ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮಾಲ್ಗಳು ಎಂದಿನಂತೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಲ್ಲು ತೂರಾಟ ಸಂದರ್ಭದಲ್ಲಿ ಯಾವುದೇ ಹಾನಿ ಆಗಬಾರದು ಎಂದು ಪರದೆ ಹಾಕಿ ಯಥಾಸ್ಥಿತಿ ಮಳಿಗೆಗಳನ್ನು ತೆರೆಯಲಾಗುತ್ತಿದೆ.
ರೈತಪರ ಸಂಘಟನೆಗಳು ಹಾಗೂ ದಲಿತಪರ ಸಂಘಗಳು ಇಂದು ರಾಜ್ಯ ಬಂದ್ಗೆ ಕರೆ ನೀಡಿದ್ದು, ನಗರದ ಮಳಿಗೆಗಳು ಬಂದ್ಗೆ ಬೆಂಬಲ ಸೂಚಿಸದೆ ಅಂಗಡಿ ಮುಂಗಟ್ಟು ತೆರೆಯಲು ಪ್ರಾರಂಭಿಸಿವೆ. ಸಾಮಾನ್ಯವಾಗಿ ಬೆಳಗ್ಗೆ 10 ಗಂಟೆಗೆ ತೆರೆಯುವ ಅಂಗಡಿಗಳು ಇಂದು ಪರಿಸ್ಥಿತಿ ನೋಡಿ 11ಕ್ಕೆ ತೆರೆದಿವೆ.
ಲಾಕ್ಡೌನ್ನಿಂದ ಆದ ಆರ್ಥಿಕ ಹೊರೆಯಿಂದ ಅಂಗಡಿ ಮಳಿಗೆಗಳು ಯಾವುದೇ ಕಾರಣಕ್ಕೂ ಬಂದ್ ಕಾರಣ ಕಾರ್ಯ ಸ್ಥಗಿತಗೊಳಿಸಲ್ಲ ಎಂದು ನಿರ್ಧಾರ ಮಾಡಿದ್ದವು. ಈ ಕಾರಣ ಒಂದು ಗಂಟೆ ವಿಳಂಬವಾಗಿ ಪೊಲೀಸ್ ಭದ್ರತೆ ಇರುವ ಕಾರಣ ಎಂದಿನಂತೆ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ. ಮಾರುಕಟ್ಟೆಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಾಕ್ಡೌನ್ನಿಂದ ಆದ ಆರ್ಥಿಕ ಸಂಕಷ್ಟದಿಂದ ಇನ್ನೂ ಚೇತರಿಕೆ ಕಾಣದ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ.