ನೆಲಮಂಗಲ: ರಾಮನಗರ ಜಿಲ್ಲೆ ಮಾಗಡಿ ತಾಲೂಕು ಸೋಲೂರು ಹೋಬಳಿಯ ತಾಂಡೇನಪುರ ಗ್ರಾಮದಲ್ಲಿ ಚಿರತೆಯ ಆರ್ಭಟಕ್ಕೆ ರೈತರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ಕೆಲ ದಿನಗಳ ಹಿಂದೆ ತುಮಕೂರು ಜಿಲ್ಲೆ ಹೆಬ್ಬುರಿನ ಬಳಿ ಮಗುವಿನ ಮೇಲೆ ಚಿರತೆ ದಾಳಿ ಮಾಡಿ ಮಗು ಸಾವಿಗೀಡಾಗಿದ್ದು, ಗೊತ್ತಿದ್ದರೂ ಮಾಗಡಿ ತಾಲೂಕಿನ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ನಾವು ಮನೆಯಿಂದ ಹೊರ ಬಂದು ಜಾನುವಾರುಗಳನ್ನು ಮೇಯಿಸಲು, ಹೊಲಗಳ ಕಡೆ ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾದೆ. ಈಗಲಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ನಮ್ಮ ಗ್ರಾಮದಲ್ಲಿ ತೊಂದರೆ ಕೊಡುತ್ತಿರುವ ಚಿರತೆಯಿಂದ ನಮಗೆ ಮುಕ್ತಿ ನೀಡಿ ಎಂದು ಎಂದು ತಾಂಡೇನಪುರ ಗ್ರಾಮಸ್ಥರು ಮನವಿ ಮಾಡಿದ್ದಾರೆ.