ETV Bharat / state

ಖಾಸಗಿ ಸ್ವಾಬ್ ಟೆಸ್ಟ್ ಲ್ಯಾಬ್​ಗಳಿಗೆ ಬೀಗ ಮುದ್ರೆ, ನೋಟಿಸ್ ಜಾರಿ

ಪಶ್ಚಿಮ ವಲಯ ವ್ಯಾಪ್ತಿಯ ಮೆಡಲ್ ಲ್ಯಾಬ್, ಆರತಿ ಲ್ಯಾಬ್, ಆರ್.ವಿ ಮೆಟ್ರೊಪಾಲಿಸ್ ಲ್ಯಾಬ್ ಹಾಗೂ ರಾಜರಾಜೆಶ್ವರಿ ನಗರ ವಲಯದ ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜು ಲ್ಯಾಬ್ ಸೇರಿ 4 ಲ್ಯಾಬ್‌ಗಳಿಗೆ ಆರೋಗ್ಯಾಧಿಕಾಗಳ ತಂಡ ಭೇಟಿ ನೀಡಿ ಲ್ಯಾಬ್ ಗಳಿಗೆ ಬೀಗ ಮುದ್ರೆ ಹಾಕಲಾಗಿದೆ.

Lockout to private swab test labs
ಖಾಸಗಿ ಸ್ವಾಬ್ ಟೆಸ್ಟ್ ಲ್ಯಾಬ್​ಗಳಿಗೆ ಬೀಗ ಮುದ್ರೆ, ನೋಟಿಸ್ ಜಾರಿ
author img

By

Published : Apr 27, 2021, 1:47 AM IST

ಬೆಂಗಳೂರು: ದಿನೇ ದಿನೇ ಕೊರೊನಾ ರೌದ್ರ ತಾಂಡವ ಆಡುತ್ತಿದ್ದು, ಜನರು ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಸ್ವಾಬ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ಈಗ ಕೆಲ ಲ್ಯಾಬ್​ಗಳಿಗೆ ಬೀಗ ಮುದ್ರೆ ಹಾಕಲಾಗಿದೆ.

ಈ ಮೊದಲು ಪರೀಕ್ಷೆಯ ಫಲಿತಾಂಶ ತಡವಾಗಿ ಬರುತ್ತಿದ್ದ ಕಾರಣ ಅನೇಕ ಅನಾಹುತಗಳು ಸಂಭವಿಸಿದ್ದು, ಬಿಬಿಎಂಪಿ ಎಲ್ಲಾ ಲ್ಯಾಬ್‌ಗಳಿಗೂ ಆದಷ್ಟು ಬೇಗ ಫಲಿತಾಂಶ ನೀಡಲು‌ ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಲ್ಯಾಬ್‌ಗಳಲ್ಲಿ 24 ಗಂಟೆಯೊಳಗಾಗಿ ಸ್ವಾಬ್ ಟೆಸ್ಟ್ ಫಲಿತಾಂಶವನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲು ಸೂಚನೆ ನೀಡಲಾಗಿತ್ತು. ಆದರೂ ಕೆಲ ಲ್ಯಾಬ್‌ಗಳು ಐಸಿಎಂಆರ್ ಪೋರ್ಟಲ್‌ನಲ್ಲಿ ತಡವಾಗಿ ಪರೀಕ್ಷಾ ಫಲಿತಾಂಶವನ್ನು ಅಪ್ಲೋಡ್ ಮಾಡುತ್ತಿರುವ ಹಿನ್ನೆಲೆ ಬಿಯು ಸಂಖ್ಯೆಯನ್ನು ತ್ವರಿತವಾಗಿ ರಚಿಸಲು ಸಾಧ್ಯವಾಗುತ್ತಿಲ್ಲ.

ಈ ಸಂಬಂಧ ಪಶ್ಚಿಮ ವಲಯ ವ್ಯಾಪ್ತಿಯ ಮೆಡಲ್ ಲ್ಯಾಬ್, ಆರತಿ ಲ್ಯಾಬ್, ಆರ್.ವಿ ಮೆಟ್ರೊಪಾಲಿಸ್ ಲ್ಯಾಬ್ ಹಾಗೂ ರಾಜರಾಜೆಶ್ವರಿ ನಗರ ವಲಯದ ಬಿಜಿಎಸ್ ಗ್ಲೋಬಲ್ ಮೆಡಿಕಲ್ ಕಾಲೇಜು ಲ್ಯಾಬ್ ಸೇರಿ 4 ಲ್ಯಾಬ್‌ಗಳಿಗೆ ಆರೋಗ್ಯಾಧಿಕಾಗಳ ತಂಡ ಭೇಟಿ ನೀಡಿ ಸ್ವಾಬ್ ಟೆಸ್ಟ್ ಫಲಿತಾಂಶವನ್ನು ಐಸಿಎಂಆರ್ ಪೋರ್ಟಲ್‌ನಲ್ಲಿ ತಡವಾಗಿ ಅಪ್ಲೋಡ್ ಮಾಡುತ್ತಿರುವ ಕಾರಣ ಶೋಕಾಸ್ ನೋಟೀಸ್ ನೀಡಿದ್ದು, ಪಶ್ಚಿಮ ವಲಯದ 2 ಲ್ಯಾಬ್‌ಗಳಾದ ಮೆಡಲ್ ಲ್ಯಾಬ್ ಹಾಗೂ ಆರತಿ ಲ್ಯಾಬ್ ಗಳಿಗೆ ಬೀಗ ಮುದ್ರೆ ಹಾಕಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.