ETV Bharat / state

3 ವರ್ಷದ ಪ್ರೀತಿ 3 ನಿಮಿಷದಲ್ಲಿ ಅಂತ್ಯ : ನೀ ನನಗೇ ಬೇಡ ಎಂದಳಾಕೆ.. ನೇಣಿಗೆ ಕೊರಳೊಡ್ಡಿದ ಪ್ರಿಯಕರ.. - ಬೆಂಗಳೂರು ಯುವಕ ಆತ್ಮಹತ್ಯೆ ಪ್ರಕರಣ

ಪ್ರೇಯಸಿ ಜೊತೆಗೆ ಖುಷಿ ಖುಷಿ ಆಗೇ ಇದ್ದ ಸಿದ್ದರಾಮ ಕಳೆದ ಮೂರು ತಿಂಗಳಿಂದ ವಿಚಿತ್ರವಾಗಿ ವರ್ತಿಸೋಕೆ ಶುರು ಮಾಡಿದ್ದ. ಮೊದಲಿನ ರೀತಿ ಲವಲವಿಕೆಯಿಂದ ಇರಲಿಲ್ಲ. ಮಾನಸಿಕ ಖಿನ್ನತೆಗೊಳಗಾಗಿದ್ದ. ಆದರೆ, ಕುಟುಂಬಸ್ಥರ ಜೊತೆಗೆ ಅವನು ಯಾವ ನೋವನ್ನೂ ಹಂಚಿಕೊಂಡಿರಲಿಲ್ಲ. ಏನಾಯ್ತು ಅಂತಾ ಕುಟುಂಬಸ್ಥರು ಕೇಳಿದರೂ ಉತ್ತರಿಸುತ್ತಿರಲಿಲ್ಲ..

lover-committed-suicide-in-rajarajeshwari-nagar-bangalore
ನೇಣಿಗೆ ಕೊರಳೊಡ್ಡಿದ ಪ್ರಿಯಕ
author img

By

Published : Sep 7, 2021, 3:42 PM IST

Updated : Sep 7, 2021, 4:16 PM IST

ಬೆಂಗಳೂರು : ಪ್ರೀತಿಸುತ್ತಿದ್ದ ಯುವತಿ ದೂರವಾಗಿದಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮದ್ದೂರು ನಿವಾಸಿ ಸಿದ್ದರಾಮ (33) ಮೃತ ದುರ್ದೈವಿ. ಬೆಂಗಳೂರಿನ ರಾಜರಾಜೇಶ್ವರಿನಗರದ ಮಾರಪ್ಪ ಲೇಔಟ್​ನಲ್ಲಿ ಅಕ್ಕ-ಭಾವನ ಮನೆಯಲ್ಲಿ ಸಿದ್ದರಾಮ ವಾಸವಿದ್ದ. ಕಾರ್ಪೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವಕ, ತಾನಾಯ್ತು ತನ್ನ ಕೆಲಸ ಆಯ್ತು ಅನ್ಕೊಂಡು ಜೀವನ ಸಾಗಿಸುತ್ತಿದ್ದ.

ಅಲ್ಲದೆ, ಯಾರೊಟ್ಟಿಗೂ ಹೆಚ್ಚು ಮಾತನಾಡದ ಸೌಮ್ಯ ಸ್ವಭಾವದವನು. ಹೀಗೆ ಇದ್ದವನಿಗೆ ತನ್ನ ಸಂಬಂಧಿಯೊಬ್ಬರ ಮಗಳ ಮೇಲೆ ಪ್ರೇಮಾಂಕುರವಾಗಿತ್ತು. ಸಂಬಂಧದಲ್ಲಿ ಅಕ್ಕನ ಮಗಳೇ ಆಗಿದ್ದರಿಂದ ಇಬ್ಬರ ಪ್ರೀತಿಗೆ ಯಾರ ವಿರೋಧವೂ ಇರಲಿಲ್ಲ. ಇಬ್ಬರ ಮದುವೆಗೆ ಮಾತುಕತೆ ಕೂಡ ನಡೀತಾ ಇತ್ತು. ಅನ್ಯೋನ್ಯವಾಗಿದ್ದ ಲವ್​ ಬರ್ಡ್ಸ್‌ ಒಟ್ಟಿಗೆ ದೇವಸ್ಥಾನ, ಬರ್ತ್‌ಡೇ ಆಚರಣೆ ಅಂತಾ ತುಂಬಾ ಸಂತೋಷವಾಗಿದ್ದರು.

ಆದ್ರೆ, ಹೀಗೆ ಇದ್ದ ಇಬ್ಬರ ಮಧ್ಯೆ ಅದೇನಾಯ್ತೋ ಏನೋ ಗೊತ್ತಿಲ್ಲ. ಮೂರು ತಿಂಗಳ ಹಿಂದೆ ನೀ ನನಗೆ ಬೇಡ ಎಂದು ಯುವತಿ ಹೇಳಿದಳಂತೆ. ಅಲ್ಲಿಂದ ಆಕೆಯ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಇದ್ದಕ್ಕಿದ್ದಂತೆ ಆತ ನಿನ್ನೆ ಮಧ್ಯಾಹ್ನ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಕ್ಕನ ಮಗಳು ಶಾಲೆಯಿಂದ ಬಂದು ನೋಡಿದಾಗ ವಿಷಯ ಗೊತ್ತಾಗಿದೆ.

ಪ್ರೇಯಸಿ ಜೊತೆಗೆ ಖುಷಿ ಖುಷಿ ಆಗೇ ಇದ್ದ ಸಿದ್ದರಾಮ ಕಳೆದ ಮೂರು ತಿಂಗಳಿಂದ ವಿಚಿತ್ರವಾಗಿ ವರ್ತಿಸೋಕೆ ಶುರು ಮಾಡಿದ್ದ. ಮೊದಲಿನ ರೀತಿ ಲವಲವಿಕೆಯಿಂದ ಇರಲಿಲ್ಲ. ಮಾನಸಿಕ ಖಿನ್ನತೆಗೊಳಗಾಗಿದ್ದ. ಆದರೆ, ಕುಟುಂಬಸ್ಥರ ಜೊತೆಗೆ ಅವನು ಯಾವ ನೋವನ್ನೂ ಹಂಚಿಕೊಂಡಿರಲಿಲ್ಲ. ಏನಾಯ್ತು ಅಂತಾ ಕುಟುಂಬಸ್ಥರು ಕೇಳಿದರೂ ಉತ್ತರಿಸುತ್ತಿರಲಿಲ್ಲ ಎಂದು ಮೃತನ ಚಿಕ್ಕಮ್ಮ ಸಿದ್ದಲಿಂಗಮ್ಮ ಬೇಸರ ವ್ಯಕ್ತಪಡಿಸುತ್ತಾರೆ.

ಸದ್ಯ ಮೃತ ಸಿದ್ದರಾಮ ಅಂತ್ಯಕ್ರಿಯೆ ಹುಟ್ಟೂರು ಮದ್ದೂರಿನಲ್ಲಿ ನೆರವೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ‌. ಆದ್ರೆ, ತನ್ನ ಪಾಡಿಗೆ ತಾನಿದ್ದ ಯುವಕ ಹುಚ್ಚು ಪ್ರೀತಿಯ ಬಲೆಗೆ ಬಿದ್ದು ಘೋರ ಅಂತ್ಯ ಕಂಡಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Last Updated : Sep 7, 2021, 4:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.