ETV Bharat / state

ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರಕ್ಕೆ ಆತಂಕ: ಮತ್ತೆ ಐವರು ಕಾಂಗ್ರೆಸ್​ ಶಾಸಕರು ಬೆಂಗಳೂರಿಗೆ?

ಮಧ್ಯಪ್ರದೇಶ ಸರ್ಕಾರ ಪತನಕ್ಕೆ ನಡೆದಿರುವ ಆಪರೇಷನ್ ಕಮಲ ದಿನದಿಂದ ದಿನಕ್ಕೆ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿ ಪರಿಣಮಿಸುತ್ತಿದೆ. ಈಗಾಗಲೇ ನಾಲ್ವರು ಶಾಸಕರು ಬೆಂಗಳೂರಿನ ಹೊಟೇಲ್ ನಲ್ಲಿ ತಂಗಿದ್ದು, ಇಂದು ತಡರಾತ್ರಿ ಮತ್ತೆ ಐವರು ಕಾಂಗ್ರೆಸ್ ಶಾಸಕರು ಇವರನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

madyapradesh operation kamala
ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ
author img

By

Published : Mar 5, 2020, 11:25 PM IST

ಬೆಂಗಳೂರು: ಮಧ್ಯಪ್ರದೇಶ ಸರ್ಕಾರ ಪತನಕ್ಕೆ ನಡೆದಿರುವ ಆಪರೇಷನ್ ಕಮಲ ದಿನದಿಂದ ದಿನಕ್ಕೆ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿ ಪರಿಣಮಿಸುತ್ತಿದೆ. ನಾಲ್ವರು ಕಾಂಗ್ರೆಸ್ ಶಾಸಕರು ಬೆಂಗಳೂರಿನ ವೈಟ್​​​​ಫೀಲ್ಡ್​​ನಲ್ಲಿರುವ ಓಕ್​​ವುಡ್ ಹೊಟೇಲ್​​​ನಲ್ಲಿ ಸದ್ಯ ತಂಗಿದ್ದು, ಇಂದು ತಡರಾತ್ರಿ ಮತ್ತೆ ಐವರು ಕಾಂಗ್ರೆಸ್ ಶಾಸಕರು ಇವರನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರವನ್ನು ಕೆಡವಿ ಬಿಜೆಪಿ ತನ್ನ ಸರ್ಕಾರ ರಚನೆಯ ಕಸರತ್ತು ಆರಂಭಿಸಿದ್ದು, ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತೀವ್ರ ಆತಂಕಕ್ಕೆ ಒಳಗಾಗುವ ಸನ್ನಿವೇಶ ನಿರ್ಮಾಣವಾಗಿದೆ. ಸದ್ಯ ಬೆಂಗಳೂರಿನ ಖಾಸಗಿ ಹೊಟೇಲ್​​​ನಲ್ಲಿ ಕಾಂಗ್ರೆಸ್ ಶಾಸಕರಾದ ಸುರೇಂದ್ರ ಸಿಂಗ್ ಶೆರಾ, ರಘುರಾಜ್ ಕನ್ಸಾನ, ಹರದೀಪ್ ಸಿಂಗ್ ಡುಂಗಾ, ಬಿಸಾಹುಲ್ ಲಾಲ್ ಸಿಂಗ್ ಠಿಕಾಣಿ ವಾಸ್ತವ್ಯ ಹೂಡಿದ್ದಾರೆ. ಈ ನಾಲ್ವರು ಕಾಂಗ್ರೆಸ್ ಶಾಸಕರಿಗೆ ರಾಜ್ಯ ಬಿಜೆಪಿ ಸರ್ಕಾರ ಸೂಕ್ತ ಪೊಲೀಸ್ ಭದ್ರತೆ ನೀಡಿ ಕಾಪಾಡುತ್ತಿದೆ.

ಮಹದೇವಪುರ ಶಾಸಕ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಶಾಸಕರ ಭದ್ರತೆ ಹಾಗೂ ಅಗತ್ಯತೆಯನ್ನು ಪೂರೈಸುವ ಜವಾಬ್ದಾರಿ ವಹಿಸಿಕೊಂಡಿದ್ದು, ಸ್ಥಳೀಯ ಪೊಲೀಸರ ಮೂಲಕ ವಿಶೇಷ ಭದ್ರತೆಯನ್ನು ಕೂಡ ಒದಗಿಸಿದ್ದಾರೆ.

ಬೆಂಗಳೂರಿನ ವೈಟ್​​​​ಫೀಲ್ಡ್​​ನಲ್ಲಿರುವ ಓಕ್​​ವುಡ್ ಹೋಟೆಲ್

ಸಿಎಂ ಕಮಲ್​​ನಾಥ್ ಅವ​​ರಿಂದ 12 ಬಿಜೆಪಿ ಶಾಸಕರ ಹೈಜಾಕ್ ಆಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ, ಬೆಂಗಳೂರಿನಲ್ಲಿ ತಂಗಿರುವ ಶಾಸಕರು ವಾಪಸ್ ತೆರಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇದರ ಬದಲು ಇದೀಗ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರವೇ ಅಲ್ಲಾಡುವ ಮಾತು ಕೇಳಿ ಬರುತ್ತಿದೆ. ಇನ್ನೂ ಐದು ಶಾಸಕರು ರಾಜ್ಯಕ್ಕೆ ಆಗಮಿಸಿದರೆ ಕಾಂಗ್ರೆಸ್ ಸರ್ಕಾರ ಪತನದ ಹಾದಿ ತುಳಿಯುವುದು ನಿಶ್ಚಿತವಾಗಿದೆ. ಸದ್ಯ ಬೆಂಗಳೂರಿನ ಓಕ್​​ವುಡ್ ಹೊಟೇಲಿ​​​ನಲ್ಲಿ ತಂಗಿರುವ ಶಾಸಕರ ಭೇಟಿಗೆ ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ. ಅಲ್ಲದೆ ಶಾಸಕರು ಕೂಡ ಯಾರ ಭೇಟಿಗೂ ಆಚೆ ತೆರಳುತ್ತಿಲ್ಲ.

ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡರು ಅವರನ್ನು ಸಂಪರ್ಕಿಸುವ ಯತ್ನ ನಡೆಸಿದ್ದು, ಇದನ್ನು ಯಶಸ್ವಿಯಾಗಿ ವಿಫಲಗೊಳಿಸುವ ತಂತ್ರಗಾರಿಕೆಯನ್ನು ರಾಜ್ಯ ಬಿಜೆಪಿ ನಾಯಕರು ಕೇಂದ್ರ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ಹೆಣೆದಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್​​ನ್ನು ಹೊಟೇಲ್ ಸುತ್ತಲೂ ನೀಡಲಾಗಿದ್ದು, ಹೊರಗಿನವರಿಗೆ ಸುಲಭವಾಗಿ ಒಳ ಪ್ರವೇಶ ಸಾಧ್ಯವಿಲ್ಲ. ಈ ಹಿನ್ನೆಲೆ ನಾಳೆ ಹೊತ್ತಿಗೆ 5 ಕಾಂಗ್ರೆಸ್ ಶಾಸಕರು ಈಗಿರುವ ನಾಲ್ವರು ಶಾಸಕರನ್ನು ಸೇರಿಕೊಂಡರೆ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರಕ್ಕೆ ಇನ್ನಷ್ಟು ಆತಂಕ ಎದುರಾಗಲಿದೆ.

ಒಟ್ಟು 230 ಸದಸ್ಯರ ಸಂಖ್ಯಾ ಬಲ ಹೊಂದಿರುವ ಮಧ್ಯಪ್ರದೇಶದಲ್ಲಿ, 114 ಶಾಸಕರ ಸಂಖ್ಯಾ ಬಲ ಹೊಂದಿರುವ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಎಸ್​ಪಿ ಹಾಗೂ ಬಿಎಸ್​​ಪಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ. ಕಾಂಗ್ರೆಸ್​​ 114, ಬಿಎಸ್​​ಪಿ ಎರಡು , ಎಸ್​​ಪಿಯ ಓರ್ವ ಹಾಗೂ ನಾಲ್ವರು ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಒಟ್ಟು 121 ಶಾಸಕರ ಬಲವನ್ನು ಸರ್ಕಾರ ಹೊಂದಿದೆ. ಪ್ರತಿ ಪಕ್ಷವಾದ ಬಿಜೆಪಿ 107 ಶಾಸಕರ ಬಲವನ್ನು ಹೊಂದಿದ್ದು, ಪ್ರಸ್ತುತ ಎರಡು ಸ್ಥಾನಗಳು ಖಾಲಿ ಉಳಿದಿವೆ. ಇದೀಗ ಶಾಸಕರ ಆಪರೇಷನ್ ಆರಂಭವಾಗಿದ್ದು ಇದು ಯಾವ ಘಟ್ಟ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.