ಬೆಂಗಳೂರು: ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಿ.ಸಿ.ಮಾಧುಸ್ವಾಮಿ ಈ ವಿಧೇಯಕ ಮಂಡಿಸಿದ್ದು, ಸದನ ಚರ್ಚೆಗೆ ಅಂಗೀಕರಿಸಿದೆ.
ಭೂ ಕಬಳಿಕೆ ಕಾಯಿದೆ–2011ರ ಹಾಗೂ 22ರ ಅಧಿಸೂಚನೆಗೆ ತಿದ್ದುಪಡಿ ತರಲಾಗಿದ್ದು, ನಗರ ಪಾಲಿಕೆ ಪರಿಮಿತಿ ಒಳಗಿನ ಸರ್ಕಾರ, ವಕ್ಫ್ ಅಥವಾ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳು, ಸ್ಥಳೀಯ ಪ್ರಾಧಿಕಾರಗಳು, ಸರ್ಕಾರದ ಒಡೆತನದ, ನಿಯಂತ್ರಣ, ವ್ಯವಸ್ಥಾಪನೆಗೆ ಒಳಪಟ್ಟ ಭೂಮಿಯ ವಿವಾದಗಳು ತಕ್ಷಣದಿಂದ ಕೊನೆಗೊಳಿಸುವುದಕ್ಕಾಗಿ ಈ ವಿಧೇಯಕ ಜಾರಿಗೆ ತರಲಾಗುತ್ತಿದೆ.
ಆದರೆ,ಬಿಬಿಎಂಪಿ ಹಾಗೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಸ್ವತ್ತುಗಳನ್ನು ಈ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ವಿಧೇಯಕದ ಪರ್ಯಾಲೋಚನೆ ಮುಂದಿನ ವಾರ ಉಭಯ ಸದನಗಳಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: 2023ರ ಜೂನ್ ಒಳಗೆ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆ: ಸಚಿವ ಸೋಮಣ್ಣ