ಬೆಂಗಳೂರು: ಐಷಾರಾಮಿ ಬೆಂಜ್ ಕಾರು ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾದ ಘಟನೆ ಇವತ್ತು ಮುಂಜಾನೆ 4.30ರ ಸುಮಾರಿಗೆ ನಗರದ ಹೆಬ್ಬಾಳ ಮೇಲ್ಸೇತುವೆ ಬಳಿ ಸಂಭವಿಸಿದೆ. ಕೆಎ 05 ಎಜೆ 8227 ನಂಬರಿನ ಬ್ಲಾಕ್ ಬೋರ್ಡ್ ಕಾರು ಬೆಂಗಳೂರು ಇಂಟರ್ ನ್ಯಾಷನಲ್ ಏರ್ಪೋರ್ಟ್ನಿಂದ ಹೆಚ್ಎಸ್ಆರ್ ಲೇಔಟ್ ಕಡೆಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.
ಅಪಘಾತದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಅನಾಹುತ ತಪ್ಪಿದೆ. ಚಾಲಕ ಮತ್ತು ಕಾರಿನಲ್ಲಿದ್ದ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೈಕ್ನಿಂದ ಕೆಳಕ್ಕೆ ಬಿದ್ದ ಮಹಿಳೆ ತಲೆ ಮೇಲೆಯೇ ಹರಿದ ಲಾರಿ ಚಕ್ರ