ETV Bharat / state

ಮುಂದಿನ ದಿನಗಳಲ್ಲಿ ಲಾಕ್​​ಡೌನ್​​ ಇನ್ನಷ್ಟು ಕಠಿಣವಾಗಲಿದೆ : ಬಸವರಾಜ ಬೊಮ್ಮಾಯಿ

author img

By

Published : Jul 15, 2020, 5:41 PM IST

Updated : Jul 15, 2020, 6:24 PM IST

ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ರು. ಸಭೆಯಲ್ಲಿ ಬದಲಾಗಿರುವ ನಿಯಮಾವಳಿಗಳನ್ನು ಅಳವಡಿಸಿಕೊಳ್ಳುವ ಕುರಿತು ಚರ್ಚೆ ನಡೆಸಲಾಗಿದೆ..

ಗೃಹಸಚಿವ ಬಸವರಾಜ ಬೊಮ್ಮಾಯಿ
ಗೃಹಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು : ಮಹಾನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ಐದು ಜಿಲ್ಲೆಗಳಲ್ಲಿ ಲಾಕ್​ಡೌನ್​​ ಘೋಷಿಸಲಾಗಿದೆ. ಅಲ್ಲಿ ಯಾವ ರೀತಿಯ ಬಂದೋಬಸ್ತ್ ಇರಬೇಕು ಎಂಬ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ್ದೇನೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಭೆಯಲ್ಲಿ ಬದಲಾಗಿರುವ ನಿಯಮಾವಳಿಗಳನ್ನು ಅಳವಡಿಸಿಕೊಳ್ಳುವ ಕುರಿತು ಚರ್ಚೆ ನಡೆದಿದೆ. ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಅತ್ಯಂತ ಪ್ರಮುಖವಾದ ನಿರ್ಣಯವೆಂದ್ರೆ, 1700 ಹೋಮ್​​​ಗಾರ್ಡ್​ಗಳನ್ನು ನೇಮಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ. ಪೊಲೀಸರ ಕಾರ್ಯನಿರ್ವಹಣೆ ಹಾಗೂ ಕಾನೂನು ಸುವ್ಯವಸ್ಥೆಯ ಜೊತೆಗೆ ಲಾಕ್​​ಡೌನ್ ಸಂದರ್ಭದಲ್ಲಿ ಕಾರ್ಯನಿರ್ವಹಣೆಗೆ ಅನುಕೂಲಕರವಾಗಲಿ ಎಂದು ಇವರನ್ನು ನಿಯೋಜಿಸಿ ಕೊಳ್ಳಲಾಗುತ್ತಿದೆ.

ಗೃಹಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು ನಗರವೊಂದರಲ್ಲೇ 2000 ಹೋಮ್​​ಗಾರ್ಡ್​ಗಳ ಅಗತ್ಯವಿದೆಯೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ. ಇದರ ಜೊತೆಗೆ ಸಿವಿಲ್ ಡಿಫೆನ್ಸ್ ಸ್ವಯಂಸೇವಕರು ನಮ್ಮ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರದಲ್ಲಿಯೇ ನೋಂದಾಯಿತ 13 ಸಾವಿರ ಮಂದಿ ಇದ್ದಾರೆ. ಈ ಲಾಕ್​ಡೌನ್​​ ವೇಳೆಯಲ್ಲಿ ಅವರ ಉಪಯೋಗವನ್ನು ಸಹ ಪಡೆಯಲು ನಿರ್ಧರಿಸಿದ್ದೇವೆ ಎಂದರು.

ಕಂಟೇನ್​​ಮೆಂಟ್​​ ವಲಯದಲ್ಲಿ ಆಹಾರ ಪೂರೈಕೆ ಇತರೆ ಕಾರ್ಯಗಳಿಗೆ ಸ್ವಯಂಸೇವಕರ ಅಗತ್ಯವಿದೆಯೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಈ ಭಾಗಗಳಲ್ಲಿ ಸಿವಿಲ್ ಡಿಫೆನ್ಸ್ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತೇವೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದು, ಇಂದೇ ಈ ಸಂಬಂಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಅಗ್ನಿಶಾಮಕ ದಳದ ಸೇವೆಯನ್ನು ಕೂಡ ಈ ಎರಡು ದಿನ ಸದ್ಬಳಕೆ ಮಾಡಿಕೊಳ್ಳುತ್ತೇವೆ. ಪ್ರತಿದಿನ ಮಧ್ಯಾಹ್ನ 12ಗಂಟೆಗೆ ಸಂಪೂರ್ಣ ನಗರ ಬಂದ್ ಆದ ನಂತರ ಸ್ವಚ್ಛತಾ ಕಾರ್ಯಗಳಿಗೆ ಬಳಸಿಕೊಳ್ಳುತ್ತೇವೆ. 50ಕ್ಕೂ ಹೆಚ್ಚು ವಾಹನಗಳು ಹಾಗೂ ದ್ವಿಚಕ್ರ ವಾಹನಗಳನ್ನು ನಾವು 2 ಸರದಿಯಲ್ಲಿ ಬಳಸಿಕೊಳ್ಳುತ್ತೇವೆ. ಅಗ್ನಿಶಾಮಕ ವಿಭಾಗದ ಡಿಜಿಪಿ ಹಾಗೂ ಎಡಿಜಿಪಿಗೆ ಈ ಸಂಬಂಧ ಮಾಹಿತಿ ನೀಡಿದ್ದು, ಅವರು ನಾಳೆಯಿಂದ ವಾಹನಗಳನ್ನು ಸ್ವಚ್ಛತಾ ಸೇವೆಗೆ ನೀಡಲಿದ್ದಾರೆ.

ಸಂಚಾರಿ ವಿಭಾಗದ ಡಿಐಜಿ ರವಿಕಾಂತೇಗೌಡ ಜೊತೆಗೂ ಚರ್ಚಿಸಿದ್ದು, ಅವರು 200 ಆ್ಯಂಬುಲೆನ್ಸ್‌ಗಳನ್ನು ಸಿದ್ಧಪಡಿಸಿ ಬಿಬಿಎಂಪಿಗೆ ನೀಡಲಿದ್ದಾರೆ. ಇದನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬ ಜವಾಬ್ದಾರಿ ಪಾಲಿಕೆಗೆ ನೀಡಲಾಗುತ್ತದೆ. 100 ಆ್ಯಂಬುಲೆನ್ಸ್ ಸಿದ್ಧಪಡಿಸಲಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಎಲ್ಲಾ 200 ವಾಹನಗಳನ್ನು ಸಿದ್ಧಪಡಿಸಿ, ಪಾಲಿಕೆಗೆ ನೀಡುವ ಕಾರ್ಯ ಆಗಲಿದೆ. ಟೆಂಪೋ ಟ್ರಾವೆಲರ್ ವಾಹನವನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.

ಅಗತ್ಯ ಸೇವೆಗೆ ಸಮಸ್ಯೆ ಆಗದು : ಕೃಷಿ ಉತ್ಪನ್ನ ಹಾಗೂ ಕೈಗಾರಿಕಾ ಉತ್ಪನ್ನಗಳ ಸಾಗಾಣಿಕೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು, ಸೂಕ್ತ ಭದ್ರತೆ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಈ ಲಾಕ್​ಡೌನ್ ವೇಳೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಹಾಗೂ ಸಾಗಾಣಿಕೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.

ಪೊಲೀಸರ ಮನೋಬಲ ದೊಡ್ಡದಿದೆ : ರಾಜ್ಯದ ಪೊಲೀಸರ ಮನೋಬಲ ದೊಡ್ಡದಿದೆ. ಸಾಕಷ್ಟು ಪೊಲೀಸರು ಕೊರೊನಾಗೆ ತುತ್ತಾಗಿದ್ದಾರೆ. ಕೆಲವರು ಹೋಮ್​​ ಕ್ವಾರಂಟೈನ್​ನಲ್ಲಿ ಇದ್ದಾರೆ. ಇದಕ್ಕಾಗಿಯೇ ಇವರ ಸ್ಥಾನದಲ್ಲಿ ಹೋಮ್​​ಗಾರ್ಡ್​ಗಳನ್ನು ಬಳಸಲು ತೀರ್ಮಾನಿಸಿದ್ದೇವೆ. ಭದ್ರತೆ ಹಾಗೂ ಸುರಕ್ಷತೆ ವಿಚಾರದಲ್ಲಿ ಯಾವುದೇ ಆತಂಕ ಬೇಡ. ಇದಕ್ಕಾಗಿ 2000 ಮಂದಿ ಹೋಮ್​​ ಗಾರ್ಡ್​ಗಳನ್ನು ನೇಮಿಸಿಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ಜನರೇ ಹೆಚ್ಚು ಮುತುವರ್ಜಿ ಹಾಗೂ ಕಾಳಜಿವಹಿಸಿ ಲಾಕ್​​ಡೌನ್​ ಯಶಸ್ವಿಗೊಳಿಸಬೇಕು.

ಜನ ಸ್ವಪ್ರೇರಣೆಯಿಂದ ಬಂದ್ ಮಾಡಿ ಕೊರೊನಾ ವಾರಿಯರ್​​ಗಳಿಗೆ ಸಹಕಾರ ನೀಡಬೇಕು. ಯಾಕೆಂದರೆ, ಇದು ಹಿಂದಿನ ಲಾಕ್​​ಡೌನ್​​ ಮಾದರಿಯದಲ್ಲ. ಇಲ್ಲಿ ಸಾಕಷ್ಟು ಮಂದಿ ಕೊರೊನಾ ವಾರಿಯರ್​ಗಳೇ ಮಹಾಮಾರಿಗೆ ತುತ್ತಾಗಿದ್ದಾರೆ. ಲಾಕ್​​ಡೌನ್ ಆರಂಭವಾದ ಮೊದಲ ದಿನ ಇಂದು. ಒಂದಿಷ್ಟು ಗೊಂದಲಗಳು ಇದೆ, ಅದು ನಾಳೆಯ ಹೊತ್ತಿಗೆ ಸರಿಹೋಗಲಿದೆ. ಎಂದಿಗಿಂತ ಇಂದು ಸಾಕಷ್ಟು ಕಡಿಮೆ ವಾಹನಗಳಿವೆ ಮತ್ತು ಮಾರುಕಟ್ಟೆ ಪ್ರದೇಶಗಳು ಕಡಿಮೆ ಜನಸಂದಣಿಯಿಂದ ಕೂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವ ಕಾರ್ಯ ಮಾಡುತ್ತೇವೆ ಎಂದರು.

Last Updated : Jul 15, 2020, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.