ಬೆಂಗಳೂರು: ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ ಬರೆಯಲು ನಿಗದಿಪಡಿಸಿರುವ ವಯೋಮಿತಿಯನ್ನು ಹೆಚ್ಚಿಸಲು ಕೋರಿ ಯುವಕನೋರ್ವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾನೆ.
![Letter to Home Minister in blood to increase age limit for constable exam](https://etvbharatimages.akamaized.net/etvbharat/prod-images/kn-bng-08-blood-letter-script-7202806_30012021231411_3001f_1612028651_611.jpg)
ವಿಜಯಪುರದ ವಿದ್ಯಾಧರ ಬಿ.ಬಡಿಗೇರ್ ಎಂಬಾತ ರಕ್ತದಲ್ಲಿ ಪತ್ರ ಬರೆದಿದವ. 2021ನೇ ಸಾಲಿನಲ್ಲಿ ಅಧಿಸೂಚಿಸಲಾಗಿರುವ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಿ ಅಧಿಸೂಚನೆ ಹೊರಡಿಸಬೇಕೆಂದು ಗೃಹ ಸಚಿವರಿಗೆ ರಕ್ತದಲ್ಲಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಈ ಪತ್ರದ ಜೊತೆಗೆ ವಿದ್ಯಾಧರ ಬಡಿಗೇರ್, ಪತ್ರ ಬರೆಯಲು ಬಳಸಿದ ಡ್ರಿಪ್ ಕೇಬಲ್ ಸೆಟ್ ಕೂಡ ಕಳುಹಿಸಿಕೊಟ್ಟಿದ್ದಾನೆ. ಪತ್ರವು ನಗರ ಪೊಲೀಸ್ ಆಯುಕ್ತರ ಕಚೇರಿಗೆ ತಲುಪಿದೆ.