ETV Bharat / state

ಲಾಲ್ ಬಾಗ್ ಫ್ಲವರ್ ಶೋಗೆ ಜನಸಾಗರ, ಕಡೆಯ ದಿನ 2 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ

ಕೋವಿಡ್ ಲಾಕ್​ಡೌನ್ ನಂತರ ಮೊದಲ ಬಾರಿ ನಡೆದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಸಿಲಿಕಾನ್ ಸಿಟಿ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Lal Bagh Flower Show
ಪುನೀತ್ ಸ್ಪೇಷಲ್​​ ಫ್ಲವರ್ ಶೋ
author img

By

Published : Aug 15, 2022, 7:30 PM IST

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್ ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದ ಕಡೆಯ ದಿನವಾದ ಇಂದು ಜನರು ಮುಗಿಬಿದ್ದು ವೀಕ್ಷಿಸಿದರು. ಅನೇಕರು ಮಕ್ಕಳೊಂದಿಗೆ ಕುಟುಂಬಸಮೇತರಾಗಿ ಆಗಮಿಸಿದ್ದರು. ಸರ್ಕಾರಿ ರಜೆ ಮತ್ತು ಕೊನೆಯ ದಿನವಾದ ಕಾರಣಕ್ಕೆ ಫ್ಲವರ್ ಶೋ ತುಂಬಿ ತುಳುಕುತ್ತಿತ್ತು.

Lal Bagh Flower Show
ಸಸ್ಯಕಾಶಿಯತ್ತ ಹರಿದುಬಂದ ಜನಸಾಗರ

ಡಾ.ರಾಜ್ ಕುಮಾರ್ ಅವರ ಗಾಜನೂರು ಮನೆ, ಪುನೀತ್ ನಡೆಸುತ್ತಿದ್ದ ಆಶ್ರಮ ಈ ಸಲದ ಫ್ಲವರ್ ಶೋ ವಿಶೇಷತೆಯಾಗಿದೆ. ಈ ಎರಡು ಕಟ್ಟಡಗಳ ಪ್ರತಿಕೃತಿಯನ್ನು ಸಂಪೂರ್ಣವಾಗಿ ಹೂಗಳಿಂದಲೇ ನಿರ್ಮಿಸಲಾಗಿತ್ತು. ಕಳೆದ ಒಂಬತ್ತು ದಿನಗಳಿಂದ 10 ಲಕ್ಷಕ್ಕೂ ಹೆಚ್ಚು ಜನರು ಪ್ರದರ್ಶನ ವೀಕ್ಷಿಸಿದ್ದಾರೆ. ಇಂದು ಒಂದೇ ದಿನ 2 ಲಕ್ಷಕ್ಕೂ ಅಧಿಕ ಜನ ಭೇಟಿ ಕೊಟ್ಟಿದ್ದಾರೆ.

Lal Bagh Flower Show
ಸಸ್ಯಕಾಶಿಯತ್ತ ಹರಿದುಬಂದ ಜನಸಾಗರ

ಜನರು ಸಸಿಗಳ ಖರೀದಿಗೂ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಲಾಲ್ ಬಾಗ್ ನರ್ಸರಿಯೂ ಗ್ರಾಹಕರಿಂದ ಗಿಜಿಗಿಡುತ್ತಿತ್ತು. ಲಾಲ್ ಬಾಗ್ ಸುತ್ತಮುತ್ತ ಇಡೀ ದಿನ ಟ್ರಾಫಿಕ್ ಜಾಮ್ ಕಂಡುಬಂತು. ಸಂಚಾರಿ ಪೊಲೀಸರು ಟ್ರಾಫಿಕ್ ನಿರ್ವಹಣೆಗೆ ಹರಸಾಹಸಪಟ್ಟರು.

ಇದನ್ನೂ ಓದಿ: ಲಾಲ್​​​​​ಬಾಗ್ ಫಲಪುಷ್ಪ ಪ್ರದರ್ಶನ: ಮೆಟ್ರೋ ಟಿಕೆಟ್ ದರದಲ್ಲಿ ರಿಯಾಯಿತಿ, ಪೇಪರ್ ಟಿಕೆಟ್ ಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.