ETV Bharat / state

ಲಾಕ್​ಡೌನ್​ನಿಂದ ಆರ್ಥಿಕವಾಗಿ ಕಂಗಾಲಾದ ಹೋಟೆಲ್ ಉದ್ಯಮಿಗಳು - ಹೋಟೆಲ್ ಉದ್ಯಮ

ಆರ್ಥಿಕವಾಗಿ ಈಗಾಗಲೇ ಕಂಗಾಲಾಗಿದ್ದ ಹೋಟೆಲ್ ಉದ್ಯಮಿಗಳು ಮುಂದಿನ ದಿನಗಳಲ್ಲಾದರೂ ಸರ್ಕಾರ ವಿನಾಯಿತಿ ನೀಡಿ ಹೋಟೆಲ್ ತೆರೆಯಲು ಅವಕಾಶ ನೀಡಿದರೆ ಬದುಕಿಕೊಳ್ಳುತ್ತೇವೆ ಎಂಬ ಮಾತುಗಳು ಹೋಟೆಲ್ ವರ್ತಕರಿಂದ ಕೇಳಿಬರುತ್ತಿದೆ.

lockdown effect  of hotel industry
ಆರ್ಥಿಕವಾಗಿ ಕಂಗಾಲಾದ ಹೋಟೆಲ್ ಉದ್ಯಮಿಗಳು
author img

By

Published : May 28, 2020, 5:15 PM IST

ಬೆಂಗಳೂರು: ಲಾಕ್​​​​ಡೌನ್ ಘೋಷಣೆಯಾದ ದಿನದಿಂದಲೂ ಬಂದ್​​ ಆಗಿರುವ ಹೋಟೆಲ್​​​​ಗಳು ಜೂನ್ 1ರತ್ತ ನಿರೀಕ್ಷೆಯ ನೋಟಗಳನ್ನು ಬೀರಿವೆ. ಕಳೆದ ಕೆಲ ವರ್ಷಗಳಿಂದ ತೀವ್ರ ನಷ್ಟದಲ್ಲಿ ಸಾಗಿ ಬರುತ್ತಿರುವ ಹೋಟೆಲ್​​ಗಳು, ಲಾಕ್​​ಡೌನ್​​​ ಘೋಷಣೆ ಆಗಿದ್ದರಿಂದ ಇನ್ನಷ್ಟು ಸಮಸ್ಯೆಗೆ ಒಳಗಾಗಿವೆ.

ಆರ್ಥಿಕವಾಗಿ ಈಗಾಗಲೇ ಕಂಗಾಲಾಗಿದ್ದ ಹೋಟೆಲ್ ಉದ್ಯಮಿಗಳು ಮುಂದಿನ ದಿನಗಳಲ್ಲಾದರೂ ಸರ್ಕಾರ ವಿನಾಯಿತಿ ನೀಡಿ ಹೋಟೆಲ್ ತೆರೆಯಲು ಅವಕಾಶ ನೀಡಿದರೆ ಬದುಕು ಕಟ್ಟಿಕೊಳ್ಳುತ್ತೇವೆ ಎಂಬ ಮಾತಗಳನ್ನು ಆಡುತ್ತಿದ್ದಾರೆ.

ಉದ್ಯಮ ಮೊದಲಿನಂತಾಗಲು ಇನ್ನೂ ಒಂದು ವರ್ಷ ಕಾಲಾವಧಿಯಾದರೂ ಬೇಕು ಎಂಬ ಮಾತನ್ನು ಹೋಟೆಲ್ ಮಾಲೀಕರು ಆಡುತ್ತಿದ್ದಾರೆ. ಈಗಾಗಲೇ 60ಕ್ಕೂ ಹೆಚ್ಚು ದಿನಗಳಿಂದ ಉದ್ಯೋಗವಿಲ್ಲದೆ ಕೆಲಸಗಾರರು ಕಂಗಾಲಾಗಿದ್ದಾರೆ. ಜೊತೆಗೆ ಕೊರೊನಾ ಆತಂಕ ಹೆಚ್ಚುತ್ತಿರುವ ಕಾರಣಕ್ಕೆ ಬಹುತೇಕ ಸಿಬ್ಬಂದಿ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದಾರೆ.

ಬೆಂಗಳೂರಿನ ಹೋಟೆಲ್​​​ಗಳಲ್ಲಿ ಕೆಲಸಕ್ಕೆ ಬರುವವರು ಬಹುತೇಕ ಉತ್ತರ ಭಾರತದವರು, ಇಲ್ಲವೇ ಮಂಗಳೂರು ಹಾಗೂ ಉತ್ತರ ಕರ್ನಾಟಕ ಮೂಲದವರಾಗಿದ್ದಾರೆ. ಇದೀಗ ಇವರೆಲ್ಲ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದು, ವಾಪಸ್ ಇರುವರನ್ನು ಕರೆ ತರುವುದು ಹೋಟೆಲ್ ಮಾಲೀಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬೆಂಗಳೂರು ಹೋಟೆಲ್ ಉದ್ಯಮಿ

ಬದುಕಲು ಅವಕಾಶ ಬೇಕು:

ಜೆ.ಪಿ. ನಗರದ ಪಾರ್ಕ್ ವ್ಯೂ ಹೋಟೆಲ್ ಮಾಲೀಕ ಪಿ. ನರಸಿಂಹ ಮೂರ್ತಿ ಮಾತನಾಡಿ, ಮೊದಲೇ ಹೋಟೆಲ್​​ಗಳಲ್ಲಿ ಕೆಲಸಗಾರರು ಇಲ್ಲದೇ ಸಮಸ್ಯೆ ಉಂಟಾಗಿತ್ತು. ಇದೀಗ ಅದು ಇನ್ನಷ್ಟು ಉಲ್ಬಣಗೊಂಡಿದೆ ಎಂದು ಹೇಳಿದರು.

ವಿವಿಧ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವ ಬ್ಯಾಚುಲರ್​​, ಟೆಕ್ಕಿಗಳು, ವಾರಂತ್ಯ ಹೋಟೆಲ್ ಆಹಾರ ಸೇವಿಸಲು ಬರುವ ನಾಗರಿಕರನ್ನು ನಂಬಿ ನಗರದ ಶೇ 90ರಷ್ಟು ಹೋಟೆಲ್​​​ಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಹೋಟೆಲ್ ತೆರೆದರೂ ಜನ ಬರುವುದು ಅನುಮಾನ ಎಂದರು.

ಈಗ ಹೋಟೆಲ್​​​​ಗೆ ಪಾರ್ಸಲ್​​​ಗೆ ಅವಕಾಶ ಇರುವ ಹಿನ್ನೆಲೆತಯಲ್ಲಿ ಕೇವಲ ಶೇ 10ರಷ್ಟು ಜನರು ಮಾತ್ರ ಬರುತ್ತಿದ್ದಾರೆ. ಹೋಟೆಲ್ ತೆರೆದರೆ ನಾವು ಸುರಕ್ಷಿತ ಸಾಮಾಜಿಕ ಅಂತರ ಕಾಪಾಡುತ್ತೇವೆ. ಸರ್ಕಾರ ಸೂಚಿಸುವ ಎಲ್ಲಾ ಸುರಕ್ಷತಾ ಕ್ರಮಗಳಿಗೆ ಬದ್ಧರಾಗಿ ನಡೆದುಕೊಳ್ಳುತ್ತೇವೆ ಎಂದರು.

ಉದ್ಯಮ ಪ್ರಗತಿಗೆ ಸರ್ಕಾರ ಪೂರಕ ಅವಕಾಶ ಮಾಡಿಕೊಡಬೇಕು. ಕೆಲಸಗಾರರನ್ನು ಹುಡುಕಿ ತರಬೇಕಿದೆ. ಐಟಿ ಕ್ಷೇತ್ರಕ್ಕೆ ಮನೆಯಿಂದ ಕೆಲಸ ನೀಡಿರುವುದರಿಂದ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ. ಉದ್ಯಾನಕ್ಕೆ ವಾಕಿಂಗ್ ಬರುವವರು, ಪಿಜಿಗಳಲ್ಲಿ ಒಬ್ಬರೇ ಉಳಿದವರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ.

ಹೋಟೆಲ್ ಅವಲಂಬಿತ ಗ್ರಾಹಕ ಸುಬ್ರಹ್ಮಣ್ಯ ಸ್ವಾಮಿ ಮಾತನಾಡಿ, ಲಾಕ್​​ಡೌನ್​​ ಘೋಷಣೆಯಾದ ದಿನದಿಂದ ಊಟಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿರುವ ನಮ್ಮಂತಹ ಬ್ಯಾಚುಲರ್ ಯುವಕರಿಗೆ ಊಟದ ದೊಡ್ಡ ಸಮಸ್ಯೆಯಾಗಿದೆ. ಆದಷ್ಟು ಬೇಗ ಸರ್ಕಾರ ಹೋಟೆಲ್​​​​​​ಗಳನ್ನು ತೆರೆಯಲು ಅವಕಾಶ ನೀಡಿದರೆ ಉತ್ತಮ. ಇಲ್ಲವಾದರೆ ಎಲ್ಲಾ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೂ ಮತ್ತೆ ಊರಿಗೆ ತರಬೇಕಾದ ಸ್ಥಿತಿ ಇದೆ ಎನ್ನುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.