ETV Bharat / state

ಕಡಿಮೆಯಾಯ್ತು ಮಾವು ಇಳುವರಿ, ಜೇಬಿಗೆ ಕತ್ತರಿ!

ರಾಜ್ಯದಲ್ಲಿ ಈ ಬಾರಿ ಮಾವು ಇಳುವರಿ ಕಡಿಮೆಯಾಗಿದ್ದು, ಬೆಲೆ ಮಾತ್ರ ಗಗನಕ್ಕೇರಿದೆ. ಹಾಗಾಗಿ, ಸಿಹಿಯಾಗಿರುವ ಮಾವು ಒಂದೆಡೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದರೆ, ಮತ್ತೊಂದೆಡೆ ರೈತನನ್ನೂ ಚಿಂತೆಗೀಡುಮಾಡಿದೆ.

ಮಾವು ಉತ್ಪಾದನೆ ಕಡಿಮೆ, ಬೆಲೆ ಹೆಚ್ಚು
author img

By

Published : Apr 13, 2019, 7:36 PM IST

ಬೆಂಗಳೂರು: ರಾಜ್ಯದಲ್ಲಿ ಈ ಭಾರಿ ಮಾವು ಇಳುವರಿ ಕಡಿಮೆಯಾಗಿದೆ. ಹಾಗಾಗಿ ಸ್ವಾಭಾವಿಕವಾಗಿಯೇ ಮಾವುಪ್ರಿಯರು ಪ್ರತಿ ಕೆಜಿ ಮಾವು ಕೊಂಡುಕೊಳ್ಳಲು ಹೆಚ್ಚು ದುಡ್ಡು ಕೊಡಬೇಕು.

ರಾಜ್ಯಾದ್ಯಂತ ಸುರಿದ ಅಕಾಲಿಕ ಮಳೆ ಮಾವಿನ ಹೂಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹಾಗಾಗಿ ಈ ಬಾರಿ ಮಾವು ಫಸಲು ಕಡಿಮೆಯಾಗಲು ಮಳೆರಾಯನ ಅವಕೃಪೆಯೇ ಕಾರಣವಾಗಿದೆ. ಪರಿಣಾಮ ಮಾವು ಬೆಳೆಗಾರರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಜೊತೆಗೆ ಮಾವು ಪ್ರಿಯರ ಕಿಸೆಗೆ ಕತ್ತರಿ ಬೀಳುತ್ತಿದೆ. ಕಳೆದ ವರ್ಷ ಈ ವೇಳೆಗೆ ಹೆಚ್ಚು ಮಾವಿನ ಹಣ್ಣುಗಳು ಮಾರುಕಟ್ಟೆ ಬಂದಿದ್ದವು. ಬೆಳೆ ಹಾಗು ಬೆಲೆ ಎರಡೂ ಲಾಭದಾಯಕವಾಗಿಯೇ ಇತ್ತು. ಆದ್ರೆ ಈ ಬಾರಿ ಸನ್ನಿವೇಶ ವ್ಯತಿರಿಕ್ತವಾಗಿದೆ.

ಮಾವು ಇಳುವರಿ ಕಡಿಮೆ, ಬೆಲೆ ದುಬಾರಿ

ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಮಾವಿನ ಹಣ್ಣಿನ ಬೆಲೆ ಸುಮಾರು 60–80 ರೂ ಇದೆ. ರುಚಿಕಟ್ಟಾದ ಜಾತಿಯ ಮಾವಿನ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದ್ದು, ಸುಮಾರು ಒಂದು ಕೆಜಿ ಮಾವಿನ ಹಣ್ಣಿಗೆ 150 ರಿಂದ 200 ರೂಪಾಯಿ ಇದೆ. ಇದು ಬಡ ಮತ್ತು ಮಧ್ಯಮವರ್ಗದ ಮಾವು ಪ್ರಿಯರ ಪಾಲಿಗೆ ಕಹಿ ಅನುಭವ ನೀಡುತ್ತಿದೆ.

ಮಾವಿನ ಹಣ್ಣಿನಲ್ಲಿ ಅನೇಕ ತಳಿಗಳಿವೆ. ದಶೋರಿ, ಬಾದಾಮಿ ಜಾತಿಗೆ ಸೇರಿದ ಮಾವುಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಸಮಾರು ಕೆ.ಜಿಗೆ 80–150 ರೂ ಇದೆ. ಇತ್ತೀಚಿನ ವರ್ಷಗಳಲ್ಲಿ ಮಾವು ಫಸಲು ಕೂಡಾ ಕುಂಠಿತಗೊಳ್ಳುತ್ತಾ ಸಾಗುತ್ತಿದೆ. ಹೀಗಾಗಿ ಬೆಳೆಗಾರರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ‌ ಎಂದು ರೈತ ಶಂಕರಪ್ಪ ಆತಂಕ ವ್ಯಕ್ತಪಡಿಸಿದರು.

Intro:Slug: ಮಾವು ಉತ್ಪಾದನೆ ಕಡಿಮೆ, ಬೆಲೆ ಹೆಚ್ಚು

ಬೆಂಗಳೂರು: ರಾಜ್ಯಾದ್ಯಂತ ಇನ್ಮೆರಡು ತಿಂಗಳು ಮಾವಿನ ಹಣ್ಣುಗಳದ್ದೇ ದರ್ಬಾರು.. ಆದರೆ ಈ ಭಾರಿ ಮಾವಿನ ಉತ್ಪಾದನೆಯಲ್ಲಿ ಕಡುಮೆಯಾಗಿದ್ದು, ಬೆಲೆಗಳು ಗಗನಕ್ಕೇರಿವೆ.. ಅಲ್ಲದೇ ಮಾವಿನ ಉತ್ಪಾದನೆ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ರಾಜ್ಯಾದ್ಯಂತ ಅಕಾಲಿಕವಾಗಿ ಮಳೆ ಸುರಿದ ಪರಿಣಾಮ ಮಾವಿನ ಮರಗಳಲ್ಲಿ ಹೂ ಕೂಡ ಬಿಡದೇ ಫಸಲು ಕುಂಠಿತಗೊಂಡಿದೆ. ಮಾವು ಬೆಳೆಗಾರರಿಗೆ ನಷ್ಟವೂ ತಂದೊಡ್ಡಿದೆ. ಮಾವು ಸವಿಯುವ ಗ್ರಾಹಕರಿಗೆ ಬೆಲೆ ಜಾಸ್ತಿಯಿಂದ ಕೊಂಡುಕೊಳ್ಳಬೇಕೋ ಬೇಡವೋ ಅನ್ನೋ ಚಿಂತೆಯಲ್ಲಿದ್ದಾರೆ..

ಕಳೆದ ವರ್ಷ ಮಳೆ ಈ. ವರ್ಷ ಕ್ಕಿಂತ ಸ್ವಲ್ಪ ಚೆನ್ನಾಗಿ ಅಗಿತ್ತು.. ಇದರಿಂದ ಬೆಳೆ ಕೂಡ ಒಂದು ಹಂತದಲ್ಲಿ ಚೆನ್ನಾಗಿ ಆಗಿದ್ದು ಮಾವಿನ ಹಣ್ಣುಗಳು ಹೆಚ್ಚಾಗಿ ಮಾರುಕಟ್ಟೆಗೆ ಬಂದಿದ್ದವು.. ಆಗ ಮಾವಿನ ಹಣ್ಣಿನಲ್ಲಿ ರೋಗಾಣು ಅಂಶ ಇದೆ ತಿನ್ನಬಾರದು ಅಂತ ಹಬ್ಬಿದ ಗಾಳಿ ಸುದ್ದಿಗೆ ಮಾವಿನ ಹಣ್ಣುಗಳನ್ನು ರೈತರು ರಸ್ತೆಗೆ ಸುರಿಯುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.. ಆದರೆ ಇಂದು ಮಳೆ ಇಲ್ಲದೇ ಫಸಲು ಕಡಿಮೆಯಾಗಿ ಬೇಡಿಕೆ ಮಾತ್ರ ಹೆಚ್ಚಿದೆ.. ಇದರಿಂದ ಗ್ರಾಹಕರು ಹೆಚ್ಚು ಹಣ ನೀಡಿ ಹಣ್ಣನ್ನು ಖರೀದಿಸಲು ಮುಂದಾಗುತ್ತಾರೊಕ ಇಲ್ಲವೋ ಅನ್ನೋ ಅನುಮಾನ ರೈತರದ್ದಾಗಿದೆ..

ಮಾರುಕಟ್ಟೆಯಲ್ಲಿ ಇಂದು ಪ್ರತಿ ಕೆ.ಜಿ ಮಾವಿನ ಹಣ್ಣಿನ ಬೆಲೆ ಕಡಿಮೆ ಅಂದರೂ 60–80 ಇದೆ. ಅದೇ ಮಾವಿನ ಹಣ್ಣುಗಳ ವಿವಿಧ ಜಾತಿಯ ಹಣ್ಣುಗಳ ಬೆಲೆ ಕೂಡ ಹೆಚ್ಚಗಿದೆ.. ಸುಮಾರು ಒಂದು ಕೆಜಿ ಮಾವಿನ ಹಣ್ಣಿಗೆ 150 ರಿಂದ 200 ರೂಪಾಯಿ ಆಗಿದೆ.. ಈ ಬೆಲೆ ಬಡವರ ಪಾಲಿಗೆ ಮಾವು ಕಹಿ ಅನುಭವ ನೀಡುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಬೆಲೆ  50ರಷ್ಟು ಹೆಚ್ಚಾಗಿದ್ದು, ಮಾವು ಸವಿಯುವವರ ಸಂಖ್ಯೆ ಕಡಿಮೆಯಾಗಿದೆ.

ಮಾವಿನ ಹಣ್ಣಿನಲ್ಲಿ ಅನೇಕ ತಳಿಗಳಿವೆ. ದಶೋರಿ, ಬಾದಾಮಿ, ಜಾತಿಗೆ ಸೇರಿದ ಮಾವುಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾ ಗುತ್ತದೆ.. ಮಾರುಕಟ್ಟೆಯಲ್ಲಿ ಇದರ ಬೆಲೆ ಸಮಾರು 80–150 ಇದೆ. ಇತ್ತೀಚಿನ ವರ್ಷಗಳಲ್ಲಿ ಮಾವು ಫಸಲು ಕುಂಠಿತಗೊಂಡಿದೆ. ಬೆಳೆಗಾರರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ‌. ಈ ಸಲ ಏನಾಗುತ್ತದೊ ನೋಡಬೇಕು ಎಂದು ಮಾಲೀಕ ಶಂಕರಪ್ಪ ಆತಂಕ ವ್ಯಕ್ತಪಡಿಸಿದರುBody:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.