ವಾತಾವರಣ ಸೃಷ್ಟಿಯಾಗಿತ್ತು, ಬಿಸಿಲು ತಾಪ ತಣಿಸಲು ಎಳನೀರು, ಕಬ್ಬಿನ ಹಾಲು, ಮಕ್ಕಳ ಆಟಿಕೆ ಮಾರುವವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಏರ್ ಪೋರ್ಸ್ ಸುತ್ತಮುತ್ತ 1500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ, ಅಗ್ನಿಶಾಮಕ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಜ್ಜುಗೊಳಿಸಲಾಗಿದೆ, ಇನ್ನೂ ಏರ್ ಪೋರ್ಟ್ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಮೂರು ಬದಲಿ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.