ETV Bharat / state

ಆಸ್ತಿಗಾಗಿ ಸೊಸೆಗೆ ವಿಷ ಉಣಿಸಿದ್ರಾ?... ಮನೆ ಮುಂದೆ ಶವ ಇಟ್ಟು ಪೋಷಕರ ಪ್ರತಿಭಟನೆ - ಮನೆ ಮುಂದೆ ಶವ ಇಟ್ಟು ಪೋಷಕರ ಪ್ರತಿಭಟನೆ

ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ಸರೋಜಮ್ಮ ಎಂಬುವರು ಮೃತಪಟ್ಟಿದ್ದಾರೆ. ಇದೇ ಗ್ರಾಮದ ಮೃತಳ ಮಾವ ಚಿಕ್ಕಕೆಂಪಯ್ಯ, ಅತ್ತೆ ಸರಸ್ವತಮ್ಮ, ಭಾವ ಶಾಂತಕುಮಾರ್ ಹಾಗೂ ಆತನ ಸುನಿತಾ ಈ ಕೃತ್ಯ ವಿಷ ಉಣಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

. ಮನೆ ಮುಂದೆ ಶವ ಇಟ್ಟು ಪೋಷಕರ ಪ್ರತಿಭಟನೆ
author img

By

Published : Sep 13, 2019, 2:11 PM IST

ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ವೆಂಕಟಗಿರಿ ಗ್ರಾಮದಲ್ಲಿ 12 ಎಕರೆ ಆಸ್ತಿಗಾಗಿ ಸೊಸೆಗೆ ವಿಷ ಕುಡಿಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಸರೋಜಮ್ಮ ಎಂಬುವರು ಮೃತಪಟ್ಟಿದ್ದಾರೆ. ಇದೇ ಗ್ರಾಮದ ಮೃತಳ ಮಾವ ಚಿಕ್ಕಕೆಂಪಯ್ಯ, ಅತ್ತೆ ಸರಸ್ವತಮ್ಮ, ಭಾವ ಶಾಂತಕುಮಾರ್ ಹಾಗೂ ಆತನ ಸುನಿತಾ ಈ ಕೃತ್ಯ ವಿಷ ಉಣಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮನೆ ಮುಂದೆ ಶವ ಇಟ್ಟು ಪೋಷಕರ ಪ್ರತಿಭಟನೆ

ಈ ಸಂಬಂಧ ಸೂಕ್ತ ನ್ಯಾಯ ಒದಗಿಸಬೇಕು ಎಂದು ಮೃತಳ ಪೋಷಕರು ಚಿಕ್ಕಕೆಂಪಯ್ಯನ ಮನೆ ಮುಂದೆ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ ಮಂಗಳವಾರ ಸರೋಜಮ್ಮ ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ನಿನ್ನೆ ಸಂಜೆ ಸರೋಜಮ್ಮ ಸಾವನ್ನಪ್ಪಿದ್ದಾರೆ.ಈ ಕುರಿತು ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Intro:KN_BNG_01_13_Land_Death_Protest_Ambarish_7203301
Slug: ಆಸ್ತಿಗಾಗಿ ಸೊಸೆಗೆ ವಿಷ ಉಣಿಸಿದ್ರಾ..?
ಶವ ಇಟ್ಟುಕೊಂಡು ಮೃತಳ ಕುಟುಂಬದಿಂದ ಪ್ರತಿಭಟನೆ

ಬೆಂಗಳೂರು: 12 ಎಕರೆ ಆಸ್ತಿಗಾಗಿ ಸೊಸೆಗೆ ವಿಷ ಕುಡಿಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದ್ದು, ವಿಷ ಸೇವಿಸಿ ಸರೋಜಮ್ಮ ಮೃತಪಟ್ಟಿದ್ದಾರೆ. ಇದೇ ಗ್ರಾಮದ ಮೃತಳ ಮಾವ ಚಿಕ್ಕಕೆಂಪಯ್ಯ, ಅತ್ತೆ ಸರಸ್ವತಮ್ಮ, ಭಾವ ಶಾಂತಕುಮಾರ್ ಹಾಗೂ ಆತನ ಸುನಿತಾ ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಸೂಕ್ತ ನ್ಯಾಯ ಒದಗಿಸಬೇಕು ಎಂದು ಮೃತಳ ಕುಟುಂಬಸ್ಥರು ಮೃತದೇಹವನ್ನಿಟ್ಟು ಚಿಕ್ಕಕೆಂಪಯ್ಯನ ಮನೆ ಮುಂದೆ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ. ಅಂದಹಾಗೆ ವೆಂಕಟಗಿರಿಕೋಟೆ ಗ್ರಾಮದ ಚಿಕ್ಕಕೆಂಪಯ್ಯ ಹಾಗೂ ನಾರಾಯಣಪ್ಪ ಅಣ್ಣ ತಮ್ಮಂದಿರಾಗಿದ್ದು, ಚಿಕ್ಕಕೆಂಪಯ್ಯನಿಗೆ ಇಬ್ಬರು ಗಂಡು ಮಕ್ಕಳಿದ್ದರು. ಇತ್ತ ನಾರಾಯಣಪ್ಪ ಮೂರು ಮದುವೆಯಾಗಿದ್ದು, ಕೊನೆಯ ಹೆಂಡತಿ ಮುನಿಯಮ್ಮನ ಮಗ ಮಂಜುನಾಥ್ ಹಾಗೂ ಮೃತಪಟ್ಟಿರುವ ಸರೋಜಮ್ಮ ತಮ್ಮ ಚಿಕ್ಕ ಮಾವ ಚಿಕ್ಕಕೆಂಪಯ್ಯನೊಂದಿಗೆ ವಾಸವಿದ್ದರು.

ನಾರಾಯಣಪ್ಪ ಹಾಗೂ ತಮ್ಮ ಮೂವರು‌ ಹೆಂಡತಿಯರು ಈ ಹಿಂದೆಯೇ ಮೃತಪಟ್ಟ ಕಾರಣ ಮಂಜುನಾಥ್ ಹಾಗೂ ಮೃತ ಸರೋಜಮ್ಮ ಚಿಕ್ಕ ಮಾವನೊಂದಿಗೆ ಇರಬೇಕಾಗಿತ್ತು. ಇನ್ನು ನಾರಾಯಣಪ್ಪನ ಉಳಿದ ಇಬ್ಬರು ಹೆಂಡತಿಯರ ಮಕ್ಕಳು ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು. ಈ ವೇಳೆ ನಾರಾಯಣಪ್ಪನ ಕೊನೆಯ ಹೆಂಡತಿಯ ಮಗ ಹಾಗೂ ಸೊಸೆ ಸರೋಜಮ್ಮನನ್ನು ಮುಗಿಸಿದ್ರೆ ಆಸ್ತಿ ನಮಗೆ ಬರತ್ತದೆ ಎಂದು ಹುನ್ನಾರ ಮಾಡಿದ ಚಿಕ್ಕ ಕೆಂಪಯ್ಯ ಸರೋಜಮ್ಮನಿಗೆ ವಿಷ ನೀಡಿ ಸಾಯಿಸಿದ್ದಾರೆ ಎಂದು ಮೃತಳ ಸಂಬಂಧಿಕರು ದೂರಿದ್ದಾರೆ.  ಕಳೆದ ಮಂಗಳವಾರ ಸರೋಜಮ್ಮ ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ನೆನ್ನೆ ಸಂಜೆ ಸರೋಜಮ್ಮ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಸೂಕ್ತ ನ್ಯಾಯ ಸಿಗುವವರೆಗೆ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಧರಣಿಗೆ ಮುಂದಾಗಿದ್ದಾರೆ. ಈ ಕುರಿತು ವಿಜಯಪುರ ಪೊಲೀಸ್ ಠಾಣೆಯಲ್ಲಿ ಚಿಕ್ಕಕೆಂಪಯ್ಯ, ಸರಸ್ವತಮ್ಮ, ಶಾಂತಕುಮಾರ್ ಹಾಗೂ ಸುನಿತಾ ವಿರುದ್ದ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.

ಬೈಟ್: ಮಂಜುನಾಥ್, ಮೃತಳ ಗಂಡ
ಬೈಟ್:ನಂಜೇಗೌಡ, ಮೃತಳ ಸಂಬಂಧಿ
ಬೈಟ್: ರವಿಕುಮಾರ್, ಮೃತಳ ತಮ್ಮ
ಬೈಟ್: ನಾರಾಯಣಮ್ಮ, ಮೃತಳ ಸಂಬಂಧಿBody:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.