ETV Bharat / state

ಮೈಸೂರು ಮೇಯರ್ ಆಯ್ಕೆ ಲೋಪ ತನಿಖೆಗೆ ಮಧು ಯಕ್ಷಿಗೌಡ ನೇಮಕ: ಧೃವನಾರಾಯಣ್‌ - Dhruvanarayana lastest news

ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿಗೌಡ ಅವರು ಮೈಸೂರು ಮೇಯರ್ ಚುನಾವಣೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಮೈಸೂರಿನ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಪೊರೇಟರ್​ಗಳನ್ನು ಮಾತಾಡಿಸುತ್ತಾರೆ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಪೊರೇಟರ್​ಗಳನ್ನು ಮಾತಾಡಿಸಿ ಅವರೊಂದು ವರದಿ ಸಿದ್ದಪಡಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್‌ ಹೇಳಿದ್ದಾರೆ.

Meeting of young congress leaders at KPCC office
ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್‌
author img

By

Published : Mar 1, 2021, 11:01 PM IST

ಬೆಂಗಳೂರು: ಪ್ರಥಮ ಬಾರಿಗೆ ಯುವ ಕಾಂಗ್ರೆಸ್​ಗೆ ಆಯ್ಕೆಯಾದವರಿಗೆ ಇಂದು ಕೆಪಿಸಿಸಿ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್‌ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಯುವ ಕಾಂಗ್ರೆಸ್ ನಾಯಕರ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದರ ಜೊತೆಗೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಕೆಲಸ ಮಾಡಲು ಮಾರ್ಗದರ್ಶನ, ಎಲ್ಲರೂ ಒಗ್ಗಟ್ಟಿನ ಕೆಲಸ ಮಾಡಬೇಕು, ಅದೇ ರೀತಿಯಲ್ಲಿ ಸಂಘಟನೆ ಮಾಡಬೇಕು ಎಂಬ ಸಂದೇಶವನ್ನು ನೀಡಲಾಯಿತು. ಎಲ್ಲಾ ಜಿಲ್ಲೆಯ ಪದಾಧಿಕಾರಿ ಯುವ ಮುಖಂಡರು ಭಾಗಿಯಾಗಿದ್ರು ಎಂದು ವಿವರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್‌

ಮೈಸೂರು ಮೇಯರ್ ಚುನಾವಣೆ ಸಂದರ್ಭದಲ್ಲಿ ಆದ ಘಟನೆಗಳ ವರದಿಯನ್ನು ನೀಡಿದ್ದೇನೆ. ವರದಿಯಲ್ಲಿ ಆಂತರಿಕ ವಿಚಾರ ಇರುವುದರಿಂದ ಅದನ್ನು ಹೇಳಲು ಆಗಲ್ಲ. ಕಾನ್ಸಿಡೆನ್ಸಿಯಲ್ ರಿಪೋರ್ಟ್ ಇರುವುದರಿಂದ ಅದನ್ನು ಹೇಳುವುದಿಲ್ಲ ಎಂದರು.

ಎಐಸಿಸಿ ಕಾರ್ಯದರ್ಶಿ ಮಧುಯಕ್ಷಿಗೌಡ ಅವರು ಮೈಸೂರು ಮೇಯರ್ ಚುನಾವಣೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಮೈಸೂರಿನ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಪೊರೇಟರ್​ಗಳನ್ನು ಮಾತಾಡಿಸುತ್ತಾರೆ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಪೊರೇಟರ್​ಗಳನ್ನು ಮಾತಾಡಿಸಿ ಅವರೊಂದು ವರದಿ ಸಿದ್ದಪಡಿಸಲಿದ್ದಾರೆ ಎಂದರು.

ಓದಿ:ರಾಜ್ಯ ಬಿಜೆಪಿ ಶಿಸ್ತು ಸಮಿತಿಗೆ ತಂಡ ರಚಿಸಿದ ಕಟೀಲ್

ಈ ಮೂಲಕ ಮೈಸೂರು ಮೇಯರ್‌ ಆಯ್ಕೆ ಪ್ರಕರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಎಂಟ್ರಿ ಕೊಟ್ಟಂತಾಗಲಿದೆ. ಮೈಸೂರು ಮೇಯರ್ ಚುನಾವಣೆ ವಿಚಾರದ ವರದಿ ನೀಡುವಂತೆ ಮಧು ಯಕ್ಷಿಗೌಡರನ್ನು ಎಐಸಿಸಿ ನೇಮಕ ಮಾಡಿದೆ. ನಾಳೆ ಅವರು ಮೈಸೂರಿಗೆ ಆಗಮಿಸಲಿದ್ದಾರೆ.

ಇಂದು ಮಧ್ಯಾಹ್ನ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮೈಸೂರು ಮೇಯರ್ ಆಯ್ಕೆ ಸಂದರ್ಭದಲ್ಲಿ ನಾನು ಕಂಡ ಸನ್ನಿವೇಶವನ್ನು ನೀಡಿದ್ದೇನೆ. ಒಂದು ಗಂಟೆ ಕಾಲ ಅವರೊಂದಿಗೆ ಇದೇ ವಿಚಾರವಾಗಿ ಚರ್ಚಿಸಿದ್ದೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.