ETV Bharat / state

ಜ್ಞಾನ ಭಾರತಿ ವಿವಿ ಕ್ಯಾಂಪಸ್​ನಲ್ಲಿ ಚಿರತೆ‌ ಪ್ರತ್ಯಕ್ಷ, ವಿದ್ಯಾರ್ಥಿಗಳಿಗೆ ಎಚ್ಚರಿಕೆ: ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ರೋಶ

author img

By

Published : Jan 13, 2023, 7:29 PM IST

ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ಕೆಲ ದಿನಗಳಿಂದ ಪದೇ ಪದೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ಇಲಾಖೆ ಸಿಬ್ಬಂದಿ ಕನಿಷ್ಟ ಚಿರತೆ ಇರುವುದನ್ನು ಖಚಿತಪಡಿಸಿಕೊಳ್ಳಲು ಬಂದಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

leopard spotted in bengaluru university
ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ಚಿರತೆ ಪ್ರತ್ಯಕ್ಷ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದರಿಂದ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು, ವಿಶೇಷವಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯಗಳಲ್ಲಿ ನೆಲೆಸಿರುವಂತಹ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಜಾಗೃತರಾಗಬೇಕು. ಹಾಗೂ ರಾತ್ರಿ ವೇಳೆಯಲ್ಲಿ ಸಂಚರಿಸುವುದನ್ನು ನಿಯಂತ್ರಣಗೊಳಿಸುವಂತೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ಅರಣ್ಯ ಇಲಾಖೆ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗು ಸಾರ್ವಜನಿಕರು ಆಕ್ರೋಶ ಹೊರ ಹಾಕಿರುವುದು ಬೆಳಕಿಗೆ ಬಂದಿದೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್ಲಾದರೂ ಚಿರತೆಯ ಸಂಚಾರ ಕಂಡು ಬಂದಲ್ಲಿ ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಈಗಾಗಲೇ ಅರಣ್ಯ ಇಲಾಖೆಗೆ ಚಿರತೆಯನ್ನು ಸೆರೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದು ಬೆಂಗಳೂರು ವಿವಿ ಕುಲಸಚಿವ ಎನ್. ಮಹೇಶ್ ಬಾಬು ತಿಳಿಸಿದ್ದಾರೆ.

ಆವರಣದಲ್ಲಿ ಪ್ರತ್ಯಕ್ಷಗೊಂಡಿದ್ದ ಚಿರತೆ: ಕೆಲ ದಿನಗಳ ಹಿಂದೆ ವಿವಿ ಆವರಣದಲ್ಲಿರುವ ಎನ್‌ಎಸ್‌ಎಸ್‌ ಭವನದ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ವಾಯು ವಿಹಾರಿಗಳು ವಿವಿ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು. ಇದೀಗ ವಿದ್ಯಾರ್ಥಿಗಳ ಕಣ್ಣಿಗೂ ಚಿರತೆ ಕಂಡು ಕಂಡಿದೆ. ಎನ್‌ಎಸ್‌ಎಸ್‌ ಭವನದ ಹಿಂಭಾಗ ನೂರಾರು ಎಕರೆಯಲ್ಲಿ ಸ್ವಲ್ಪ ದಟ್ಟವಾದ ಕಾಡು ಇದೆ. ಹೀಗಾಗಿ ಚಿರತೆ ಅಲ್ಲಿಯೇ ಬೀಡು ಬಿಟ್ಟಿರಬಹುದು ಎಂದು ಶಂಕಿಸಲಾಗುತ್ತಿದೆ ಎಂದು ಮಹೇಶ್ ಬಾಬು ಹೇಳಿದ್ದಾರೆ.

ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ: ಕ್ಯಾಂಪಸ್‌ನಲ್ಲಿ ಚಿರತೆ ಇರುವ ಬಗ್ಗೆ ಇದುವರೆಗೆ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆ ಸಂಚಾರದ ಗುರುತಿನ ಬಗ್ಗೆ ಪರಿಶೀಲಿಸಿ ಖಚಿತಪಡಿಸುವ ಕೆಲಸ ಮಾಡಿಲ್ಲ ಎಂದು ವಿದ್ಯಾರ್ಥಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬನ್ನೇರುಘಟ್ಟ ಮೀಸಲು ಅರಣ್ಯ ಪ್ರದೇಶದಿಂದ ಆಗಮಿಸಿದ್ದ ಚಿರತೆಗಳು: ತಿಂಗಳ ಹಿಂದಷ್ಟೇ ಬೆಂಗಳೂರಿನ ಹೊರವಲಯದ ಕೆಂಗೇರಿ, ಕುಂಬಳಗೋಡು, ತುರಹಳ್ಳಿ ಭಾಗ ಹಾಗೂ ದೇವನಹಳ್ಳಿ ಸುತ್ತಮುತ್ತಲ ಭಾಗಗಳಲ್ಲಿ ಚಿರತೆಗಳು ಪ್ರತ್ಯಕ್ಷವಾಗಿ ಜನರು ಭಯಭೀತಿಗೊಂಡಿದ್ದರು. ಮುಖ್ಯವಾಗಿ ಎರಡು ಚಿರತೆಗಳು ನಗರದ ಸಮೀಪದಲ್ಲಿರುವ ಬನ್ನೇರುಘಟ್ಟ ಮೀಸಲು ಅರಣ್ಯದಿಂದ ತುರಹಳ್ಳಿ ಅರಣ್ಯ ಮತ್ತು ಸಮೀಪದ ಪ್ರದೇಶಗಳಿಗೆ ದಾರಿ ತಪ್ಪಿ ಬಂದಿದ್ದವು.

ವಿದ್ಯಾರ್ಥಿ, ಸಿಬ್ಬಂದಿಯಲ್ಲಿ ಮನೆ ಮಾಡಿದ ಆತಂಕ: ಡಿಸೆಂಬರ್‌ನಲ್ಲಿ ಬೆಂಗಳೂರಿನ ಸೋಮಾಪುರ ಸಮೀಪದ ತುರಹಳ್ಳಿ ರಾಜ್ಯ ಅರಣ್ಯದ ಸುತ್ತ ಎರಡು ವಾರಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಮತ್ತೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಸ್ಥಳೀಯ ಜನರು ಆತಂಕಗೊಡಿದ್ದರು. ಚಿರತೆ ಓಡಾಡುವ ವೀಡಿಯೋ ಹೊರಬಂದ ಬೆನ್ನಲ್ಲೆ ತುರಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಮತ್ತೊಂದು ಚಿರತೆ ಕಾಣಿಸಿಕೊಂಡಿರುವ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಲಾಗಿತ್ತು. ಈಗ ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ ಬಳಿಯು ಚಿರತೆ ಓಡಾಟ ಇದ್ದು, ಇದರಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ನೆಲಮಂಗಲದ ಭೂಸಂದ್ರ ಗ್ರಾಮದ ಬಳಿ ಮತ್ತೆ ಚಿರತೆ ಪ್ರತ್ಯಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.